ಬರಹದಉಪಯೋಗ
ಬರಹ ಬಾಳಿನ ಚಿಲುಮೆ.!!
ಮನಸಿರಬೇಕು ಅದರ ಒಲುಮೆ
ತನ್ನವರಿಗೆ ತನ್ನ ತಿಳಿಸಿಕೊಡುವುದು
ಬರಹ ಓದುಗರಿಗೆ ಮಾರ್ಗದರ್ಶನ
ನೊಂದವರಿಗೆ ಆಪ್ತ ದನಿಯ ಸ್ವಾಂತ್ವನ
ಸೋತವರಿಗೆ ಕೊಡುವ ಸ್ಪೂರ್ತಿ
ಬರಹ ಬವಣೆಯ ಅಲಿಸುವ ಮಾಯೆ
ದುಃಖವ ತಡೆಹಿಡಿವ ಛಾಯೆ
ಸರಳತೆಯ ಸಜ್ಜನರ ಸಚ್ಚರಿತ ಹಾದಿ
ಬರಹ ಕವಿ ಭಾವಗಳ ಗುಚ್ಚಾನಿಧಿ
ಬಳಕೆದಾರಾರ ಸ್ವಚ್ಚಂದಾವಧಿ
ಒಟ್ಟಿನಲಿ ಬರಹಗಳೆ ಕವಿಗಳ ಆಸರೆ.!!
ಬರಹ ಕಾವ್ಯ,ಕಾದಂಬರಿ ಕಥನವಾಗಿ
ಮುದಿ ಮನಕೆ ತಗಲುವಂತೆ ಮುಟ್ಟಿಸಿ
ಜ್ಞಾನ ಕೊಡುವ ಪರಮಗುರು..!!
ಬರಹ ಸೌಹಾರ್ದತೆಯ ನಿಲಂಬನ
ಐಕ್ಯತೆಗೆ ಸಮರ ಸಾರುವ ಮಹಾ ತ್ಯಾಗಿ
ಸಾಮರಸ್ಯ ನೆಲೆಸಲೆತ್ನಿಸುವ ಯೋಧ
ಬರಹ ಸರ್ವರಿಗು ಒತ್ತು ನೀಡಿ
ಬಾನೆತ್ತರೆಕೆ ಹಾರಿಸಿಬಿಡುವುದು
ಎಲ್ಲಾದಕ್ಕು ಬರಹವೇ ಅತ್ಯಮೂಲ್ಯ ಶಸ್ತ್ರ
- ನಾಗರಾಜ್
03 Dec 2017, 06:47 pm
Download App from Playstore: