ಪರಿಮಳ
ಎಲ್ಲಿಂದಲೋ ಬಂದ ತಂಪಾದ ಗಾಳಿ ಮಲ್ಲಿಗೆಯ
ಪರಿಮಳವ ತಂದು ಚೆಲ್ಲಿತು ಒಂಟಿಯಾಗಿ
ಅಲೆದಾಡದೆ ಜಂಟಿ ಹೂಗಳ ಜೊತೆಗೂಡಿ
ಬಾಳೆಂದು ಹಾರೈಸಿದೆ ಗಿಡದಲ್ಲಿ ಜೀವವಿರುವರೆಗೂ.
ನನ್ನ ಗೋಳು ಕೇಳದೇನೆ ಮಲ್ಲಿಗೆ
ಕಣ್ಮರೆಯಾಯಿತು ಸುಗಂಧ
ಕಳೆದು ಹೋಗುವಷ್ಟರಲ್ಲಿ ಬಾಡಿ ಹೋಯಿತು.
ಗಿಡದಲ್ಲಿನ ಸಿರಿಮಲ್ಲಿಗೆಯು ಮೊಗ್ಗಾಗಿ ಜನಿಸಿ
ಹೂವಾಗಿ ಬೆಳೆದು ಮಂದಹಾಸದಿ ಅರಳಿತು
ಸಂಗಡಿಗರೊಡನೆ ಬಣ್ಣ ಕಳೆದು ಕೊಂಡರು ಸುವಾಸನೆ ಬಿರದಿದ್ದರು ಬದುಕಿರುವ
ಕೊನೆಯವರೆಗೂ ಜೊತೆಗೂಡಿ ಬಾಳಿತು
ತೃಪ್ತಿಯಿಂದ ಕೊನೆಯುಸಿರೆಳೆಯಿತು
ಜೀವನದ ಸ್ವಾಧ ಸವಿದು.
- ಚುಕ್ಕಿ
25 Nov 2017, 08:36 am
Download App from Playstore: