""""ಪ್ರಿಯ ಹುಡುಗಿ""""
ಮುದ್ದು ಮನಸ್ಸಿನ ಪ್ರಿಯ ಹುಡುಗಿ
ಕದ್ದು ನೊಡುವ ನಿನಗಾಗಿ, ಎದ್ದು ಬಿದ್ದು
ಬರುವೆ ದಿನವೂ ನಿನ್ನ ಮನೆಯ ಅಂಗಳಕೆ
ಅಂಗಳಕೆ ಬಿಡುವ ರಂಗೋಲಿ ನನ್ನೆದೆಗೆ ಬಿಡು ನೀನೊಮ್ಮೆ ಅಳಿಸದೆ ಉಳಿಸವೆ
ನನ್ನುಸಿರಿರುವವರೆಗೂ ನನ್ನೊಲವಿನ ಆಣೆ
ಈ ಕಣ್ಣಲಿ ನಿನ್ನದೇ ಛಾಯೆ
ಈ ಮನಸಿಗೂ ಮಾಡಿದೆ ನೀ ಏನೂ ಮಾಯೆ
ಅರಿವಿಲ್ಲದೆ ಶುರುವಾಗಿದೆ ನನಗೂ ಒಲವು
ತೋರೆ ನೀ ಕಿರು ಬೆರಳನು
ಹಿಡಿಯುವೆ ನಾ ಪ್ರತಿ ಜನ್ಮಕೂ
ಶುರುವಾಗಿದೆ ಒಲವ ಜ್ವರ
ಯಾವುದೇ ಸೂಚನೆ ಕೊಡದೆನೆ
ಸರಿ ಹೋಗಬಹುದು ನೋಡು
ಸನಿಹ ನೀ ಬಂದರೆ ಮುತ್ತಿನ ಔಷಧಿ ಕೊಟ್ಟರೆ
- uday
28 Nov 2017, 05:01 pm
Download App from Playstore: