ನಮ್ತಾಯಿ....!

ತುಂಗೆಯಾಗಿ ಭದ್ರೆಯಾಗಿ ಬಂದಳೀಕೆ ಮಾಗಿ ಮಾಗಿ
ಬರವ ತಣಿಸೆ ನೆಲವ ಉಣಿಸೆ ಸಡಗರವು ಹಿಗ್ಗಿ ಹಗ್ಗಿ

ಬರದ ಬಿಸಿ ಚಿಂತೆ ಹುಸಿ ನೆಲವು ಕಸಿ ಸುಗ್ಗಿ ಸುಗ್ಗಿ
ಕಲ್ಲುಗುಂಡಿಯಲ್ಲಿ ಕುಗ್ಗಿ ಹರಿದಳಾಕೆ ತಗ್ಗಿ ಬಗ್ಗಿ

ಕೃಷಿಯ ಖುಷಿಯ ಕಸಿಕಟ್ಟುತ
ನೆಲದ ಮಗದ ಹಗೆಯಾಗುತ

ಕೇಳಿದಲ್ಲಿ ಕೈಚಾಚಿ ನೀರೊದಗಿಸಿ ನೆಲವು ಹಸಿ
ನಮ್ಮೆಲ್ಲರ ದೇವತೆ ತುಂಗ ಭದ್ರೆ ನಮಸ್ತೆ

- Dev

22 Nov 2017, 05:35 pm
Download App from Playstore: