ಮನ್ನಿಸು ಗೆಳತಿ

ಸುಂದರ ಬೆಳದಿಂಗಳು ನಿನಗಾಗಿ ಕಾದು ಕುಳಿತಿದೆ
ಸದ್ದು ಮಾಡದೆ ಬಂದುಬಿಡು ಸುಮ್ಮನೆ
ಹೃದಯವು ನಿನ್ನೆಸರನೆ ಜಪಿಸುತ್ತಿದೆ
ಸತಾಯಿಸಬೇಡ ಬಳಿಗೆ ಬರದೆ!

ಆ ಕುಡಿನೋಟದಲಿ ನನ್ನನೆ ಸೆಳೆದೆ
ಸಂತಸದಲಿ ಹೃದಯದ ಬಾಗಿಲ ತೆರೆದೆ
ಮೌನದಲಿ ಪ್ರೀತಿಯ ಮಳೆ ಸುರಿಸಿದೆ
ಸದ್ದಿಲ್ಲದೆ ಮಾಯವಾಗಿ ಹೋದೆ!

ನನ್ನೆಲ್ಲ ಕನಸುಗಳಿಗೆ ಸ್ಫೂರ್ತಿಯು ನೀನಾಗಿದ್ದೆ
ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ
ಕಾರಣ ಹೇಳದೆ ಯಾಕಿಂದು ದೂರಾದೆ
ನಿನ್ನ ನೆನಪಲ್ಲಿ ಕಾಯುತ್ತಿದೆ ಹೃದಯದರಮನೆ!

ನಿನ್ನ ಕಿರುಬೆರಳಿನೊಂದಿಗೆ ನರ್ತನ ಮಾಡುತ್ತ
ಹೆಜ್ಜೆಯೊಂದಿಗೆ ಕನಸ ಹೆಣೆಯುತ್ತ
ಬಹುದೂರ ಸಾಗಬೇಕಿದೆ ಗೆಳತಿ
ಎಲ್ಲಿದ್ದರೂ ಮನ್ನಿಸಿ ಬಳಿಬಂದು ಬಿಡು ಬೇಗನೇ!

ಪ್ರಿಯಾಂಕ✍

- ಪ್ರಿಯಾಂಕ

03 Dec 2017, 11:39 am
Download App from Playstore: