ವಾನರ ತಾಯಿ

ಇಂಚಿಂಚು ಮನದಲ್ಲಿ ಅಡಗಿಹುದು
ನಿನ್ನ ಭಾವಿ ರೂಪ ಕಂದಾ ಅಲೆದಾಡುತಿಹೆನು
ನಾನಿಂದು ತುತ್ತು ಆಹಾರಕ್ಕಾಗಿ ನಿನ್ನ ಪುಟ್ಟ ಹೊಟ್ಟೆ ತುಂಬಿಸಲು ನನ್ನ ಹೊಟ್ಟೆಯಲ್ಲಿ ನೀನಿರುವುದಕ್ಕಾಗಿ.

ದೇವರ ದರುಶನ ಪಡೆಯಲು ಬರುವರು ಭಕ್ತರು ಗುಂಪು ಗುಂಪಾಗಿ ಕೊಂಚ ನೋವಿನಲಿ ಬೆಂದ ಬೆವರಿನಲಿ ಮನದಿ ದುಃಖದಲಿ.

ನನ್ನ ನೋಡಿ ಹೆದರುವರು ಕೆಲವರು ನನ್ನ ಹೀನ ಸ್ಥಿತಿಯ ನೋಡಿ ಅನ್ನವಿತ್ತವರು ಹಲವರು ಮೊಟ್ಟ ಮೊದಲಿಗೆ ಮೆಟ್ಟಿಲತ್ತಿಹೇನು ದೇವರ ಪಾದಕೆ ನಮಿಸಲೆಂದು ಇಂದು ನಿನ್ನ ರಕ್ಷಣೆ ಮಾಡೆಂದು ನನ್ನೊಳಗೆ ಮಗುವೇ.

ಊರಮಂದಿ ನಾರುಹಂದಿ ಮಾರುಹೋದರು ಆಸ್ತಿ ಅಂತಸ್ತಿಗಿಂದು ಬೆಟ್ಟ ಬಗೆದು ಗುಡ್ಡ ಅಗೆದು ಮರಗಳಲ್ಲಿನ ನಮ್ಮ ಮನೆಗಳ ಮಾರಿ ಪಟ್ಟರು ನನ್ನ ಕಣ್ಣಹನಿಯ ಸುಟ್ಟ ಸಂತೋಷ ದುಡ್ಡಿನ ರೂಪದಲ್ಲಿ ಅಂದು.

ತಂದೆ ಇಲ್ಲದೆ ನೀನು ತಬ್ಬಲಿಯಾಗದಿರು, ತುಂಬು ಪರಿವಾರವಿಲ್ಲವೆಂದು ತಬ್ಬಿಬ್ಬಾಗದಿರು ಕೂಸೆ ನಾನೊಬ್ಬಳಿರುವೆ ನಿನ್ನವ್ವ ಮುತ್ತಾದರು ನಿನಗೆ ತುತ್ತಾದರು ನಿನಗೆ ನನ್ನ ಒಡಲ ಕುಡಿಯೇ.

- ಚುಕ್ಕಿ

19 Nov 2017, 11:46 pm
Download App from Playstore: