"ಮರೆಯ ಬೇಡ
ಮೈ ಮರೆಯ ಬೇಡ ಮತದಾನ ಮಾಡುವ ವೇಳೆ||
ಆಮಿಷಗಳಿಗೆ ಬಲಿಯಾಗಬೇಡ||
ಪ್ರಜಾಪ್ರಭುತ್ವದ ಪ್ರಭು ನೀ ಎನ್ನುವುದನ್ನು ಮರೆಯಬೇಡ||
ಮತಾಂಧರಿಗೆ ಮತವ ನೀಡಿ ಮರುಗಬೇಡ||
ಮರೆಯದೆ ಮತದಾನ ಮಾಡು
ಮತದಾನ ನಿನ್ನ ಜನ್ಮ ಸಿದ್ಧ ಹಕ್ಕು||
ಆಕಾಶಕ್ಕಿಂತಲೂ ಎತ್ತರ ನೀ
ಅಪ್ಪ.......
ನಾನರಿಯದ ಆ ಸಮಯದಲಿ
ಅತ್ತಾಗ ಕಣ್ಣ್ ಒರೆಸಿ
ನಿನ್ನ ಹೆಗಲಮೇಲೆ ಹೊತ್ತುಕೊಂಡಿದ್ದೆ.......
ನಾ ಮಲಗದೇ ಒಧ್ದಾಡುವಾಗ
ನಿನ್ಪೆದೆಯ ಮೇಲೆ ಬೆಚ್ಚಗೆ ನಾ ಮಲಗುತಿದ್ದೆ......
ನಿದ್ದಗೆಟ್ಟು ನೀ ಸಂಪಾದಿಸಿದರೂ ತುಸು ಸಂಬಳ
ಹಸಿವಿನ ಅರಿವಾಗದಂತೆ ನನ್ನ ನೀ ಬೆಳೆಸಿದೆ......
ಒಂದಷ್ಟು ಪ್ರೀತಿ
ಒಂದಷ್ಟು ಸ್ನೇಹ.....
ಒಂದಷ್ಟು ವಿದ್ಯೆ....
ಒಂದಷ್ಟು ನಾಗರಿಕತೆ
ಕಲಿಸಿದ ಅಪ್ಪ
ನೀ ಆಕಾಶಕ್ಕಿಂತಲೂ ಎತ್ತರ !
ಅಪರಿಚಿತರು ಪರಿಚಿತರಾದರು
ಪರಿಚಿತರು ಅಪರಿಚಿತರಾದರೂ
ಕೊನೆವರೆಗೂ ನನ್ನ ಹೃದಯಸಾಮ್ರಾಜ್ಯದಲ್ಲಿ
ವಿಂಜೃಭಿತರು ....
ಬರುವಾಗ ಒಂಟಿಯಾದರೂ,
ಬಂದಮೇಲೆ ನೂರೆಂಟು ಬಂಧು_ಮಿತ್ರರು...
ಕೆಲವರು ಅವರ ಅನುಕೂಲಕೆ ಬಂದು ಹೋಗುವವರು
ಇನ್ನು ಕೆಲವರು ನಮ್ಮ ಅನುಕೂಲಕೆ ಬರುವವರು....
ಯಾರೇ ಆದರೂ
ಅವರೆಲ್ಲರಿಗೂ ನನ್ನ ಹೃದಯತುಂಬಿದ
ಪ್ರೀತಿಯ ನಮನಗಳು!
ಅವ್ವ ನೀ ನನ್ನಡೆದವ್ವಾ....
ಕೈ ಮುಗಿದ ಮೇಲೆ ವರವ ಕೊಡುವ
ದೇವರಿಗಿಂತಲೂ
ಸದಾ ಹರಸಿ ಹಾರೈಸಿ ಕಣ್ಣ ಮುಂದೆ ಇದ್ದರೂ
ಕಣ್ಣಿಗೆ ಕಾಣದಾದರೂ ಸದಾ
ಚಡಪಡಿಸುವ ನೀನೆಯೆಂದರೆ ನನಗೆ
ಅಚ್ಚು-ಮೆಚ್ಚು.....
ಇಲ್ಲಿ ಯಾರು ಯಾರಿಗೂ ಇಲ್ಲ...
ಇದ್ದಾಗ ಇರುವೆಯಂತೆ ಮುಕ್ಕುವರು
ಬಿದ್ದಾಗ ....ಕಣ್ಣಿಗೆ ಬೀಳದಂತೆ
ಬಾಳುವರು.....!
ಕಣ್ಣು ನನ್ನದಾದ ಮೇಲೆ
ಕಣ್ಣು ಜಾರಿ ಬೀಳುವ ಹನಿ ಹನಿಗೂ
ನಾನೇ ಜಿಮ್ಮೇದಾರ
ಆಸರೆಗೆ ಹೆಗಲು ಬಯಸಿದರೂ
ಗೊತ್ತಿಲ್ಲದಂತೆ ಗತ್ತೋಳಗೆ ಬದುಕುವರು....
ಎಲ್ಲವೂ ಇದೆ
ಆದರೂ ಮತ್ತಿನ್ನೇನೋ ಬೇಕನಿಸಿದೆ......
ಇಷ್ಟೇ ಇರುವ ಹೇ ಹ್ರುದಯ
ನೀ ಕೊಡುವ ಕಷ್ಟ ಅಷ್ಟಿಷ್ಟಲ್ಲ....
ನೀ ಕೇಳುವ ಬೇಕುಗಳ ಬೆನ್ನತ್ತಿ
ನಾನಾಗುತಿರುವೆನೇನೋ ಭೇಕೂಫ!
ತಿಳಿಯಲಾರದು ನಿನಗೆ
ಈಗೀಗ ಜಗದ ಒಳಗಿರುವ ಜಂಜಡ....
ಸ್ವಚ್ಚಂದವಾಗಿರುವ ನೀನು
ಬೇಕುಗಳ ಬೆನ್ನತ್ತದಿರು.....
ಗರ್ವದಿಂದ ಬಾಳುವ ನನ್ನನ್ನು
ಗರ್ವವೇ ನನ್ನ ನುಂಗಿ ಬಾಳದಂತೆ
ಮಾಡದಿರು ನೀನಿನ್ನು!
ನಮ್ಮ ನಮ್ಮ ಅಮ್ಮಂದಿರ ಸಹನೆ ,ಸಹಾನುಭೂತಿ
ಅನುರಾಗ....
ನಮ್ಮ ನಮ್ಮ ಮಕ್ಕಳ ಅಮ್ಮಂದಿರಲಿ
ಅಪರೂಪ.......
ಒಂದಿಷ್ಟು ಕೋಪ
ಒಂದಷ್ಟು ಮುಂಗೋಪ
ಎಲ್ಲ ಬೇಡಿಕೆಗಳನು ಈಡೇರಿಸದೇ ಇರುವಾಗ
ನಮ್ಮ ಮೇಲೆ ಒಂದಷ್ಟು ಆರೋಪ.....
ಹಾಳು ಸುಡಗಾಡು ಮನಸ್ಸಿಗೆ
ಮಾಡುವ ಬೇರೆ ಕೆಲಸ ಏನಿದೆ.....
ಸುಮ್ಮನಿರದೆ,ಪದೇ ಪದೇ...
ಸುಮ್ಮನಿರುವವರ ಮೌನಕ್ಕೆ
ಕಲ್ಲು ಹೊಡೆಯುವ ಹುಂಬ ದೈರ್ಯವ ಮಾಡುತಿದೆ.....
ಏನು ಮಾಡಲಿ ಬೇಸತ್ತು ಹೋಗಿರುವೆ,
ಮಾತೆ ಕೇಳುತ್ತಿಲ್ಲ ಮನಸ್ಸು ಈಚಿಚೇಗೆ...
ವೇಗವಾಗಿ ಆದಷ್ಟು ಬೇಗ ವೈದ್ಯರಿಗೆ ಭೇಟಿಯಾಗಬೇಕಿದೆ
ಮನಸ್ಸಿಗೊಂದು ಮಾತ್ರೆ ಕೊಡಿಸಬೇಕಾಗಿದೆ!