Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾಗರದ ಸಮತಲದ ಮೇಲೆ
ಮೂಡಿದೆ ವರ್ಣ ಚಿತ್ತಾರ
ಬಾನ ಬೀದಿಯ ತುಂಬಾ
ಹೊಂಬಣ್ಣದಿ ನಗುವ ನೇಸರ
ಹಕ್ಕಿಗಳ ಕಲರವ ಸದ್ದು
ಕೇಳಲು ಆಹಾ ಎಷ್ಟೊಂದು ಮುದ್ದು
ತೆರೆಗಳ ಏರಿಳಿತದ ವೈಯಾರ
ನಿಸರ್ಗದ ಮಡಿಲ ಶೃಂಗಾರ
ಮೂಡಣದ ಕಡಲಿದು
ಪ್ರಕೃತಿಯ ಸೊಬಗು
ಕಣ್ಣು ಹಾಯಿಸಿದಷ್ಟು
ವಿಶಾಲ ಭಾವದ ಮೆರುಗು
ಹಸಿರಿಲ್ಲ ಸುಮವಿಲ್ಲ
ದುಂಬಿ ಝೇಂಕಾರ ಮೊದಲಿಲ್ಲ
ಬರೀ ಕಡಲ ಭೋರ್ಗರೆತ
ದಡ ಸೇರುವ ಧಾವಂತ
ಮುಂಜಾನೆಯಿದು ನಿತ್ಯ
ಮೈ ನವಿರೇಳಿಸುವ ಸತ್ಯವು
ಮನದ ಭಾವಕೆ ರೆಕ್ಕೆ ಹಚ್ಚಿ
ನಭಕೆ ಚಿಮ್ಮಿಸುವ ವಿಶ್ವಾಸವು
ಸವಿಯಬೇಕು ಈ ನಿಸರ್ಗ ವೈಭವ
ಕಾಣಬೇಕು ಸಮಚಿತ್ತ ಭಾವ
ಮಗುವಾಗಿ ನಗುವ ಸಮಯ
ಪ್ರಕೃತಿಯಿದು ಒಂದು ವಿಸ್ಮಯ
*ಅಮು ಭಾವಜೀವಿ*
ಚಿತ್ರದುರ್ಗ
- ಅಮು
18 Sep 2018, 07:02 pm
ಒಲವನ್ನು ನೀ ನೀಡಿರುವಾಗ
ಮನದಲ್ಲಿ ನಿನಗೆ ಮನೆಯ ಕಟ್ಟೀವೇ, ಹೇಹೇಹೇ
ಉಸಿರಿನಲ್ಲಿ ನೀ ಬೆರತಿರುವಾಗ
ಹೃದಯನೇ ನಿನಗೆ ಮೀಸಲಿಡುವೇ, ಹೇಹೇಹೇ
ಕಣ್ಣು ಮುಂದೆ ಬರುಲು ನೀನು
ಕನಸಲ್ಲೂ ನಿನ್ನ ಅಂದ ಚೆಂದ ಹೊಗಳಿವೇ, ಹೇಹೇಹೇ
ಹೋದಲ್ಲಿ ಬದಲ್ಲಿ ಎಲ್ಲಾ ನಿನದೇ
ಚಿಂತೆ ನನಗೆ ದಯವಿಟ್ಟು ನೀನು ನನಗಾಗಿವೇ, ಹೇಹೇಹೇ
ಬಿಸುವ ಗಾಳಿಯು ಇಂದು
ನಿನಗಾಗಿ ನಿಂತು ಕೊಂಡು ಮನಬಂದಂತೆ ನಿನಗೆ
ಸ್ವಾಗತ ಮಾಡುವೇ, ಹೇಹೇಹೇ
ಬೀದಿ ದೀಪಗಳ ನಡುವೆ
ಏನೋ ಸಂಭ್ರಮ ಇಂದು
ನಿನ್ನ ಹೆಜ್ಜೆ ಗುರುತುಗಳ ಕಂಡು ಚಿಟ್ಟೆಗಳು ಹಾಡುತ್ತ ನಲಿದಿವೇ, ಹೇಹೇಹೇ
ಇದು ನನ್ನ ಕಲ್ಪನೆಯ ಸಾಲು
ಮನಸ್ಸಿಗೆ ಬಂದು ಬೇಗ ಸೇರು
ನಿನಗಾಗಿ ಕಾದಿರುವೇ, ಹೇಹೇಹೇ
- Prakash Angadi
16 Sep 2018, 08:43 pm
ಓ ಗುಲಾಬಿ,
ಬಗೆ ಬಗೆಯ ಬಣ್ಣಗಳ ಭಂಡಾರವೇ ನೀನು.
ಸುಮಧುರ ಸುವಾಸನೆಯ ಸಂಪತ್ತು ನೀನು.
ಸಿರಿ ಸೌಂದರ್ಯದ ಶಿಖರವೇ ನೀನು.
ನಿನ್ನ ಮುಡಿದ ನನ್ನವಳ ಬಗೆ ಏನೆಂದು ಬಣ್ಣಿಸಲಿ ನಾನು?
ಅದನು ನೋಡಿ ನನಗಾದ ಆನಂದದ ಪರಿ
ಏನೆಂದು ಬರಿಯಲಿ ನಾನು?
ನಿನ್ನೀ ಸೌಂದರ್ಯದ ಶಿಖರವನೇರಿ,
ಸುವಾಸನೆಯ ಬುಗ್ಗೆಯ ಬರಿದು ಮಾಡಿದೆ,
ಬಣ್ಣಗಳ ಭಂಡಾರವ ಬಳಿಸಿದೆ.
ನನ್ನವಳನು ಬಣ್ಣಿಸಲು ಶಬ್ಧಗಳು ಸಿಗದೆ ಬಸವಳಿದೆ.
ನಿನ್ನ ಅಂದಚಂದಗಳ ಅರಿವು
ಜೀವನದ ಜಂಜಾಟಗಳ ಮರಿವು.
ನಿನ್ನ ಮುಳ್ಳುಗಳ ಮೈಮಾಟ
ಮನುಜ ಜನ್ಮದ ದುಖ್ಹ ದುಮ್ಮಾನಗಳ ಪರಿಪಾಠ
ಓ ಗುಲಾಬಿ,
ಅರಿತೆ ನಿನ್ನ ಅಂದವ, ಕಲಿತೆ ನಿನ್ನ ಪಾಠವ.
ಬೇರೂರಿ ನೀ ನಿಂತರು ಒಂದೆಡೆ
ಪಸರಿಸಿದೆ ಸುವಾಸನೆ ಎಲ್ಲೆಡೆ
- as
16 Sep 2018, 10:56 am
ಬಂದು ಬಿಡು ನನ್ನ
ಬದುಕಿದು ನಂದನವಾಗಲು
ಇದ್ದು ಬಿಡು ನನ್ನ
ಮನದೊಳಗೆ ನೆನಪಾಗಲು
ನಾಳೆಗಳ ಹಂಗೇಕೆ
ನೀ ಜೊತೆ ಇರಲು
ಇಂದೇ ನನಗೆ ಸಾಕು
ನಿನ್ನೊಲವು ಸಿಗಲು
ಅಮು ಭಾವಜೀವಿ
ಚಿತ್ರದುರ್ಗ
- ಅಮು
14 Sep 2018, 03:57 pm
ಬಂದೆನ್ನ ಎದುರಿಗೆ ನಿಲ್ಲು
ನಿನಗಾಗಿ ತೆರೆದಿದೆ ಮನಬಾಗಿಲು
ನೀ ಕಾಣದಿರೆ ನನಗೆ ದಿಗಿಲು
ಅದರಿಂದ ಮನವೆಲ್ಲ ಕತ್ತಲು
ನೀ ಜೊತೆಯಿದ್ದರೆ ನನಗೇನೋ ಅಮಲು
ನಿನ್ನ ಅಂದಕ್ಕೆ ನಾನಾದೆ ಮರುಳು
ಅಮು ಭಾವಜೀವಿ
ಚಿತ್ರದುರ್ಗ
- ಅಮು
13 Sep 2018, 01:05 pm
ನಾನೊಬ್ಬ ಕುಡುಕ
ದುಶ್ಚಟಗಗಳಿಂದಲ್ಲ,
ನಿನ್ನ ಭಾವನೆಗಳ
ಅಮಲಿನಲ್ಲಿನ ಕುಡುಕ.
ನಾನೊಬ್ಬ ಕುಡುಕ
ಕೆಟ್ಟಾಲೋಚನೆಗಳಿಂದಲ್ಲ,
ನಿನ್ನಾಂತರ್ಯದ ಸೊಗಸ್ಸಿನ
ತೊಳಲಾಟದಲ್ಲಿನ ಕುಡುಕ.
ನಾನೊಬ್ಬ ಕುಡುಕ
ಆಡಂಬರದ ಜೀವನಕ್ಕಲ್ಲ,
ನಿನ್ನ ಪ್ರೀತಿ-ಪ್ರೇಮಗಳ
ಅಲೆದಾಟದಲ್ಲಿನ ಕುಡುಕ.
ನಾನೊಬ್ಬ ಕುಡುಕ
ಅತಿ ಆಸೆಯಿಂದಲ್ಲ,
ನಿನ್ನ ಸೇರಲೇ ಬೇಕೆಂಬ
ಆಲೋಚನೆಯಲ್ಲಿನ
ಅಪರೂಪದ ಕುಡುಕ.
- vasu
11 Sep 2018, 08:56 pm
ಎಂಥ ಸುದಿನವಿಂದು ನಾ ನಿನ್ನ ಸಂಗಾತಿಯಾದಂದು
ಎರಡು ಮನಸು ಒಂದಾದಂದು ಎರಡು ಮನೆ ಬೆರೆಯಿತಂದು
ಅನುಭವಗಳು ಅನೇಕ ಆನಂದದ ರಸಗಳಿಗೆಗಳನೇಕ
ಎಂದೆಂದಿಗೂ ಮರೆಯಲಾರದ ಸುದಿನ ನಾ ನಿನ್ನ ಮದುವೆಯಾದ ಈ ದಿನ
- ರಘು
11 Sep 2018, 06:06 pm
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!
ಜನಸಂಖ್ಯಾ ಸ್ಪೋಟದ ಅಲೆಯಲ್ಲಿ ತೇಲುತ್ತಾ
ಬಡವ-ಧನಿಕ, ಜಾತಿ-ಪಂಥವೆಂಬ ಪಾಷಕ್ಕೆ ಸಿಕ್ಕಿ
ಜಿಡ್ಡಾದ ಮನಸ್ಸಿಗೆ ಶಾಂತಿಯ ಹುಡುಕುತ್ತಾ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!
ದಿನದಿಂದ ದಿನಕ್ಕೆ ಬದಲಾಗುವ ಸಮಾಜದಲಿ
ಬೆಲೆ ಏರಿಕೆಯ ಸುಳಿಯಲಿ ಸಿಲುಕಿ
ಮೂಲಭೂತ ಅಗತ್ಯಗಳಿಂದಲೂ ವಂಚಿತರಾಗಿ
ಅತ್ತ ಸಾಯಲಾರದೆ ಇತ್ತ ಬದುಕಲಾರದೆ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!
ಬಡತನದ ತಾಯ್ತಂದೆಗಳ ದಣಿಸಿ
ವಿದ್ಯಾರ್ಹತೆಗೆಂದು (ಡೂನೇಷನ್) ಲಂಚವ ತೆತ್ತು
ಪದವಿಗಳಿಸಿ ಉದ್ಯೋಗವಿಲ್ಲದೆ
ನಿರುದ್ಯೋಗಿಯಾಗಿ
ಕೆಲಸ ಹುಡುಕುತ್ತಾ ಬೀದಿ ಬೀದಿ ಅಲೆಯುತ್ತಾ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!
ಸಿರಿತನ ಬರಲಿಲ್ಲ-ಬಡತನ ಬಿಡಲ್ಲಿಲ್ಲ
ನಡೆದುಹೋದ ಕಹಿನೋವು ಮರೆಯಲು
ಚಂಚಲತೆಯ ಮನವನ್ನು ಬಿಗಿಹಿಡಿದು
ನಮ್ಮ ಭವಿಷ್ಯದ ಹಗಲುಗನಸ್ಸು ಕಾಣುತ್ತಾ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!
ಕುಂತೂರು ತ ಸುಬ್ರಮಣ್ಯ
9482119447
- KT Subramanya
11 Sep 2018, 12:52 pm
ಕನ್ನಡನಾಡಲಿ ಜನಿಸಿದ ನಾವು
ಕನ್ನಡವನ್ನೆ ಮರೆತಿಹೆವು
ಅಂಕಲ್, ಮಮ್ಮಿ,ಡ್ಯಾಡಿ ಎನ್ನುವ
ಆಂಗ್ಲ ಭಾಷೆಯ ಬಳಸುವೆವು
ಈ ಪರಿ ಉಳಿದರೆ ಎಂದೂ
ಕನ್ನಡ ತಾಯಿಗೆ ಉಳಿವಿಲ್ಲ
ಪರ ಭಾಷೆಯು ನಮ್ಮಲ್ಲಿದ್ದರೆ
ಕನ್ನಾಡಾಂಬೆಯು ಮರುಗುವಳು
ಬನ್ನಿರಿ ಚಿಣ್ಣರೆ ಮಕ್ಕಳೆ ನಾವು
ನವ ಕರ್ನಾಟಕ ರಚಿಸೋಣ
ಇಂದಿನ ಮಕ್ಕಳ ಮನದಲಿ ನಾವು
ಕನ್ನಡ ಕಂಪನು ಹರಡೋಣ
ಕುವೆಂಪು , ಬೇಂದ್ರೆ ನಡೆದ ನಡತೆಯ
ಜೀವನದಲ್ಲುಪಯೋಗಿಸುವ
ಕನ್ನಡ ನಾಡಲಿ ಜನಿಸಿದ ನಾವು
ಮಾತೆಯ ಋಣವ ತೀರಿಸುವ
(ರಾಗ ಲಾವಣಿ)
ಕುಂತೂರು ತ ಸುಬ್ರಮಣ್ಯ
9482119447
- KT Subramanya
10 Sep 2018, 10:47 am
ಕಾಣದೆ ಮರೆಯಾಗಿ
ಹೋಗುವೆ ಎಲ್ಲಿಗೆ?
ಮನಸನೇ ತೊರೆದು
ಹೋಗುವೆಯಾ ಅಲ್ಲಿಗೆ?
ಸುಮ್ಮನೆ ಕುಳಿತೆ ಹೀಗೆ ಏಕೆ ?
ಮೌನದಲ್ಲೂ ಮಾತಿದೆಯಾ?
ನೋಟವನು ನೆಟ್ಟಿರುವೆ ಎಲ್ಲೊ ಏಕೆ?
ಶೂನ್ಯದಲೂ ಬೆಳಕಿದೆಯ?
ಭಾವನೆಗಳ ಬೇಗುದಿಯಾ?
ಸರಿ ತಪ್ಪುಗಳ ತಾಕಲಾಟವ?
ಒಳಗೊಳಗೇ ಕುದಿಯುತಿದೆಯಾ?
ಹೊರಚೆಲ್ಲಲು ಕಾಯುತಿರುವೆಯಾ?
ಒಮ್ಮೆ ಎಲ್ಲ ಬಿಟ್ಟು ಹೊರಗೆ ನಿಂತು
ಲೋಕವ ಕಣ್ತೆರೆದು ನೋಡು
ಮರೆತೇ ಹೋಗುವೆ ಮನದ ಆವೇಶ
ಕಳೆದು ಬಿಡುವೆ ಎಲ್ಲಾ ಕಲ್ಮಶ
ನಮ್ಮ ಕಷ್ಟವೇ ದೊಡ್ಡದಲ್ಲಾ
ಅನ್ಯರ ಸಂಕಟ ಅರಿತರೆ
ನಮ್ಮದೇನೂ ಅಲ್ಲಾ
ನೋವಿನಲೂ ನಲಿಯುವುದ ಕಲಿ
ಸಾವಿನಲೂ ಸಾರ್ಥಕತೆ ಇರಲಿ....
- RajuKolkar
09 Sep 2018, 02:38 pm