ಹರಡು ಆಸೆಗಳು
ಬರಡು ಬದುಕಿನ ಹರಡು ಆಸೆಗಳು ಕೆಣಕಿ ಕಿತ್ತೆಸೆದರೂ ಮಿಕ್ಕಿ ಕಂಬನಿಯಲ್ಲಿ ಮಿಂದು ಮರೆಯಾಗುತ್ತವೆ.
ಹಸಿದ ಹೊಟ್ಟೆಗೆ ಹುಸಿಯ ಮಾತುಗಳು ಹಣ್ಣು ಹಂಪಲುಗಳು ಎತ್ತಲಿಂದಲೋ ತಂದು ಕೊಟ್ಟವು ಸವಿದಂತ ಕಾಲ್ಪನಿಕ ಊಹೆಗಳು.
ಕೆಟ್ಟ ಕೋಪದ ಬಟ್ಟೆ ತೊಡಿಸಿ ನೋವ ನಿನ್ನ ನೇತ್ರದ ವರೆಗೆ ಬಾರದಂತೆ ಮರೆಮಾಚುತಿಹೆನು,
ಚಂಡಮಾರುತ ಚೆಂಡಾಡುತಿರುವುದು ಇಂದು ಮನಸ ಮೂಲೆಯ ಕನಸ ಅಂಗಡಿಯಲ್ಲಿ.
- ಚುಕ್ಕಿ
02 Dec 2017, 06:34 pm
Download App from Playstore: