ಓ ಗುರುವೇ........
ಮನಸು ಬಯಸಿದ್ದು ನಿಮ್ಮನ್ನು
ಆಗಿಯೇ ಬಿಟ್ಟಿರಿ ಜೀವನದ ಒಂದು ಭಾಗವಾಗಿ.........
ಕಲಿಸಿದಿರಿ ಕ್ರಿಯೆಯನ್ನು ಉತ್ತಮ ಗುರುಗಳ ಮೂಲಕ ತಿಳಿಯಿತು ಅದರ ಒಳಗಿತ್ತು ಪಂಚ ಸೂತ್ರಗಳು
ಎಲ್ಲಿರಿಗೂ ಒಳಿತನ್ನು ಮಾಡಿರಿ ಎಂದು
ಫಲಿಸಿತು ಆ ನಿಮ್ಮ ಮೌನ ಧ್ಯಾನ
ತಿಳಿಯಿತು ಆ ಧ್ಯಾನದ ಮರ್ಮ
ಅರಿತು ಕೇಳುವೆ ನಾ ನಿಮ್ಮ ಧ್ಯಾನ
ಪರವಶಳಾಗುವೇ ನಾ ಆಗ.
ಭಾವುಕತೆಯ ಆ ನಿಮ್ಮ ಸತ್ಸಂಗ
ಎಲ್ಲರೊಳಗಾಗುವುದು ಆ ನನ್ನ ಮನ.
ಮನಸಲ್ಲಿ ನೆಲೆಯಾದಿರಿ ನೀವು ದೇವಾ
ಇದೋ ಈ ನನ್ನ ಪುಟ್ಟ ಕವನ.........
ಜೈ ಗುರುದೇವ್
ಒಲವೆಂಬ ಹೋತ್ತಿಗೆಯ ಬಂಧಿಸಲೆ ನಿನ್ನ ಎದೆಯಲಿ
ಪ್ರತಿಕ್ಷಣವು ಕಳೆಯ ಬಯಸಿದೆ ಮನ ನಿನ್ನೆದೆಯ ಗೂಡಲಿ
ನಿನ್ನೋಂದಿಗೆ ಆಡ ಬಯಸುವೆ ನನ್ನ ಜೀವನದ ಜೋಕಾಲಿ
ನೀನಿಲ್ಲದೆ ಬರೀ ಮೌನವೆ ತುಂಬಿಹುದು ಬಾಳಲಿ
ಬೆರಳ ಹಿಡಿದು ನಡೆಯುವೆಯಾ ಎಂದಿಗೂ ನನ್ನ ಜೋತೆಜೋತೆಯಲಿ
ಕವಿತೆ ಬರೆಯಲು ಪ್ರಾರಂಭಿಸಿದ್ದೆ ನಾ ನೀನಗಾಗಿ
ನೀ ಸಿಕ್ಕೆ ಅಂದು ನನಗೆ ವರವಾಗಿ
ನಾ ಕಾಯುವೆ ಎಂದಿಗೂ ನಿನ್ನ ಪ್ರೀತಿಗಾಗಿ
ಬಿಗಿ ಹಿಡಿದಿರುವೆ ಜೀವವ ಆ ಕ್ಷಣಕ್ಕಾಗಿ
ಮೌನ ಯಾವಾಗ ಬದಲಾಗುವುದು ಮಾತಾಗಿ
ಹೇಳಿಬಿಡು ಒಮ್ಮೆ ಪ್ರೀತಿಯ ಸಿಹಿಯಾಗಿ
ಮರುಕ್ಷಣವೆ ಬರುವೆ ನಾ ನಿನ್ನ ಜೋತೆಯಾಗಿ...
ಕಾಣದ ಹುಡುಗಿಯ ಅದೆಷ್ಟು ಪ್ರೀತಿಸುವೆ
ಆಕೆಯ ಬಗ್ಗೆ ಅದೆಷ್ಟು ಯೋಚಿಸುವೆ
ಆಕೆ ಎಲ್ಲಿರುವಳೋ ಹೇಗಿರುವಳೋ
ನಿನಗೆ ತಿಳಿಯದಿದ್ದರೂ ಆಕೆಯ ಮನದಲ್ಲಿಟ್ಟು ಪೂಜಿಸುವೆ.
ಕನಸಿನ ಲೋಕದಲ್ಲೇ ತೇಲುತ್ತಿರುವೆ.
ಹೇ ಹುಚ್ಚು ಮನಸ್ಸೇ ಅವಳು
ನಿನ್ನನ್ನು ಸ್ವೀಕರಿಸುವಳೆಂದೂ
ಅದೇಗೆ ಬಲ್ಲೇ ನೀ.
ಕಣ್ಣೆದುರು ಕಂಡು ಪ್ರೀತಿಸಿ
ಜೊತೆಯಲ್ಲಿಯೇ ಸುತ್ತಾಡಿ
ಮೂರು ದಿನದಲ್ಲೇ ಮುಗಿದು ಹೋಗುವ
ಹೆಚ್ಚು ಪ್ರೇಮ ಸಂಬಂಧಗಳ ನಡುವೆ
ಪ್ರತಿದಿನ ಕಣ್ಣಿಗೆ ಕಾಣದವಳ ಕೈಗೆ ಸಿಗದವಳ
ವರ್ಷಕೊಮ್ಮೆ ದರ್ಶನ ನೀಡುವವಳ ಹುಚ್ಚನಂತೆ ಪ್ರೀತಿಸುವೆ
ಮನಸ್ಸೇ ನೀ ಏಕೆ ಹೀಗೆ.
ಓ ನನ್ನ ಸಖಿಯೆ ಆಗು ನೀ ಸತಿಯೆ
ಹೀಗೆ ನೀ ನನ್ನ ಸತಾಯಿಸುವುದು ಸರಿಯೆ.
ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು
ಮೋಡ ಕವಿದ ಗಗನ ನಯನ ನೀರ ಕಥನ
ನೀ ಅದಕೆ ಸಿಗದೆ ಹೋದೆ ಅದುವೆ ಅದಕೆ ಮಥನ..
ಅಂಬುಜನು ಬಂದ ಕೈಚಾಚಿ ಎಂದ
ನೀಡು ಅವಳನು ನನಗೆ, ತಗೋ ನೀ ಬ್ರಹ್ಮಾಂಡ
ಊರ ಕೆರೆ ಯಂಚಲ್ಲಿ ಬೆಳೆದ
ಆ ತಾವರೆ ನೀನಲ್ಲವೆ .
ನೀನಿಲ್ಲದೆ ನಾ ನಿಲ್ಲವೆ.
ಸಮುದ್ರ ಮಥನದ ಕಥೆಯಲ್ಲಿ ಬಂದ
ಶ್ರೀ ಹರಿ ಸತಿಯು ನೀನೆನಾ.
ಕಲಿಯುಗದ ಕೃಷ್ಣ ನಾ ನಿನಗೆ ಸಖಿಯೆ
ಕಲಿಯುಗ ರುಕ್ಮಿಣಿ ಆಗಲು ಏನು ಬಾಧೆ.
ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು
ಆ ಮನ್ಮಥನು ಸೋತಿಹನು ನಿನ್ನಲ್ಲಿ
ರತಿ ರಾಣಿ ಆಗಿರುವೆ ನೀ ನನ್ನಲ್ಲಿ.
ಗಂಡು ಹೆಣ್ಣು ಬರಗೆಟ್ಟಾಗ್ಲೇ ಮುದ್ದು ಮುದ್ದಾದ ಮಕ್ಕಳಾಗೋದು.
ಬಾರೆ ಬಾ ಬಾರೆ ನಕ್ಷತ್ರಗಳ ಮಹಿಷಿ.
ಇಳೆಗಿಳಿದು
ಈ ಭೂಮಿಯ ಪಾರಿಜಾತ ಹೂಗಳ ಮೇಲೆ
ಅಂದ್ವಾದ ಚಕ್ಕಚಂದ ಆಡೋಣ...