ಹೂವು

ನಿನ್ನ ಪ್ರೇಮದ ಸಾನಿಧ್ಯಕರಳಿದ ಪ್ರೀತಿ ಹೂವು
ನಿನ್ನ ಮೋಸಕೆ ಬಾಡಿ ಉದುರಿ ನೆಲಸೇರಿ
ಕಂಡ ಕಂಡವರ ಕಾಲಧೂಳ‌ ಕಂಡು
ಹೆದರಿ ಉಸಿರೂ ಬಿಡಲಾಗದೆ ನರಳುತಿದೆ


ನಿನ್ನ ಕಣ್ಬೆಳಕಿನ ಕಾಂತಿಗೆ
ಬಾಳಿಗೆ ಬೆಳಕರಿದಂತಾಗಿ ನಿನ್ನೆಡೆಗೆ
ಬಾಗಿದ ನಾ ಸೂರ್ಯಕಾಂತಿ ಹೂವು
ನಿನ್ನ ಕಣ್ಣ ಸೆಳೆತವಿರದ
ಕ್ಷಣ ಕ್ಷಣವೂ ನನಗೆ ಸಾವು


ಅವಳ ಅಂದವ ಕಂಡ
ಲತೆಗೂ‌ ಏಕೊ ನಾಚಿಕೆ ಬಂತೇನೊ
ಸೌಂದರ್ಯವೆಂದರೆ ಅವಳೆ ಅನಿಸಿ
ಬಳ್ಳಿ ತುಂಬಾ ಹೂವು ಅರಳಿಸಿ
ನಾನು ಸುಂದರಿ ಎಂದು ಅಳುತ್ತಿತ್ತು

- ಶ್ರೀಕಾವ್ಯ

30 Nov 2017, 09:30 pm
Download App from Playstore: