ನಾನೆ ಎಳಸು?
ಗೆಳತಿ ನಿನ್ನ ಮುಂದೆ ಮಂಡಿಯೂರಿ ಕೋರಿದೆ
ನನ್ನ ಸ್ವಾಭಿಮಾನವ ಒದ್ದು ಬಂದೆ
ದುಖಃದಲ್ಲೂ ನಗೆಯ ಬೀರಿದೆ
ಏಕೆ ಗೆಳತಿ ಕೆಂಪು ಬಾವುಟ ತೋರಿದೆ
ಒಮ್ಮೆ ಹುಸಿನಗೆ ಒಮ್ಮೆ ಹಸಿನಗೆ ಚೆಲ್ಲಿ
ಕನಸು ಬಿತ್ತಿ ಆಸೆ ತೋರಿದೆ
ನಂಬಿ ನಾನು ಕನಸು ಹೊತ್ತು ಬಂದೆ
ನಿನ್ನ ನಗುವ ನಂಬಿ ಬಂದ ನನ್ನೆ ಎಳಸು ಎಂದು ದೂರಿದೆ
- ನಟರಾಜ ಕೆ
20 Nov 2017, 05:35 pm
Download App from Playstore: