ಮಸಣದ ಹೂವು

ಅರಳಿರುವುದೊಂದು ಹೂವು
ಅರಿಯದೆಲೆ ಮಸಣದಲಿ,
ಬದುಕಿಹುದು ಹೇಗೋ ತಿಳಿಯದೆ
ಪರಿ ಪರಿಯ ನೋವುಗಳ ಪೊರೆದುಕೊಂಡು.

ಎತ್ತೆತ್ತ ನೋಡಿದರೂ
ಸತ್ತ ಹೆಣಗಳ ಸುಡುಗಾಡು
ಕೆಟ್ಟ ಕೊಳಕು ವಾಸನೆಯಲಿ
ಮರೆಯಾಯ್ತೆ ಪರಿಮಳವು.

ಅರಳಿರುವ ಕುಸುಮಕ್ಕೆ
ಇರಿಯುತಿಹರು ಹೃದಯಕ್ಕೆ
ಹುಟ್ಟಿದ ಜಾಗ ಕಸಿದುಕೊಂಡಿದೆ ಬೆಲೆಯ
ಕಂಡುಕೊಳ್ಳಲಾಗದೆ ನರಳಿಹುದು ಹೂವು
ಸೂಕ್ತ ನೆಲೆಯ..

ಯಾರದೋ ತಪ್ಪಿಗೆ
ಎಳೆ ಹೂವಿಗೇತಕೆ ಶಿಕ್ಷೆ ?
ಹೆಣ ತಿನ್ನುವ ರಣ ಹದ್ದುಗಳಿಂದ
ಸಿಗಲಾರದೆ ಹೆಣ್ಣಿಗೆ ರಕ್ಷೆ ?

- ಶ್ರೀಗೋ.

03 Dec 2017, 09:11 pm
Download App from Playstore: