ನೀನೆಂದರೆ...
ನೀನೆಂದರೆ ನನಗೆ
ಮಳೆ ನಿಂತರೂ ತೊಟ್ಟಿಕ್ಕುವ
ಮರದೆಲೆಯ ಪಟಪಟ ನೀರ ಹನಿ,
ಇಂಪಾಗಿ ಅಡರುವುದು ಹೆಣ್ಣೇ
ನಿನ್ನೆದೆಯ ಪ್ರೇಮದ ಮಧುರ ದನಿ.
ಹ್ಯಾಗೆ ಮರೆತೇನೇ ಚೆಲುವಿ..
ನೀನಿತ್ತ ತಾಯಿ ಪ್ರೇಮದ ಕೈ ತುತ್ತ !
ಕೆನ್ನೆಗಿತ್ತ ನಿನ್ನ ಕೆಂದುಟಿಗಳ ಸಿಹಿ ಮುತ್ತ,
ಭುಜಕ್ಕೆ ಒರಗಿ ಕುಳಿತು
ಮಗಳಾಗಿ ನೀ ಕೊಟ್ಟ ಸ್ವಲ್ಪ ಹೊತ್ತ !
ನಮ್ಮ ನಡುವೆ ನಡೆದಾವು
ನೂರಾರು ವಿನಾಕಾರಣದ ಹುಸಿ ಜಗಳ,
ಅದರೂನು ಒಡೆಯಲಾರದು ಎಂದಿಗೂ
ಕೂಡಿರುವ ಎರಡು ಗಟ್ಟಿ ಮನಸುಗಳ.
ತೊರೆದೆಯಾದರೆ ಹುಡುಗಿ ನೀನೆನ್ನ ಸಂಗ,
ಖಾಲಿ ತೊಟ್ಟಿಲಾಗುವುದು ಮನಸು
ಮಗುವು ಇಳಿದು ಹೊರಟು ಹೋದ ಹಾಂಗ!
ಬೇರ್ಪಡಿಸಲಾದೀತೆ ಹೇಳು ಹುಡುಗಿ,
ನೀರಿನಿಂದ ಆಮ್ಲಜನಕ, ಜಲಜನಕ ?
ಅಂತೆಯೇ ಕೂಡಿರುವುದು ನಮ್ಮ ಮನ
ಈ ಜೀವನ ಕಳೆಯುವ ತನಕ !
- ಶ್ರೀಗೋ.
30 Nov 2017, 06:16 am
Download App from Playstore: