ತನ್ನ ತಂದೆ =ತಾಯಿಗೆ ಮಗಳಾದವಳು
ಗಂಡನಿಗೆ ಹೆಂಡತಿಯಾಗಿ ಬಂದವಳು
ಅವಳು ಮಗ =ಮಳಿಗೆ ಜನ್ಮ ನೀಡಿದವಳು
ಅತ್ತೆಗೆ ಮಗಳಾದವಳು
ಮಾವನಿಗೆ ಸೊಸೆಯಾದವಳು
ಮಕ್ಕಳಿಗೆ ಪ್ರಪಂಚವಾದಗಳು
ಪ್ರೀತಿಯಲ್ಲಿ ಸೌಕಾತಿಯಾದವಳು
ಬಡತನದಲ್ಲಿಯೇ ಹೆಚ್ಚು ಪ್ರೀತಿ ತೋರಿಸಿದಳು
ತನ್ನ ನೋವು ಗಳಿಲ್ಲ ಮುಚ್ಚಿಟ್ಟ ಶ್ರೀಮಂತೇ
ತನಗಾಗಿ ಏನನ್ನು ಬಯಸದವಳು
ಮನೆಯಲ್ಲಿ ತನ್ನ ಮುಖ್ಯ ಪಾತ್ರ ವಹಿಸಿದವಳು
ತನ್ನ ಆಸೆ ಬಯಕೆಗಳನ್ನು ಬದಿಗಿಟ್ಟವಳು
ಹಗಲು ರಾತ್ರಿ ಎನ್ನದೆ ಮನೆಯಲ್ಲಿಯೇ ದುಡಿದವಳು
ತನ್ನ ಜೀವನವನ್ನು ಬಿಟ್ಟು ತನ್ನವರಿಗಾಗಿ ಮುಡುಪಾಗಿಟ್ಟವಳು
ಅವಳೇ ನನ್ನವ್ವ
ಹಾದು ಹೋದ ಕಣ್ಣುಗಳು
ಆಡಿ ಹೋದ ಮೌನ ಮಾತು
ಕಿವಿಗಳು ಶ್ರವಿಸದಿರಬಹುದು
ಭಾವನೆಗಳಿಂದ ಭಾರವಾದ
ಬಡ ಹೃದಯದ ಗತಿಯೇನು?
ನನ್ನದೂ ಒಂದು ಬದುಕು,
ಜನರಲೆಯುವ ಅಳತೆ ಕೋಲಿನ
ಬಳಕೆಗಷ್ಟೇ ಉಪಯೋಗಕಿರುವವನು
ಅನ್ನುವವರು ಅನ್ನಲಿ ಎನ್ನಬಹುದಿತ್ತು
ಕಣ್ಣುಗಳು ಸುಮ್ಮನಿರಬೇಕೇ
ಸಾತು ನೀಡುವ ಪ್ರಿಯ ಮಿತ್ರ
ಕತ್ತಲ ಇರುಳಿನ ಆಣೆ,
ಚಿಮ್ಮುವ ಕಣ್ಣ ಧಾರೆಯ ರಭಸಕೆ
ಗಲ್ಲದಿ ತಟಸ್ಥವಾದ ಮೊರೆ
ಎಲ್ಲಿ ನಿಯಂತ್ರಣ ತಪ್ಪುವುದೋ
ಎನ್ನುವ ಭಯ ಎನಗೆ!
ಮನದಲೇ ಸುಕ್ಕುಹಿಡಿದ
ಭಾವನೆಗಳ ರಾಶಿಗೆಲ್ಲಿದೆ ಬೆಲೆ?
ಬಳಿ ಸುಳಿವ ಸಾವಿರ
ಆಲೋಚನಾ ಬಳ್ಳಿಗಳ ತೋಟಕೆ
ನೀರ ಹುಯ್ದು ಹಾಯುವ ಗಾಳಿ ನಾನು,
ಹಿಡಿಯಲೆತ್ನಿಸಿ ಸೋತೂ ಸೋಲದೆ
ಉದುರುವ ಬಣ್ಣದ ಎಲೆಯನು
ಕುಳಿತು ಕಾಯುತಿರುವೆನು ಇನ್ನೂ
ಬಣ್ಣ ಬಣ್ಣಗಳ ಚಿಟ್ಟೆಗಳೆ
ಪುಷ್ಪಗಳ ಮಕರಂದ
ಹೀರಲು ಹೊರಟಿಹೆಯಾ
ಸದ್ದನು ಮಾಡದೆ ಸುಗ್ಗಿಯ ಮಾಡುತ
ನಡೆದಿದೆ ನಿನ್ನಯ ಝoಕಾರ.
ಹಾರುತ ತೇಲುತ ರಾಗವ ಹೇಳುತ
ತನ್ಮಯಳಾದೆ ಈ ದಿನ ಸುದಿನ
ಮಕ್ಕಳು ನಿನ್ನ ಹಿಂಬಾಲಿಸುತ
ಹಿಡಿಯಲು ಹೊರಟವು ಮುಂದಾಗಿ
ನಿನ್ನಯ ಅಂದವು ಸೊಬಗಿನ ಚಂದವು.
ಕಣ್ಮನ ಸೆಳೆದವು ಕಿವಿ ಗಿಂಪನ್ನು ತಂದವು.
ಜೀವಕ್ಕೆ ಬೆಲೆ ಇಲ್ಲದ ಜಗತ್ತಿನಲ್ಲಿ
ಬದುಕುತಿರುವೆವು ನಾವೆಲ್ಲ
ಪ್ರಾಣಿಗಳೇ ಲೇಸೆಂದು ಬದುಕುವ
ಪರಿ ಮಾನವನದು.
ನಾ ಮೇಲು ನೀ ಮೇಲು ಎನ್ನುತಾ
ಒಂದು ದಿನ ಹೋಗುವೆವು
ಇಹಲೋಕವನ್ನು ತ್ಯಜಿಸಿ.
- ಮೇಘಾ ಬೆಳಧಡಿ
25 Jul 2025, 07:32 pm
ನನ್ನವನು.
ಅವನೆಂದರೆ ಆಸೆಯೂ ಅಲ್ಲ ಆಕರ್ಷಣೆಯೂ ಅಲ್ಲ ಅವನೆಂದರೆ ನನ್ನಲ್ಲೇ ಮೂಡಿದ ಮಧುರವಾದ ಭಾವನೆ... ಅವನು ನೋಡಲು ಮುಗ್ಧ ಮನಸಿನ ಭಾವನೆ ಹೊದಿರುವನು.. ನಗುವಲ್ಲೇ ನೋವ ಮರೆಸೋ ಮನಸ್ಸಿಗೆ ತನ್ನಗೆ ನೋವಿದದ್ದರು ಇತರಿಗಾಗಿಯೇ ನೋವ ಮುಚ್ಚಿಡುವನು ನನ್ನವನು .. ಯಾರಿಗು ಸೋಲದವಳು ನನ್ನವನ ಗುಣಕ್ಕೆ ಸೋತೆನು..
ಸಿಟ್ಟು -ಸೇಡವಿನ ಕೈಗೆ ತಾಳ್ಮೆಯ ಪಾಠ ಹೇಳಬೇಕು
ರಾಗ-ದ್ವೇಷದ ಬುದ್ದಿಗೆ ನೆಮ್ಮದಿಯ ವಾಸನೆ ಹಂಚಬೇಕು
ಸೇಡು-ಕೇಡಿನ ಭಾವಕ್ಕೆ ಸಂತೋಷದ ಬಣ್ಣ ಹಚ್ಚಬೇಕು
ಸಂಚು-ಹೊಂಚಿನ ಮನಕ್ಕೆ ಶಾಂತಿಯ ರುಚಿ ಬಡಿಸಬೇಕು
ಚಂಚಲ-ಮಂಚ'ಲ ದೇಹಕ್ಕೆ ಕೊಂಚ ಸಾಹಿತ್ಯ ಬೇಕೇ-ಬೇಕು