ಹೇ ಗೆಳೆಯನೇ....

ಹುಸಿ ಕೋಪವ ನೀ ತೋರದಿರು ಓ ಮುದ್ದು ಮೊಗದವನೇ..
ತುಂಟು ನಗೆಯ ಬೀರುತ್ತಿರು ಓ ಗುಳಿ ಕೆನ್ನೆಯ ಹುಡುಗನೇ..
ತೇಲಾಡಿದೆ ನನ್ನೀ ಮನ ನಿನ್ನ ನೆನೆದಾಗ..
ಹಿಡಿಯಲು ಆಗುತ್ತಿಲ್ಲ ನನ್ನೊಳಗಿನ ಭಾವನೆಗಳ..
ನಿನಗಂತಲೇ ಬರೆದಿರುವೆ ಈ ಅರ್ಥವಿಲ್ಲದ ಸಾಲುಗಳ..
ನೀನಿರದ ಈ ಬದುಕು ನೀರಿಲ್ಲದ ಕೆರೆಯಂತೆ..
ನಾ ಅದರೊಳಗೆ ನೀರಿಗಾಗಿ ಕಾದಿರುವೆ ಮೀನಿನಂತೆ..

- ನಮಿತ ಗಟ್ಟಿ

23 Nov 2017, 10:44 am
Download App from Playstore: