ನನ್ನೆಜಮಾನ !!
ಚೆಲುವಾಂತ ಚೆನ್ನ ನನ್ನ ಯಜಮಾನ
ಎಷ್ಟು ಹಾಡಿದರೂ ಸಾಲದವನ ಗುಣಗಾನ
ಹೊಗಳಿಕೆಗೆ ಏರುವುದವನ ಬಿಗುಮಾನ,
ಅಪ್ಪಿ ಮುತ್ತು ಕೊಟ್ಟರದುವೆ ಸನ್ಮಾನ !
ನಿನ್ನೊಲುಮೆಯ ಕೊಳದಲ್ಲಿ
ಆಡುತ್ತಿರುವ ಹಂಸ ನಾನು,
ಅರೆ ಗಳಿಗೆಯೂ ನಿನ್ನನಗಲಿ
ಇರಲಾರದ ಕೂಸು ನಾನು.
ತೊರೆಯಲಾರೆ ಚೆಲುವ ನಿನ್ನ
ಅರಿಯಲಾರೆ ನೀನು ನನ್ನ,
ತೋರು ಬೆರಳನಿಡಿದುಕೊಂಡು
ತೋಳ ಬಳಸಿ ನಡೆದುಕೊಂಡು
ಬರುವೆ ನಿನ್ನನೊಡಗೂಡಿ
ನಿನ್ನೆದೆಯೆನಗೆ ಗಂಧದ ಗುಡಿ.
ಸೂರ್ಯನೆಲ್ಲಿ ಹೋದರೂನು
ಬರಲೇ ಬೇಕು ಸಂಧ್ಯಾ ನಾನು
ತರಲೆ ಬೇಕು ಪ್ರೀತಿ ಜೇನು
ತರಳೆ ನಾನು ಕಾದಿರುವೆನು.
- ಶ್ರೀಗೋ.
27 Nov 2017, 01:04 pm
Download App from Playstore: