ಮಧುರ

ಬರೆದೆ ನಾನು ನಿನ್ನ ನೆನಪಲಿ
ಹೊಳೆದ ನೂರು ಪದಗಳ
ಎಲ್ಲಾ ಸೇರಿ ಇಂದು ಬಾನಲಿ
ಹಕ್ಕಿ ಚಿಲಿಪಿಲಿ ಅಂಗಳ || ಪ ||

ಮೌನ ಮುರಿದು ಹೃದಯದೊಳಗೆ
ಪ್ರೀತಿ ಬಿತ್ತಿ ಹೋದೆ ನೀನು
ಅದುವೆ ಇಂದು ಮನದ ಒಳಗೆ
ಚಿಗುರಿ ಹಬ್ಬಿದೆ ನೋಡು ನೀನು || ಪ ||

ನಾಳೆ ನಮ್ಮದು ಎನ್ನುತ್ತಿರಲು
ಒಳಗೆ ಕುಣಿದಿದೆ ನವಿಲು
ದೂರದಲ್ಲಿ ಇದ್ದರೂನು
ಬೆಸೆದು ಬಿಟ್ಟಿದೆ ಕಾಮನಬಿಲ್ಲು

- ನೆನಪಿನ ನಾವಿಕ

22 Nov 2017, 05:33 pm
Download App from Playstore: