ಬಿಕ್ಷುಕರೇ..... ಭಕ್ಷಕರಲ್ಲ ನನ್ನವ್ವನಾಣೆ

ಕಾಣದು ಲೋಖದ ಜನರಕಣ್ಗೇ
ರಾತ್ರಿಯ ಮಂಚದ ಬಲೆಯ ಬೀಸುವುದು
ಕತ್ತಲೆ ರಾತ್ರಿಯಲಿ ಕದಿಯಲು ಕರೆಯುವುದು
ನನ್ನವರು, ಬಿಕ್ಷುಕರೇ ಭಕ್ಷಕರಲ್ಲ ನನ್ನವ್ವನಾಣೆ

ಹರಕಲು ಚಿಂದಿಯ ತೊಟ್ಟು
ಅಳುವ ಕಂದನ ಕಂಕಳಲ್ಲಿಟ್ಟು
ಸುಡುವ ಬಿಸಿಲಿನಲಿ, ಕಂದಮ್ಮನ
ಮೇಲೆ ಕರುಣೆಯ ಬಿಟ್ಟು
ಲಜ್ಜೆಗೆಟ್ಟಿ ಭಿಕ್ಷೆ ಬೇಡುವ ಜನ
ಆಡುವ ಕಂದನ ಅಳುವಿನಲ್ಲಿ
ಹಣ ಮಾಡಲು ಬಯಸುವ ಜನ
ಯಾರ ಜನ ? ಅವರ್ಯಾರ ಜನ ?

ನನ್ನ ಜನ ಅವರ ಮನ
ಯಾರ ಹೊಟ್ಟೆಯೂ ಹೊಡೆಯದೆ
ಬಿಕ್ಷೆ ಬೇಡಲೇಳುವುದು ಅವರ ತನ
ಅವರೇ ನನ್ನ ಜನ, ಸಿರಿವರ
ದಬ್ಬಾಳಿಕೆಗೆ ನಲಿಯದೇ, ಮೋಸಾಗ್ನಿಗೇ
ಮಡಿಯದೇ ಸಾವನೋವನುಂಡುತಿದೆ
ಅವರ ಮನ, ಅವರೇ ನನ್ನ ಜನ

- ಡಿ.ಸಿ.ಎನ್@100%

23 Nov 2017, 11:47 am
Download App from Playstore: