ಬಾಳನೌಕೆ
ಬಾಳ ಪಯಣದ ಹಾದಿಯಲ್ಲಿ
ನೋವು ನಲಿವುಗಳು ಸಹಜ
ಅರಿತು ಬಾಳಿದರೆ ಬದುಕಿನಲ್ಲಿ
ಸ್ವರ್ಗ ಇಲ್ಲಿಯೇ ಸಿಗುವುದು ಮನುಜ!
ಬಾಳ ನೌಕೆಯ ಪಯಣದಲಿ
ಸೋಲು ಗೆಲುವಿನ ಆಟವಿದು
ಎಲ್ಲಾ ಮರೆತು ಕೂಡಿಬಾಳಿದರೆ
ಜಯವು ನಮಗೆ ದೊರೆಕುವುದು!
ಸಿಹಿ ನೆನಪುಗಳ ಜೊತೆಯಲ್ಲಿರಬೇಕು
ಕಹಿನೆನಪುಗಳ ಗುರುತು
ನಗುನಗುತ್ತ ಬಾಳುತ್ತಿರಬೇಕು
ನಾಳೆಯ ಚಿಂತೆಯ ಮರೆತು!
ಬಾಳಿನಲ್ಲಿ ಗುರಿಯು ಮೊದಲಾಗಲಿ
ಆ ಗುರಿಯತ್ತ ಮನಸ್ಸುನೆಟ್ಟಿರಲಿ
ಬದುಕಿನ ಪ್ರತಿ ಕ್ಷಣಗಳು
ಹರಿಯುವ ನೀರಿನಂತೆ ಸಾಗುತ್ತಿರಬೇಕು!
ಪ್ರಿಯಾಂಕ✍
- ಪ್ರಿಯಾಂಕ
18 Nov 2017, 03:04 pm
Download App from Playstore: