Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾಲು ಸಾಲು ಕಂಬನಿ
ಕಣ್ಣಿನಿಂದ ಜಾರಿದೆ!!
ಕರವು ಇರದ ಬದುಕು ನನ್ನದು
ಕಣ್ಣೀರ ತಡೆಯಲು ಆಗದೆ!!
ನೂರು ಕನಸ ಕಟ್ಟಿ ನಾನು
ನಿನ್ನ ಪ್ರೀತಿ ಮಾಡಿದೆ!!
ಹೃದಯ ಇರದ ಒಲವು ನಿನ್ನದು
ನೀನು ನನ್ನ ದೂರಿದೆ!!
ಯಾರಿಗೆ ಯಾರೂ ಸ್ವಂತ ಅಲ್ಲ
ಎನ್ನುವ ಮಾತಲಿ ನಿಜವಿದೆ!!
ನಿನ್ನ ಮರೆತು ಬದುಕಬೇಕು
ಆದರೂ ಈ ಮನ ನೊಂದಿದೆ!!
- ಪಿ.ಜಿ.ಜ್ಯೋತಿ
07 Mar 2018, 08:05 am
ಸಾಲಿ ಕಲಿಯುವಾಗ ಕಣ್ಣಾಗ ನಟ್ಟಿದ್ದೆ
ಅಕ್ಕನ ಮಗಳೆಂದು ಮನದಾಗ ಇಟ್ಟಿದ್ದೆ
ವಾರದಾಗ ಮೂರ ಸಾರಿ ನೋಡಾಕ ಬರ್ತಿದ್ದೆ
ಸಣ್ಣಮಾತಿಗೆ ಮನನವು ಒಡಕಾತ
ಮನದಲ್ಲಿ ಕೋಪದ ತುಡಿತವು ಹೆಚ್ಚಾತ
ಮೋಸದ ಮುಖವಾಡ ದರಸಿ ಮಾಡಿದಿ ಕುಣಿತ
ಆಣೆ ಮಾಡಿದಿ ಗೆಳತಿ ನನ ಮುಂದ ಕುಂತ
ನೆತ್ತಿಯ ಬಡದಿ ಯುಗಾದಿ ಮುಂದಿತ್ತ
ಹೊಳೆಯ ಜಳಕಕ ಹೋಗಾಗ ಕಣ್ಣೀರೆ ಹೊಲಕೆಯಾತ
ಹೆಣ್ಣಲ್ಲ ಗೆಳತಿ ನೀ ಹೆಮ್ಮಾರಿಯಾದಿ
ನನ್ನ ಹೃದಯಕ್ಕೆ ಚಾಕುಲೇ ಇರದಿ
ಹೃದಯ ಮುರಿದು ಇಂದಿಗೆ
ಒಂದು ವರ್ಷದ ಸರದಿ
- Muttu Kuntoji Muttu
07 Mar 2018, 08:03 am
ದಾರಿಯಲ್ಲಿ
ಪ್ರತಿಮೆಗಳಂತೆ
ಹಸಿದು ಮಲಗಿದ್ದ
ಬಡಪಾಯಿಗಳನ್ನು
ಕಂಡು ಕಾಣದಂತೆ
ಸಾಗುತ್ತಿಹರು..
ಹೋರಾಟಗಾರರು !!
ನಿರ್ಜೀವ
ಪ್ರತಿಮೆಗಳನ್ನು
ರಕ್ಷಿಸಲು ... !!
✍ ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
06 Mar 2018, 11:15 pm
ಮರಗಳನ್ನು
ಕಾಣುವಾಗ
ರಸ್ತೆಯ
ಅಕ್ಕ -ಪಕ್ಕ
ನೆನಪಾಗುತ್ತಾರೆ
ನಿಸ್ವಾರ್ಥಿ
ಸಾಲುಮರದ
ತಿಮ್ಮಕ್ಜ
ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
06 Mar 2018, 10:57 pm
ನನ್ನ ಪ್ರೀತಿಯ ಕವಿತೆ
ಹೀಗೇಕೆ ನೀ ನನ್ನ ಕಾಡುತಿರುವೆ
ಮಲಗಿ ಕಣ್ಣ ರೆಪ್ಪೆ ಮುಚ್ಚಿದರು
ನಿನ್ನದೆ ಪದಗಳ ಕನಸಿನ ಮಂಪರು.
ಬೆಳಗಾಗುವ ತನಕ ತುಸು ತಾಳು
ಬಂಧಿಸಿಡುವೆ ನಿನ್ನ ಪದಗಳ ಮುತ್ತಿನ ಸಾಲು.
-ಉಮೇಶ್.
- Umesh
06 Mar 2018, 07:43 pm
ಹೊಂಬಾಳೆ ಹುಟ್ಟಿದೆ ನಮ್ಮ
ತೊಟದಲ್ಲಿ ಪಸಲು ಕೊಡುವ ಕಾಲ ಬಂದಿದೆ
ಬೀಜ ವೊಂದು ಮೊಳಕೆಯಾಗಿ ಗಿಡವಾಗಿ
ಬೆಳೆದು ಕಾಯಾಗಿ ಹೂ ಬಿಟ್ಟು ಹರಳುವ ಕಾಲ
ನೊಡಿದಿರೆನು ಅದರಂದವ ಹೊಬಾಳೆ ಹೊನ್ನ
ಕಲಶವ ಮನೆ ಮನೆಯ ಶೂಭಾರಂಬಕ್ಕೆ
ಬೇಕಲ್ಲ ಅದರ ಸೊಬಗು ಇಲ್ಲದಿದ್ದರೆ
ಅಂದವೆ ಇಲ್ಲದ ಮನೆಯಂಗಳ
ಇವಳಿಲ್ಲದೆ ಜಾತ್ರೆಗೆ ಸಿಂಗಾರವೆ ಇಲ್ಲ
ಉರಂಗಳವೆಲ್ಲ ಗಮಗಮಿಸುವೆಯಲ್ಲೆ
ನೀ ಇಲ್ಲದೆ ಕಲಶವೆ ಇಲ್ಲದಾಗೆ....
ತೊಟವೆಲ್ಲ ತುಂಬಿಸಿದೆಯಲ್ಲೆ ನೀನ್ನ ಗಮಗಮ
ಪರಿಮಳವ ಎಲ್ಲಿಂದ ಕದ್ದು ತಂದಿಯೆ ಆ ಗಂದದ
ಪರಿಮಳವ ತೊಟವೆ ಸಿಂಗಾರ ಮಾಡಿರುವೆಯಲ್ಲೆ
ನಿನ್ನಂತೆ ನಾವಾಗಬಾರದಿತ್ತೆ.......
- ರಾಗಸಿರಿ....
06 Mar 2018, 11:25 am
ಚಿಂತೆ ಸುಳಿದರೆ ಬದುಕೆ
ಹಾಳು......
ಸುಖವ ನೆನಪಿಸು ನೀನು ದಿನವು
ಕಂತೆ ಹಣದಲೆ ಎಲ್ಲ
ಗೋಳು......
ಮರೆಯೆ ಸುಂದರ ಪ್ರತಿ ಕ್ಷಣವು
ಸಖಲ ಜೀವಿಯಲಿ ಪ್ರೀತಿ
ಹುಡುಕು.....
ಉರಿಸು ಕೀರ್ತಿಯೆಂಬ ಹೊಳಪು
ನಾಲ್ಕು ದಿನದ ಬಾಳ್ವೆ
ಬದುಕು.....
ಉಳಿಸು ಲೋಕದಿ ನಿನ್ನ ನೆನಪು
- sharin rao
06 Mar 2018, 09:52 am
ಕಾದು ಕಾದು
ನೋಡುತಿರುವೆ
ನೀ ಬರುವ ದಾರಿಯನ್ನೆ
ಆಸೆಗಳ ಹೊತ್ತು ನೂರು..!
ಆಸೆಯಲ್ಲ ಕರಗಿ
ಕನಸೆಲ್ಲ ಸೊರಗಿ
ನೀ ಬರಲಿಲ್ಲವೆಂದು
ಕಣ್ಣಂಚಿನಲ್ಲೀಗ ನೀರು...!
~ ಸಿದ್ದುಕನ್ನಡಿಗ
- - ಸಿದ್ದು ಕನ್ನಡಿಗ
06 Mar 2018, 06:22 am
ಸುಯ್ಯೆಂದು ಸಾಲಾಗಿ ಹಕ್ಕಿಗಳು
ಹೊಯ್ಯೆಂದು ಜೋಡೆತ್ತುಗಳು
ಮಣ್ಣಿನ ಮಗ ಮೈಕೊಡವಿ
ಕಣ್ದೆರೆದು ನಕ್ಕಾಳು ಭೂದೇವಿ
ಅವಳ ನೇವುರ ಸದ್ದಿಗೆ
ಗಿರಿನವಿಲು ಕುಣಿಕುಣಿದು
ಹಾಲಹಸುಳೆ ಚೆಲ್ವ ಬಿರಿದು
ಮಲ್ಲಿಗೆ, ಸಂಪಿಗೆ ಕಂಪ ಸುರಿದು
ಜಗದೆದೆಯ ಕಪ್ಪು ಕಲೆ ಸರಿದು
ಝಗಮಗಿಸುತಾ ಸೂರ್ಯನಿಳಿದು
ಮನೆ-ಮನಗಳೆರಡೂ ಹೊಳೆದಾವೋ.....
ಶುಭೋದಯ, ಶುಭದಿನ
- Akku
06 Mar 2018, 04:12 am
ಸಂಜೆ ಹೊತ್ತು
ಸನಿಹ ಕೂತು
ಮನಸು ಸೋತು
ಬುಜಕೆ ಆತು
ಏನೋ ಮಾತು
ಮೈಯ ಮರೆತು..
ಕಣ್ಣಾ ಬೆಸೆದು
ಕೈಯಾ ಹೊಸೆದು
ಮೈಯಾ ಮಸೆದು
ಚಿಂತೆ ಎಸೆದು
ಪ್ರೀತಿ ಹಸಿದು
ಪ್ರಣಯ ಬಸಿದು..
ಕತ್ತಲ ಮೆರುಗು
ತೀಡಿದೆ ಸೆರಗು
ನಾಚಿಕೆ ಕರಗು
ತುಟಿಯಲಿ ಬೆರಗು
ಹತ್ತಿರಕೆ ಜರುಗು
ಕಾಮನೆಯ ಬುರುಗು.
- ಶ್ರೀಗೋ.
05 Mar 2018, 08:02 pm