ಸ್ವಾವಲಂಬಿ
ಕಾಲುವೆಗಳ ಪಥದಲಿ ಹೊರಟುನಿಂತೆ
ಕೌಮುದಿಯ ಜೋಡಿಗೂಡಿ,
ಸಾಗಿ ಸಾಗುತ್ತ ಶಾಂತಿ ಎನ್ನ ಚಿತ್ತ
ಮಬ್ಬು ತೆರೆಯಸರಿಸಿ ಆಶಾವಾದದತ್ತ,
ಹಾಲುಹಕ್ಕಿ, ತೊಯ್ದ ಪಿಕ್ಕಿ,
ಕಾಗೆ, ಗೂಗೆ ಅಲ್ಲೊಂದು ಮುದಿ ಗರುಡ,
ಎನ್ನಮೇಲೆ ಹಾರಾಡಿ ಛಾಯೆ ಬೀರ್ಯಾವೆ,
ನನ್ನ ಪಯಣ ಹಾದಿ ಹಿಡಿದ್ಯಾವೆ...!!!
ನಾನು ಯಾರು ?
ನಾನು ಯಾರು ?
ಬೇಡ ಪರಿಚಯ
ಸಲ್ಲಬೇಕಿಲ್ಲ ಪ್ರಚಾರ
ನಾನು ಮೌನಿ...
ಎಡಕ್ಕೊಂದು ಕಾಲುವೆಯ ಕವಲು
ಮುಂದಿನ್ನೊಂದು ಸಣ್ಣ ಎಡೆ,
ಸಾಗಿದೊಡೆ ಅಲ್ಲೊಂದು ಬಯಲು,
ಒಂದಷ್ಟು ಹೂತಿಟ್ಟ ಬೀಜ,
ನನ್ನ ನಿರೀಕ್ಷಿಣೆಯಲ್ಲಿ ಕಾದು ಕಂಗೆಟ್ಟು
ಕೊನೆಗೂ ನನ್ನ ಹೀರಿ ಮೊಳೆತು,
ದವಸದ ಕಣಜತುಂಬಿರಲ್ಕೆ,
ಇನ್ನೇನು ಬೇಕೆನಗೆ,
ನನ್ನಷ್ಟಕ್ಕೆ ಬಿಟ್ಟುಬಿಡಿನನ್ನ,
ಬೇಡ ನಿಮ್ಮ ಬಿರುದು,
ಬೇಡ ನಿಮ್ಮ ಗರಿಮೆ,
ಸ್ಥಾವರನಾನಲ್ಲ ಸ್ಥಾನಗಳ ಎಣಿಕೆಗಳಿಲ್ಲ
ಜಾರಿ ಹಾದು ನೀರವ ಮೌನದಲಿ ಸಾಗಿ,
ಕೆರೆಗೋ ಸಾಗರಕ್ಕೋ,
ಸೇರುವ ಚುಕ್ಕಾಣಿಯ ಹಿಡಿದಿರುವೆ
ನನ್ನೊಬ್ಬನನ್ನೇ ಬಿಟ್ಟುಬಿಡಿ
ಮಗ್ನನಾಗಿರುವೆ......
ಕನ್ನಡದ ಭಕ್ತ
- ಕನ್ನಡದ ಭಕ್ತ
02 Dec 2017, 11:45 am
Download App from Playstore: