ಭಾವ ಬಾಳ್ವೆ
ಜೀವ ಜೀವಗಳ ಬೆಸುಗೆ
ಹೊಸ ಹೊಸ ಭಾವಗಳ ಜೋತೆಗೆ
ಹೋರಟಿದೆ ನೋಡು ಪ್ರೀತಿ ಪ್ರೇಮದ ಒಸಗೆ
ಹೊಸ ಪಲ್ಲವಿಯ ನೂತನ ಬಾಳ್ವೆಗೆ|
ರಂಗು ರಂಗಿನ ಕನಸ್ಸಿಗೆ
ಪ್ರೀತಿ ತುಂಬಿದ ಮನಸ್ಸಿಗೆ
ಮುದ ನೀಡುವ ವಯಸ್ಸಿಗೆ
ಹಾತೋರೆದು ಹೋರಟಿದೆ
ಹೊಸ ರಾಗದ ಅನುಪಲ್ಲವಿಗೆ|
ಸುಖ ದುಃಖಗಳ ಮಿಲನ
ಬಾಳಿನ ನವೀರಾದ ಈ ಪಯಣ
ಸಿಹಿ ಕಹಿಗಳ ಸಮ್ಮಿಲನ
ಬದುಕಿನ ಪಥದ ಈ ಹೊಸ ಯಾನ
ಕಲೆತು ಕೂಡಿದರೇ ಸುಖ
ಮರೆತು ಕಲಹ ಮಾಡಿದರೆ ದುಃಖ
ಇಬ್ಬರು ಹೋರಬೇಕು ಕುಟುಂಬದ
ಪ್ರೀತಿಯ ನೋಗ....
ಆಗ ತಾನೆ ಸಿಗುವುದು ಜೀವನದಲ್ಲಿ
ಹೊಸ ಜಗದ ಸುಖಮಯ ಬಳಗ
- Bhagya Girish
27 Nov 2017, 12:05 pm
Download App from Playstore: