ಆಸೆ

ಆಸೆ ಪದವು
ನೋಡಲದುವೆ ಚಿಕ್ಕದು
ಒಮ್ಮೆಯದರ ಸುಳಿಗೆ ಸಿಲುಕೆ
ಹೊರಗೆ ದಾರಿ ಕಾಣದು

ಹಸಿದ ಜೀವದಲಿ
ಹೊಟ್ಟೆದೊಂದೆ ಚಿಂತೆ
ಉದರ ವ್ಯಥೆ ಕಳೆಯುತಿರೆ
ತಿರುಕನಲೂ ಕನಸಿನಾ ಸಂತೆ

ಚಿಕ್ಕ ಪುಟ್ಟ ಆಸೆಯು
ಬೇಕು ಬಾಳ ನಡೆಸಲು
ಆಸೆ ತಿರುಗಿ ದುರಾಸೆಯಾಗೆ
ನೋವು ಜಗದಿ ಸುರಿವುದು

'ಆಸೆಯೇ ದುಃಖಕ್ಕೆ ಮೂಲ'
ಬುದ್ದನಿತ್ತ ಉಪದೇಶ
ಅರಿತರದುವೆ ಮನುಕುಲ
ಶಾಂತಿಬಾಳ್ವೆಗೆ ಸಂದೇಶ

- ನಾಗರಾಜ್

29 Nov 2017, 10:00 am
Download App from Playstore: