ಅವನ ನೆನಪು

ವಿಧೀಗೇಕೆ ಇಂತ ಕೋಪ
ಆರಿಸುತಿರುವ ಒಲವ ಪ್ರೇಮ ‌ದೀಪ
ಅವನ ಸವಿನೆನಪುಗಳ ಸಲ್ಲಾಪ
ಇಂದೆನಗೆ ನೋವುಗಳ ಪ್ರಲಾಪದ ಶಾಪ

ಕಿರುಬೆರಳ ಹಿಡಿದು ನಡೆದ ಹಾದಿ
ತರುತಿದೆ ಎದೆಯೊಳಗೆ ಕೊನೆಯಿರದ ಬೇಗುದಿ
ಜೊತೆಯಾದ ಹೆಜ್ಜೆಗಳು ತುಳಿದ ಸಪ್ತಪದಿ
ಮತ್ತೆ ತಿರುತಿರುಗಿ ನೋಡಿದಂತಾಗಿದೆ ಮರುಕದಿ

ಜಾರಿದ ಮುಂಗುರುಳ ಸೇರುವ ಕೈಯಿಗೆ
ತೆರೆದು ನೋಡುವಾಸೆ ಪ್ರೀತಿಯ ನೆನಪುಗಳ ಮಳಿಗೆ
ಅವನ ಕಣ್ಣ ಕಡಲಲಿ ಕುಣಿದ ತೇಲಿದ ಕಣ್ಣಿಗೆ
ಕಂಬನಿಯ ಸಾಗರ ಜೊತೆಯಾಗಿದೆ ತಿಳಿಯದ ಹಾಗೆ

ಬಾಳ ದಾರಿಯಲಿ ಪ್ರೀತಿಯ ಹೆಜ್ಜೆ ಗುರುತು
ಅಳಿಸಿ ಹೋಗುವುದಂತು ಕನಸಿಗೂ ದೂರದ ಮಾತು
ನೆನಪುಗಳು ಮಾಸಿ ಮಬ್ಬು ಆವರಿಸದ ಹೊರತು
ಬದುಕಬಹುದೆ, ಹೋಗದಿದ್ದರೆ ಕಳೆದ ಕ್ಷಣವೆಲ್ಲ ಮರೆತು

- ಶ್ರೀಕಾವ್ಯ

01 Dec 2017, 01:53 pm
Download App from Playstore: