ಒಲವಿನ ವಿಸ್ಮಯ ಜಗತ್ತು

ಸ್ವಾತಿ ಮಳೆಯ ಹನಿ.....
ಮುತ್ತಾಗುವುದು ಕಪ್ಪೆ ಚಿಪ್ಪಿನಲಿ,
ಬೆಚ್ಚನೆ ಅಪ್ಪುಗೆಯ ಸ್ಪಷ೯ದಲಿ....
ಸಾಗರದಾಳದ ತಡಿಯಲಿ....

ಮೊಗ್ಗೊಂದು ಅರಳಿ,
ಹೂವಾಗುವುದು ಇಲ್ಲಿ....
ಸೂಯ೯ ರಶ್ಮಿ ತಾಗಿ....
ನಸು ನಗೆ ಬೀರುತ ನಿಂತಿದೆ
ಹೂ ತಾ ತಲೆ ಬಾಗಿ.....

ವಿರಹವಿರುವುದು ಪ್ರೀತಿಯಲಿ,
ಮಧುರ ಸ್ಪಷ೯ದ ಮಿಲನದಲಿ....
ಪ್ರೀತಿ ತುಂಬಿದ ಮನದಲಿ,
ಒಂದಾಗಿ ಬದುಕುವ ಜೋತೆಯಲಿ....

ಈ ವಿಸ್ಮಯ ಲೋಕದ ಸೃಷ್ಠಿಯಲಿ.....
ಪ್ರತಿಯೊಂದು ಅಚ್ಚರಿ,ಈ ಲೋಕದಲಿ,
ಪ್ರೀತಿ ಜಾದುವಿನ ಮೋಡಿಯಲಿ,
ಜಗ ನಿಂತಿದೆ ನೋಡುತ ಒಲವಿನಲಿ.....

- Bhagya Girish

27 Nov 2017, 11:33 pm
Download App from Playstore: