Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸ್ನೇಹ ನಂದೇ , ಪ್ರೇಮ ನಂದೇ,,
ಎಂದ ದಿನ ಕಣೆಯಾಗಿದೆ ಇಂದು,,
ಮೊನ್ನೆ ಕೇಳಿದ ಕಥೆ,
ನೆನ್ನೆ ಕಂಡ ಕನಸು,,
ನಾಳೆ ಬರದಾಗಿತೆ ಜೊತೆ,,
ಪ್ರೇಮದಲ್ಲಿ ಪ್ರೇಮವಾಗಿ,,
ಮಾತಾಲ್ಲಿ ಮೌನವಾಗಿ,,
ಸ್ಥತಿ ಬದಲಾದರೂ,,
ಕಾಲ ಕಳೆದುಹೋದರು,,
ಹೇಗೆ ಬದುಕಿರುವೆ ನೀ..ಹೇಗೆ ಬದುಕಿರುವೆ ನೀ...
- Abhilash M Ramesh
18 Jan 2018, 10:17 am
ದೂರ ತೀರದ ಬಾಳಯಾನ
ನೋವು ನಲಿವುಗಳ ಸಮ್ಮಿಲನ
ನಿತ್ಯನೂತನ ಈ ಭಾವಯಾನ
ನಗುತ ಸಾಗಲಿ ಅನುದಿನ
ಅನುಕ್ಷಣ ಹೊಸತನ ಜೀವನ
ಏಳು ಬೀಳುಗಳ ಕಾನನ
ಬುದ್ಧಿ ಮನಸುಗಳ ಕದನ
ಹಿಗ್ಗದೆ ಕುಗ್ಗದೆ ಸಾಗಲಿ ತನುಮನ
ಪ್ರೀತಿಯಲಿನ ಸಿರಿತನ
ಗುಣದಲಿನ ಹಿರಿತನ
ಸೃಷ್ಟಿಸಲಿ ಪ್ರೇಮದ ಹೂಬನ
ನೋಡಿ ತಣಿಯಲಿ ಹೃನ್ಮನ
ಆದಿ ಅಂತ್ಯ ಜನನ ಮರಣ
ನಡುವೆ ಮನುವಿನ ಜೀವನ
ಬೇಡ ಅದರಲಿ ನಾನ ನೀನ
ನಿಷ್ಕಲ್ಮಶ ಪ್ರೇಮವೊಂದೆ ಚಿರಂತನ
✍ಶ್ರೀಕಾವ್ಯ
- ಶ್ರೀಕಾವ್ಯ
17 Jan 2018, 08:14 pm
ಸೂರ್ಯನ ಹಿಂಬಾಲಿಸುತ್ತವೆ ಸೂರ್ಯಕಾಂತ ಹೂ
ಸಂಕ್ರಾಂತಿಯಲಿ ಬದಲಾಯಿಸಿ ನೆಡೆದನು ಆ ಸೂರ್ಯ ತನ್ನ ಫಥವನು
ನಾ ಸೂರ್ಯಕಾಂತಿಯ ತೆರದಿ ನಿನ್ನ ಹಿಂದೆ
ನೀ ಬದಲಿಸಿ ನಿನ್ನ ಪ್ರೀತಿ ಫಥ ಬಂದೆ ನನ್ನ ಕಡೆಗೆ
ನನ್ನ ಖುಶಿಯನು ಏನೆಂದು ಹೇಳಲಿ
ಸಂಕ್ರಾಂತಿಯ ಬೆಲ್ಲ ಸಕ್ಕರೆಯ ಸಿಹಿ ಸವಿದಂತೆ
- ರಘು
16 Jan 2018, 08:06 pm
ಯಾರು ಯಾವ ಹಾಡು ಹಾಡಿದರೇನು
ನಿನ್ನ ಮಾತಿಗಿಂತ ಹಿತವಾಗಿಹುದೇನೆ ಗೆಳತಿ!
ಯಾವ ಊರು ಸುತ್ತಿದರೇನು
ನಿನ್ನೂರಲಿ ನಾ ನಿನ್ನ
ಕದ್ದು ನೋಡಿಕೊಂಡು ಓಡಾಡಿದ ಆ ದಿನಗಳನ್ನು ಮರೆಯಲಾದಿತೇನು ಗೆಳತಿ!
ಯಾರ ನೆನಪು ಹೋದರೇನು
ಯಾರ ನೆನಪು ಇದ್ದರೇನು
ನಿನ್ನ ನೆನಪು ನನ್ನ ಹೃದಯದಿಂದ
ಅಳಿಸಲಾದಿತೇನು ಗಳತಿ!!!.....
- Halesh S
16 Jan 2018, 09:15 am
ಬಣ್ಣಿಸಲೆಂತು ಪೆಣ್ಣೆ ನಿನ್ನಸದಳ ರೂಪವ
ಬೆಣ್ಣೆ ಮುದ್ದೆಯೊಲುವ ಅಂಗಗಳ ಚೆಲುವ
ಮೊಗ್ಗು ಹಿಗ್ಗಿ ಬಿರಿದ ಹಿರಿ ಹೂವಾದ ಹುಡುಗಿ
ಮಕರಂದ ತುಂಬಿ ತುಳುಕಿದ ಸೌಂದರ್ಯ ಬೆಡಗಿ
ಗಂಧ ತೇದು ಬಳಿದು ಬಿಳಿಯಾದ ನುಣುಪುಗೆನ್ನೆ
ಅಂದ ಮಿಯ್ದು ನೆನೆದು ನವುರಾದ ಅಗಲ ಕಣ್ಣೇ
ಅಚಾರಿಯೊಬ್ಬ ತೀಡಿ ತೀಡಿ ನುಣುಪಾಗಿಸಿದನೇ ಮೂಗ
ಸಂಚಾರ ನಿಯಮಗಳಂತೆ ಆಚೀಚೆ ಬಾಗಿರುವ ಹುಬ್ಬ
ಕೋಲ್ಜೇನು ಮೈ ಮರೆತು ನಿನ್ನ ತುಟಿಯ ಮೇಲೇ ಗೂಡು ಕಟ್ಟಿತೇನು?
ಪ್ರೇಮಿಯೊಬ್ಬನ ಅಗಮನವ ಕಂಡು ತುಟಿ ಮೇಲೆಯೇ ಜೇನ ಬಿಟ್ಟು ಹೊರಟಿತೇನು?
ವನಿತೆ ಸಿಹಿ ಪಾಕದಲ್ಲಿ ಅದ್ದಿ ತೆಗೆದ ತುಟಿ ದಳವ
ಇನಿತೆ ಮೃದು ಮುತ್ತನೊತ್ತಿ ರುಚಿ ನೋಡಲೇ ಒಲವ
ಕವಿತೆ ಬರೆಯ ಹೋದರೆ ಬಲೆಗೆ ಸಿಗದ ಪದ ಪುಂಜ
ಅಮೃತ ತುಂಬಿ ತುಳುಕಿದ ಪುಟ್ಟ ಮೊಲೆಗಳ ಕುಂಭ
ನಡು ಸಣ್ಣ ಬಾಗಿ ಬಳುಕಿದ ಬಳ್ಳಿಯಂತೆ
ಹಿಂಭಾರ ತೂಗಿ ನಡೆವೆಯಲ್ಲೇ ಮಿಂಚುಳ್ಳಿಯಂತೆ.
- ಶ್ರೀಗೋ.
15 Jan 2018, 08:30 am
ನಿನ್ನ ಪ್ರೀತಿ ಅಲೆಯಲ್ಲಿ ಸಿಲುಕಿರುವ ಮೀನು ನಾನು,
ನೀ ದೂರ ಓಡಬೇಡ ಉಸಿರಾಡಲಾರೆ ನಾನು;
ಪ್ರತಿ ಬಾರಿ ದಡಕ್ಕಪ್ಪಳಿಸಿ ನೋವುಂಡು ಹಿಂತಿರುಗಿದಾಗ ನೀನು,
ನಿನ್ನ ಆಗಮನವ ಕಾಯುವೆ ಕಾತರದಿ ನಾನು;
ಯಾವುದರ ಭಯಬೇಡ ಜೊತೆಗಿರಲು ನಾನು
ಕನ್ನಂಚಲೆ ಎದುರಿಸುವೆ ಈ ಜಗವನಿನ್ನು;
ನಿನ್ನೊಲವ ಆಕಾಂಕ್ಷಿ ಅಂದುಕೋ ನನ್ನ
ಬಿಟ್ಟಿರಲಾರೆ ನನ್ನ ಪ್ರೀತಿಯೇ ನಿನ್ನ.
ದಶಕದಿಂದ ಕಾದಿರುವೆ ನಿನ್ನೊಂದು ಒಪ್ಪಿಗೆಯನ್ನ
ಮರೆಯಲಾರೆ ಆ ಮೊದಲ ನೋಟದ ಅನುಭವವನ್ನ.
ಬಳಿಬಂದು ಆಲಿಸು ನನ್ನೀ ಮನದ ಮಾತೊಂದನ್ನು,
ಕ್ಷಣದಲ್ಲಿ ಕರಗುವೆ ನನ್ನೊಲವ ಶಾಖಕೆ ನೀನು.
ನನ್ನೊಲವೆ ಆಲಿಸು ಬಡಪಾಯಿಯ ನಿವೇದನೆಯನ್ನ,
ದಯೆ ತೋರಿ ಉಪಚರಿಸು ನಿನ್ನೊಲವಲಿ ನನ್ನ.
ನನ್ನೊಲವೆ ನಿನ್ನಿಂದಲೇ ನಾ...
ನೀನಿಲ್ಲದೆ ನಶ್ವರ ನನ್ನೀ ಜೀವನ.....!
- Vijaykiran NC
14 Jan 2018, 11:37 pm
ನನ್ನಷ್ಟಕ್ಕೆ ನಾನೇ ನಡೆಯುತ್ತಿದ್ದೆ
ಯಾರೋ ಬಿಟ್ಟು ಹೋದ ಹಾಳು ದಾರಿಯಲಿ
ಮುಂದೆ ಒಂದಿಷ್ಟು ಜನ
ನನಗಾಗಿ ಕಾಯುತ್ತಿಲ್ಲ
ಹಿಂದೆ ಒಂದಿಷ್ಟು ಜನ ಬರುತ್ತಿರುವ ಸದ್ದು
ತಿರುಗಿ ನೋಡುವ ಮನಸಿಲ್ಲ !
ದಾರಿ ಸಾಗುತ್ತಿಲ್ಲ
ಪಯಣ ಮುಗಿದಿಲ್ಲ
ಏನೋ ಕಲರವ
ಏನೇನೋ ತಳಮಳ
ಯಾರೋ ದಾಟಿಕೊಂಡು ಹೋದರು ನನ್ನ
ಗುರುತು ಪರಿಚಯವಿಲ್ಲದ ಜನ
ನನ್ನ ಹಾದಿ ನನಗೆ
ನನ್ನ ಹೆಜ್ಜೆ ಬೆಂಬಲವೆನಗೆ.
ಮತ್ತೊಬ್ಬರ್ಯಾರೋ ಮುಂದೆ ಹೋದರು
ಅವರ ಹಿಂದೆ ಮಗದೊಬ್ಬ
ನನ್ನ ಬದಿಗೆ ಸರಿಸಿ
ಮುಂದೆ ಸಾಗುವ ಜನಜಾತ್ರೆ..
ದಾರಿ ಬಿಟ್ಟರೆ ದಾಪುಗಾಲು ಇಕ್ಕಿ
ಬಿಡದಿದ್ದರೆ ಎಳೆದು ಹಿಂದೆ ನೂಕಿ
ಪ್ರಶ್ನಿಸಿದರೆ ಹಿಡಿದು ನಾಲ್ಕು ತದುಕಿ
ಎದೆ ಸೆಟೆಸಿದರೆ ಕುತ್ತಿಗೆಯನೆ ಹಿಸುಕಿ !
ಮುಂದೋಡುತಿಹರು ಜನರೆಲ್ಲಾ
ನನ್ನ ಹಿಂದೆ ಬಿಟ್ಟು ಸಾಗಿಹರೆಲ್ಲ
ಮೆದು ನಡೆ ಸಾಕಿನ್ನು
ಹಿಂದೆಯೇ ಉಳಿದು ಸತ್ತೇನು
ಹಾಕಿದೆನು ಹೆಜ್ಜೆ ಜೋರು ಜೋರಾಗಿ
ಆದರೂ ಸಾಲದು ವೇಗ
ನಡುನಡುವೆ ತಡೆದ ಯೋಗ ಭೋಗ !
ನನ್ನ ವೇಗ ಕಂಡ ಜನ
ತಾವೂ ಓಡುತಿಹರು
ಅವರ ಹಿಂದೆ ನಾನು
ಕಣ್ಮುಚ್ಚಿ ನೆಲಕಚ್ಚಿ ಓಡುವೆನು
ಯಾರೂ ಸಿಗುತ್ತಿಲ್ಲ ನನಗೆ
ಸಾಕಾಗಿದೆ ಈ ಯಮ ವೇಗದ ನಡಿಗೆ.
ದಾರಿ ಸಾಗುತ್ತಿಲ್ಲ
ಪಯಣ ಮುಗಿದಿಲ್ಲಾ
ಗುರಿ ಯಾರಿಗೂ ಇದ್ದಂತಿಲ್ಲ..
- ಶ್ರೀಗೋ.
14 Jan 2018, 09:46 pm
ನಮಿಸೋಣ ಭೂತಾಯಿಗೆ ಮುತ್ತಿ
ಬೆಳಗೋಣ ಸೂರ್ಯನ ರೀತಿ
ನಗಿಸೋಣ ಹರುಷವ ಬಿತ್ತಿ
ತರೋಣ ಪ್ರತಿ ಮನೆಯಲ್ಲೂ ಸಂಕ್ರಾಂತಿ
ಸಂಕ್ರಾಂತಿ ಸಂಕ್ರಾಂತಿ ಈಬದುಕು ಸಂಕ್ರಾಂತಿ
ಸಂಪ್ರೀತಿ ಬೆರೆತರೆ ಪ್ರತಿಮನೆಯು ಸಂಕ್ರಾಂತಿ
ಸಂಕ್ರಾಂತಿ ಸಂಕ್ರಾಂತಿ ಈಜೀವನ ಸಂಕ್ರಾಂತಿ
ಸ್ನೇಹ ಸೇರಿದರೆ ಮನಮನವು ಸಂಕ್ರಾಂತಿ
ವರುಣನ ಬಲವ ಗಳಿಸಿ
ಭೂದೇವಿಯ ಒಲವ ಬೆರೆಸಿ
ಧಾನ್ಯರಾಶಿಯ ಗುಡಿಯ ಕಟ್ಟಿಸಿ
ಗೋದೇವನ ಪಲ್ಲಕ್ಕಿಯಲ್ಲಿ ಮೆರೆಸಿ
ಕುಣಿಕುಣಿದಾಡುವೆವು ನಾವೆಲ್ಲಾ ಝಗಝಗಿಸಿ
ಮುಗಿಲೇರಿ ನಲಿವ ಹಕ್ಕಿಗಳ ಹಿಂಡು
ಹರುಷದಿ ಕುಣಿವ ಗೆಳೆಯರ ದಂಡು
ಒಲವು ತುಂಬಿದ ರಂಗೋಲಿಯ ನೋಡು
ತಿಳಿಸುತಿದೆ ಬದುಕು ಒಂದು ಬಣ್ಣಗಳ ಜಾಡು
ಎಳ್ಳು ಬೆಲ್ಲವ ಸವಿದು ಸವಿ ಮಾತನು ಆಡು
ನಮ್ಮ ಉಸಿರು ನ್ಯಾಯನೀತಿ
ಪಾಪಪುಣ್ಯ ನಮ್ಮ ಪದ್ದತಿ
ಕೂಡಿ ಬಾಳು ಸೇರಿ ದುಡಿ ಅನ್ನೋ ಜಾತಿ
ನಗುನಗುತಾ ಬಾಳೋದೇ ನಮ್ಮ ಛಾತಿ
ಬೆಳಗುವೆವು ಪ್ರೀತಿ ಸ್ನೇಹ ದ ಜ್ಯೋತಿ
......ಸುರೇಶ್ ಟಿ ವಿ
- ಸುರೇಶ್ ಟಿ ವಿ
14 Jan 2018, 08:54 pm
ಸಂಕ್ರಾಂತಿ ಹಬ್ಬ ಎಲ್ಲೆಲ್ಲೂ ಸಡಗರ
ಎಳ್ಳು-ಬೆಲ್ಲ ಸಿಹಿಯಾದ ಕಬ್ಬು
ಮೃಷ್ಟಾನ್ನ ಭೋಜನವು ಇದ್ದವರ ತಟ್ಟೆಗೆ..!
ತುತ್ತು ಕೂಳಿಗೂ ಗತಿಯಿಲ್ಲದೆ
ಇರುಳು ಕಳೆಯಲು ಸೂರಿಲ್ಲದೆ
ಹಸಿದ ಹೊಟ್ಟೆಯಲಿ ಕಳೆವರು
ರಾತ್ರಿಯನು ಇನ್ಯಾರೋ ನಿದ್ದೆಯಿಲ್ಲದೆ ಕಣ್ಣಿಗೆ..!
- ಸಿದ್ದು ಗುಂಡ
- - ಸಿದ್ದು ಕನ್ನಡಿಗ
14 Jan 2018, 04:46 pm
"ಹೆತ್ತು ಹೊತ್ತು ಬೆಳಸಿದೆ
ಬಾಳೆಯ ಗಿಡದಂತೆ
ಲಾಲನೆ ಪಾಲನೆ ಮಾಡಿದೆ
ಬಾಳೆಯ ಎಲೆಯಂತೆ
ಎದೆಯಲುಣಿಸಿ ಅಸಿವು ನಿಗಿಸಿದೆ
ಮಳೆಯ ಹನಿಯಂತೆ.
"ಸೇರಗು ತೊಟ್ಟಿಲು ಕಟ್ಟಿ ಮಲಗಿಸಿದೆ
ಆಗಸದ ಚಂದ್ರನಂತೆ
ಜೋ....ಜೋ...ಜೋಗುಳ ಹಾಡಿದೆ
ಜೇನಿನ ಜೆನ್ಕಾರದಂತೆ
ಶೃಂಗಾರ ಬಂಗಾರ ಮಾಡಿದೆ
ಬಂಗಾರದ ಗೊಂಬೆಯಂತೆ
"ಜೀವ ತೈದು ಜೋಪಾನ ಮಾಡಿದೆ
ಹಿಮಾದ ಮುತ್ತಿನಂತೆ,
ನೀ ಎಲ್ಲಿ ಹೋದರಲ್ಲಿ ಸೆರಗು ಹಿಡಿದು ಸುತ್ತಿದೆ
ಅವ್ವ ಅವ್ವ ಎಂದು ಮರಿ ದುಂಬಿಯಂತೆ .
"ಸರಿಸಾಟಿ ಯಾರಿಲ್ಲ
ನಿನಗೆ ಈ ಜಗದೊಳ್
ನಾ ಎಷ್ಟೇ ಗುಣಗಾನ ಮಾಡಿದರು ಸಾಲದು
ಈ ಜನ್ಮದೊಳ್ ನನ್ನವ್ವ.
ರಾಜು ಹಾಸನ
- raju
14 Jan 2018, 10:49 am