ಹುಣ್ಣಿಮೆಯ ದಿಬ್ಬಣ....
ಹುಣ್ಣಿಮೆಯ ಓ ಚಂದಿರನೆ
ಎಲ್ಲಿಂದ ಬಂತು ಈ ಅಂದ ಚಂದ
ನಿನಗೆ ಈ ದಿನ .......
ತಿಳಿನೀರ ಸಾಗರದಲ್ಲಿ ಮಿಂದು
ಗಂಧದ ಹೋಳೆಯಲ್ಲಿ ನಿಂದು
ಮೈಯಲ್ಲ ಅಂದದ ಹೊಂಬಣ್ಣ
ಸವರಿಕೋಂಡು
ಯಾರು ಇಲ್ಲದ ಆ ಆಗಸದಲ್ಲಿ
ಒಬ್ಬನೆ ಮದು ಮಗನಂತೆ
ಕಾಯುತಿರುವೆಯಲ್ಲ.....
ನಿನಗಾಗಿ ಕಾದಿರುವ ಆ ಮದು ಮಗಳ
ಹುಡುಕಿ ತರಲೆಂದೆ ಈ ಅಂದವೆ ನಿನಗೆ.....
ಆ ಮದು ಮಗಳ ಬಂದುಗಳು ನಾವು
ನಮಗು ಅಲ್ಲಿ ಜಾಗ ಕೋಡುವೆಯ
ಬೆಳದಿಂಗಳ ಅಂಗಳದಲ್ಲಿ ಹಸಿರ ಚಪ್ಪರ
ಹಾಕಿ ದಿಬ್ಬಣ ತರಿಸಿ ಮದುವೆಯ ಮಾಡಿ
ಸಡಗರದಿ ನಲಿಯುವೆವು ನಾವು
ಜಗತ್ತನ್ನೆ ನಿನ್ನ ಕೈಯಲ್ಲಿ ಇಟ್ಟು
ಬೆಳಕ ಚೆಲ್ಲುತ್ತಿರುವೆ ನೀನು
ನಿನಗಾಗಿ ನಾವು ಬೆಳದಿಂಗಳಲ್ಲಿ
ಮದುವೆಯ ದಿಬ್ಬಣ ಹೋತ್ತು ತರುವೆವು
ಕಾಯುತಲಿರು ಓ ಚಂದಿರನೆ.......
ಹುಣ್ಣಿಮೆಯ ಅಂಗಳದಲ್ಲಿ ಚಂದಿರನ
ಮದುವೆಯ ಮೆರವಣಿಗೆ ಸಾಗುತಿರಲಿ ಹೀಗೆ......
- ರಾಗಸಿರಿ....
03 Dec 2017, 08:43 pm
Download App from Playstore: