ಎಲ್ಲಿಂದ ಬಂದವರು........

ಓ ಮುಗಿಲೆ ನೀನೆಕೆ ಹೋದೆ
ಅಷ್ಟು ದೂರ ಕೈಗೆಟುಕದ ಹಾಗೆ
ನಿನ್ನ ಅಲ್ಲಿ ಇಟ್ಟವರಾದರು ಯಾರು
ನನಗು ಹೇಳುವೆಯ....
ಓ ಕಾಣದ ಕಡಲೆ ನಿಹೇಗೆ
ಬಂದೆ ಇಲ್ಲಿಗೆ ಎಲ್ಲಿಂದ ಬಂದೆ
ನಿನ್ನ ಸಾಗರ ಮಾಡಿದವರು ಯಾರು
ನನಗು ಹೇಳುವೆಯ........
ಓ ಹಿಮಗಳ ರಾಣಿಯೆ
ನೀನೆಷ್ಟು ಸುಂದರ ನೀ
ಯಾರ ಮಗಳೆ ಎಲ್ಲಿಂದೆ ಬಂದೆ
ನನಗು ಹೆಳುವೆಯ......
ಓ ಹಸಿರಿನ ತವರೆ ನೀ
ಹೇಗೆ ಇಷ್ಟು ಹಬ್ಬಿನಿಂತಿರುವೆ
ನಿನ್ನ ಇಲ್ಲಿ ಕಳಿಸಿದವರಾದರು ಯಾರು
ನನಗು ಹೇಳುವೆಯ......
ಓ ಸುಂದರ ನದಿಗಳೆ
ಎಲ್ಲಿಂದ ಹರಿದು ಬಂದಿರೆ ಭೂಮಿಗೆ
ನಿಮ್ಮನ್ನು ಇಲ್ಲಿಗೆ ಕರೆದವರಾದರು ಯಾರು
ನನಗು ಹೇಳುವಿರ......
ಯಾರಿಗು ತಿಳಿಯದೆ ಯಾವಾಗ
ಹುಟ್ಟಿರಿ ಎಲ್ಲಿಂದ ಬಂದಿರೆ ಎಲ್ಲ
ನನಗು ಹೇಳುವಿರೆನೆ ಸ್ವಲ್ಪ....

- ರಾಗಸಿರಿ....

28 Nov 2017, 01:52 pm
Download App from Playstore: