ಅಲೆಮಾರಿ
ಊರಿಂದ ಊರಿಗೆ ಅಲೆಯುವ ಅಲೆಮಾರಿ
ಯಾವ ಭರವಸೆಯ ನಂಬಿ ನಿನ್ನ ತಯಾರಿ
ಏನ ಕಾತರಿಸಿ ಹೋರಟಿದೆ,ನಿನ್ನ ಸವಾರಿ,
ಯಾವ ಕನಸಿನ ಬೇನ್ನೇರಿ....
ಎಷ್ಟೋ ಜನಗಳ ನೋಡಿರುವೆ.
ಎಷ್ಟೋಂದು ಅನುಭವ ಪಡೆದಿರುವೆ,
ವ್ಯಥೆಗಳ ಕಥೆಯ ಕೇಳಿರುವೆ,
ಜೀವನ ಸತ್ಯವ ಅರಿತಿರುವೆ....
ಯಾರನು ನಂಬದೆ,
ಯಾರನು ಸೇರದೆ,
ಏನನು ಬಯಸದೆ,
ನೀ ಚಿಂತೆಯ ಮಾಡದೆ....
ಚಿತೆಯೆರುವೆ ....ಯಾರ ಮನಸ್ಸನು ನೋಯಿಸದೆ,
ಯಾರಿಗೂ ತಲೆಯ ಬಾಗಿಸದೆ...
- Bhagya Girish
02 Dec 2017, 07:14 pm
Download App from Playstore: