Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ನಲ್ಮೆಯ ಪ್ರಿಯತಮ.

ನೀ ಇರುವಲ್ಲಿ ನಾ ಇರುವೆ,
ನನ್ನ ಮನಸಲ್ಲಿ ನೀ ಇರುವೆ,
ನಿನ್ನ ಮನಸ್ಸಲ್ಲಿ ನಾ ಇದ್ದರೂ,
ಇಲ್ಲದಂತೆ ಏಕೇ ಭಾವಿಸ್ಸುತ್ತಿರುವೆ....
ಓ ನನ್ನ ನಲ್ಮೆಯ ಪ್ರಿಯತಮನೆ.

- ashu

18 Jul 2018, 06:41 pm

ತಾವರೆಗೆ ತವರಿನ ಮೋಹ

ತಾವರೆಗೆ ತವರಿನ ಮೋಹ
ತಾರೆಗೆ ಇರುಳಿನ ಮೋಹ.!!

ಕೆಸರಾದರೂ ಹಸಿರು...
ತಾವರೆಯ ತವರು..........!!

ಇರುಳಾದರೂ ನೆರಳು...
ತಾರೆಯ ಊರು.............!!

- ಪಿ.ಜಿ.ಜ್ಯೋತಿ

18 Jul 2018, 11:01 am

ಬೆಳಕ ನೀಡುವ ಹೆಣ್ಣು

ತನ್ನ ಸುಟ್ಟರೂ ಬೆಳಕ ನೀಡುತಲೇ ಇರುವ
ದೀಪದ ಬುಡದಲ್ಲಿ ಬೆಳಕ ಚೆಲ್ಲುವರಾರು!!
ಮಂದಹಾಸದಿ ನಗುತ ಹೆಣ್ಣು ಮನೆ ಬೆಳಗಿರೆ
ಅವಳ ಮನ ತಣಿಸುವ ಆ ಬಂದು ಯಾರು!!

ಸಿಡಿಲ ಬಡಿತವ ತಡೆವ ಕೋಟೆಯು ಇವಳು
ಸಂಸಾರವನು ಸಲಹುವ ದೇವಿ ಇವಳು!!
ಕನಸುಗಳ ಹಡೆದಿರುವ ಮಾತೆ ಇವಳಾಗಿರೆ
ಮಮತೆಯ ಮಡೆಲೇ ಎಲ್ಲರ ತವರು!!

ಎಲ್ಲರ ಹಿತಕಾಗಿ ಬಸವಳಿದು ದುಡಿಯಲು
ಪಡುವ ಹೆಣಗಾಟವ ಬಲ್ಲವರು ಯಾರು!!
ಹೆಣ್ಣ ಈ ಬದುಕಿನ ಆಟದ ಕೊನೆಯ ದಿನ
ಮಸಣದಲಿ ನೆಮ್ಮದಿಯ ಕೊಟ್ಟವರಾರು!!

- ಪಿ.ಜಿ.ಜ್ಯೋತಿ

18 Jul 2018, 10:53 am

ನೀನೇ ಹೊಂಗನಸಿನಂತೆ

ಕರಿಯ ಬಾನಿನಲ್ಲಿ ಮೂಡೋ
ಹೊಳೆವ ನಕ್ಷತ್ರದಂತೆ!!
ಬರಡಾದ ಬದುಕಲ್ಲಿ ದೊರೆತೆ
ನೀ ಅಮೃತದ ನಿಧಿಯಂತೆ!!

ನಾ ಶರಣಾಗಿ ಸೆರೆಯಾದೆನು
ನಿನ್ನಯ ಸಂಗಾತಿಯಂತೆ!!
ನೀ ಅನುರಾಗದಿ ಆಲಂಗಿಸು
ನನ್ನಿಂದ ಬೇರಾಗದಂತೆ!!

ಬದುಕಿನ ತಮಸ್ಸನ್ನು ಕಳೆದು
ಬೆಳಗಿದೆ ನೀ ತೇಜಸ್ಸಿನಂತೆ!!
ಸಂಗಾತಿ ಈ ಬದುಕಿಗೆ
ನೀನೇ ಹೊಂಗನಸಿನಂತೆ!!

- ಪಿ.ಜಿ.ಜ್ಯೋತಿ

18 Jul 2018, 10:12 am

ಪ್ರೀತಿ

ಲೋಕದಲ್ಲಿ ತಾಯಿ ಪ್ರೀತಿಯೊಂದೇ
ನಕಲು ಮಾಡಿರದ ಮೊಟ್ಟ ಮೊದಲ ಸ್ವಮೇಕು.
ಉಳಿದ ಪ್ರೀತಿಗಳೆಲ್ಲ ಅದನ್ನು ಕಂಡು
ನಕಲು ಮಾಡಲು ಹೋಗಿ ಸೋತ ರಿಮೇಕು!

- ಶ್ರೀಗೋ.

18 Jul 2018, 09:38 am

ನನ್ನವಳು ಸುಂದರಿ

ನನ್ನ ಕವಿತೆಗಳಿಗೊ
ಗೊತ್ತಿಲ್ಲ ಗುರಿಯಿಲ್ಲ...

ಹೊಗಳಲೇ ಬೇಕು
ಅನ್ನೊ ಹುಚ್ಚು..
ಎನಗಿಲ್ಲ....
ಹೊಗಳದೇ ಇರದೇ ಇರಲೂ...
ಸಾಧ್ಯವಿಲ್ಲ...
ನಿನ್ನ ಹೊಲಿಕೆ ಆ ಚಂದ್ರ ತಾರೆಗಳು...
ಸಾಕಗಲ್ಲ...
ಆದರೂ...
ನಿನ್ನ ಚೆಲುವಿಗೆ
ಬರಿ ಮಾತೆ ಸಾಕಗಲ್ಲ...
ನೀನೊ ಹುಣ್ಣಿಮೆಯ
ಚಂದಿರನಂತೆ
ನಾನೊ ಸಾಗರದ ಅಲೆಯಂತೆ...

- Vishwa Shilpi

18 Jul 2018, 12:42 am

ಕಣ್ಣೀರು ಬಿದ್ದಾವು ಜೋಪಾನ..

ಕೆರೆ ಬತ್ತಿ ಬರಡಾದ
ಭೂಮಿಯನ್ನು ಹೋಲುತಿದೆ..!!
ನಿನ್ನ ನೆನೆದು ನಾ ಬರೆದ
ಕವನದ ಈ ಸಾಲು...............!!
ನಗುತಲೇ ನೀ ಓದು
ನುಡಿ ಮುತ್ತು ಖುಷಿ ಕೊಡಲಿ..!!
ಮೈ ಮರೆತು ಅಳಬೇಡ
ಕಣ್ಣೀರು ಬಿದ್ದಾವು ಜೋಪಾನ.!!

- ಪಿ.ಜಿ.ಜ್ಯೋತಿ

17 Jul 2018, 06:00 pm

ತವರು ಮನೆ ತೋಟದಲಿ

ತವರು ಮನೆ ತೋಟದಲಿ
ಕೆಂಡ ಸಂಪಿಗೆಯ ಹೂ ಅರಳಿ!!
ಮುಡಿದವರ ಮುಡಿ ಸೇರಿ
ಸಾಗಿಹುದು ಬಲು ದೂರ!!

ಮುಡಿದವರ ಮುಖದಲ್ಲಿ
ಮಂದಹಾಸವು ಅರಳಿ!!
ಘಮಿಸುತಲೇ ಬಾಡಿಹುದು
ಸಂಪಿಗೆಯು ತಾ ನರಳಿ!!

ಬಾಡಿರುವ ಹೂವಿಗಿದೋ
ಮೊದಲಿನ ಬೆಲೆಯೆಲ್ಲಿ!!
ಮುಡಿದವರು ಎಸೆದಿಹರು
ಯಾವುದೋ ಮೂಲೆಯಲಿ!!

ಮೂಲೆಯಲಿ ಬಿದ್ದಿರುವ
ಹೂವನು ಕನಿಕರಿಸುವರಾರು!!
ಮರಳಿ ಕೊಂಡೊಯ್ಯುವರೇ
ಬಂದು ಹೂವ ತವರಿನವರು!!

- ಪಿ.ಜಿ.ಜ್ಯೋತಿ

17 Jul 2018, 05:34 pm

ನೀ ಮುನಿದರೇ

ನೀ ಮುನಿದರೇ ನಾ ಬೆದರುವೆ
ನೀ ನಗುತಿರೇ ನಾ ಒಲಿಯುವೆ!!
ನನ್ನ ಮನದಲಿ ನಿನ್ನ ಸನಿಹವು
ದೂರ ಇದ್ದರೂ ಜೋಡಿ ಜೀವವು!!

ಪ್ರತೀ ಜನುಮ ಹೀಗೇ ಶರಣಾಗಿ
ಇರುವ ಆಸೆ ನಿನ್ನ ಒಲವಿಗೆ!!
ವರವಾಗಿ ನೀನು ದೊರೆತ ಮೇಲೆ
ಹಾಲು ಜೇನು ಈ ಬದುಕಿಗೆ!!

ಸಂಸಾರವೆಂಬ ನೌಕೆಯಲ್ಲಿ ಇಂದೇ
ಸಾಗಿಬಿಡಲೀ ನಮ್ಮ ಪಯಣವು!!
ಸಾಕಾರಗೊಂಡ ಬದುಕಿನಲ್ಲಿ
ನಿತ್ಯ ಪರವಶವು ನಮ್ಮ ಪ್ರೇಮವು!!

- ಪಿ.ಜಿ.ಜ್ಯೋತಿ

17 Jul 2018, 05:20 pm

ತವರಿಗೆ ಬಾ ಎಂದೆನ್ನ ಕರೆವವರು ಯಾರಿಲ್ಲ

ಅಂದು ತವರಲಿ ನಾ ಬೀಗಿ ಉರಿಯುತ್ತಿದ್ದೆ
ನಾನೇ ಈ ತವರಿನ ಹಣತೆ ಎಂದು!!
ಮುದ್ದಿಸಿದರೂ ಎಲ್ಲ ಮುದ್ದು ಮಗಳೆಂದು
ಹಬ್ಬದ ಸಡಗರವ ಅನುದಿನವೂ ತಂದು!!

ಹರೆಯದಲಿ ಚಿಗುರಿಹ ಮುಗ್ಧ ಒಲವೊಂದು
ಬೆಳೆಯಿತು ಮರವಾಗಿ ಹಸಿರಲೇ ಮಿಂದು!!
ಜಾತಿಗೋಪುರವ ಕಟ್ಟಿ ಪೂಜಿಸುವರೆದುರು
ಪ್ರೀತಿಗೆ ಅಪ್ಪಣೆಯ ಬಯಸುತಲಿ ನಿಂದೆ!!

ವಿರಹದಲಿ ಬೆಂದಿಹ ಮನವು ಚಂಚಲವಾಗಿ
ಸಂಚರಿಸ ಹೊರಟಿತು ಅಲೆಮಾರಿಯಾಗಿ!!
ಕಲ್ಲಾದ ಮನದೆದುರು ಎಷ್ಟೇ ಬೇಡಿದರೂ
ಎಳ್ಳಷ್ಟು ಬೆಲೆ ಕೊಡದೆ ಕಡೆಗೆಣಿಸಿದರು!!

ಊರ ನಡುವಿನ ದೇಗುಲದಿ ನನ್ನ ಮದುವೆ
ವಧುವು ನಾನಾಗಿರಲು ಯಾರಿಲ್ಲ ಜೊತೆಗೆ!!
ನಾ ಬಯಸಿದ ಒಲವು ವರವಾಗಿ ನಿಂತಿರಲು
ವರನ ಮನೆಯವರೆದುರು ಒಬ್ಬಂಟಿ ನಡಿಗೆ!!

ಸುಖ ದುಃಖದ ಜೊತೆ ವರುಷ ಉರುಳಿರೆ
ಸಂತಸದ ಸಂಗತಿ ಉದರದಲಿ ಇಹುದು!!
ನವ ಮಾಸ ಕಳೆಯುವ ಹಾದಿಯಲಿ ಇಂದು
ಒಂಟಿ ಮನಸದು ಕೊರಗುತಿದೆ ನೊಂದು!!

ಕೈ ಹಿಡಿದು ಕೊಂಡೊಯ್ದ ಬದುಕು ಸುಂದರ
ದೇವರೇ ನೀಡಿದ ವರದಾನ ಈ ವರ!!
ತವರಿಗೆ ಬಾ ಎಂದೆನ್ನ ಕರೆವವರು ಯಾರಿಲ್ಲ
ಹಬ್ಬದ ಸಡಗರವೂ ನನ್ನ ಪಾಲಿಗಿಲ್ಲ!!

- ಪಿ.ಜಿ.ಜ್ಯೋತಿ

17 Jul 2018, 04:53 pm