ಕಾರಣ ತಿಳಿಸುವವರಾೄರು?
ಮುದ್ದು ಮೊಗದ ನಗುವ ನೋಡಲು
ಕಾಯುತ್ತಿರುವನು ನೋಡು ಚೆಂದಮಾಮ
ನಿದ್ದೆ ಮಾಡದೇ ಬೆಳಕು ಚೆಲ್ಲುತ
ಹೂನಗುವ ಬೀರುತ್ತಿರುವನಲ್ಲಿ ಆ ಚಂದ್ರಮ!
ಮುದ್ದು ಕಂದ ಒಮ್ಮೆ ಎದ್ದು ಬಾರೋ
ಕೂಗುತ್ತಿಹನು ನೋಡಲ್ಲಿ ಬಾನಿನಲ್ಲಿ
ಅವನನ್ನೇ ನೋಡುತ್ತ, ನಿನ್ನಾಟವ ಆಡುತ್ತ
ನಿದ್ದೆ ಮಾಡು ನನ್ನ ಮಡಿಲಿನಲ್ಲಿ!
ಮೌನವ ಹೊದ್ದು ಮಲಗಿರುವೆ ಏತಕೆ
ನಗುನಗುತ್ತ ಕಣ್ತೆರೆದೊಮ್ಮೆ ನೋಡಬಾರದೇ...
ಬೀಸುವ ಗಾಳಿಯು ತನ್ನ ಕೆಲಸವ ಮರೆತಂತಿದೆ
ಕೇಳುವವರ್ಯಾರಿಲ್ಲ? ನೀನೊಮ್ಮೆ ಕಾರಣ ತಿಳಿಯಬಾರದೇ?....
ಬದುಕಿನ ಯಾತ್ರೆಯ ಮುಗಿಸಿ ಹೋಗುತ್ತಿರುವೆ ಎಲ್ಲಿಗೆ
ಕಾರಣ ತಿಳಿಯದೇ ಕಂಗಲಾಗಿರುವರು ನೋಡಿಲ್ಲಿ
ನೀ ಬರದೇ ಮುನಿಸಿಕೊಂಡ ಚಂದಮಾಮ
ಹಿಂತಿರುಗಿ ಹೋದನು ಮೋಡದ ಮರೆಯಲ್ಲಿ!
ಪ್ರಿಯಾಂಕ✍
- ಪ್ರಿಯಾಂಕ
20 Nov 2017, 10:20 am
Download App from Playstore: