Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಗುತ್ತಿರು ಗೆಳತಿ...

ನಗುತ್ತಿರು ಗೆಳತಿ
ಎಲ್ಲೇ ಇದ್ದರೂ ಹೇಗಿದ್ದರೂ
ನನ್ನೆಲ್ಲಾ ಆಸೆಗಳಿಗೆ ಕಡಿವಾಣ
ಹಾಕುವೆನು ನಿನ್ನೊಂದು ನಗುವಿಗಾಗಿ
ಬೇರೆಯವರ ಖುಷಿಗಾಗಿ
ಪ್ರೀತಿಯನ್ನೇ ಕಳೆದುಕೊಂಡ ತ್ಯಾಗಿ ನೀನು
ದೇವರ ಆಟಕೆ ನಾ ಏನೆಂದು ಹೇಳಲಿ
ನೊಂದು ಕೇಳುತಿರುವೆನು
ಕೋರಿಕೆಯ ಈಡೇರಿಸೆಂದು ದೇವರ ಬಳಿ
ಪ್ರೀತಿಸುವ ಜೀವಗಳನು ಒಂದುಮಾಡು..

- ಪ್ರಿಯಾಂಕ

26 Nov 2017, 06:41 pm

ಉದ್ರೀ ವ್ಯಾಪಾರಾ....

ಬೆಲೆ ಕಟ್ಟುವದೆಲ್ಲ ಸಿಗುವದೆ ಅತೀ ವಿರಳ,
ಇರಬಹುದೇ? ಅದಕೆ ನಾನು ಹೆಸರಿಗಷ್ಟೇ ಪತ್ತಾರ.

ತೊರು ಬೆರಳಿನ ತುದಿಯೆ ಅವಳು ಕುರುವ ಜಾಗ,
ಹೊರಟ ಅವಳನೆ ಕರೆದು ಕಾರಣ ಕೇಳಬಹುದಾ.

ಮುಚ್ಚಿಟ್ಟ ಪುಸ್ತಕದಲಿನ ಅವಿತಿದ್ದ ಪದ ಕದ್ದು ,
ತಂದಿದ್ದರೆ ನಾ ಅವಳನು ಹೊಗಳಬಹುದಿತ್ತಾ.

ಕಿವಿ ಚುಚ್ಚುವನ ಕಣ್ಣಲಿ ಪ್ರಿತಿ ಕಸವಾದದ್ದು ಕಚಿತ,
ರೆಪ್ಪೆ ಮುಚ್ಚೊಗದಂತೆ ಕಣ್ಣಿರಿನ ಕಾವಲಿಡಲಾ?.

ಕತ್ತಲ ಬೆನ್ನಿಗೆ ಬೆಳಕ ಬಳೆವ ಚಂದ್ರನ ಕರೆದು,
ಒಬ್ಬಂಟಿ ತಂತಿಗೆ ಜೊತೆಯಾಗಿ ಮಾಡಬಹುದಾ?.

ಹಗಲೂ ರಾತ್ರಿಗಳೆನದೆ ಜೊರಾಗಿ ನಡೆದಿದೆ ನನ್ನ,
ಹರಿದ ಮುಗಿಲಿನ ಉದ್ರೀ ವ್ಯಾಪಾರಾ.......

ರಚನೆ,,ಸಚಿನ್ ಪತ್ತಾರ..

- Sachin Pattar

26 Nov 2017, 03:32 pm

ಗಳೀರ್ ಅಂದವೋ ಗೆಜ್ಜೆ

ಮೆಲ್ಲ ಮೆಲ್ಲ ನೀನಿಟ್ಟು ಬಂದಾಗ
ಒಂದೊಂದೇ ಮೃದು ಹೆಜ್ಜೆ,
ಗಳೀರ್ ಎಂದವೋ ಚೆಲುವೆ
ನಿನ್ನ ಕಾಲ ಬೆಳ್ಳಿ ಗೆಜ್ಜೆ.

ಬಿಳಿಯ ಹೊದ್ದ ಬೆಳ್ಳಿ ಮೋಡ
ತೊಳೆದು ಕಳಿಸಿದ ಪಾದ ನೋಡ,
ಎಳೆಯ ಹೂವ ಎಸಳ ಪುಳಕ
ಇಳೆಯ ತೊಳೆದ ಇಬ್ಬನಿ ಜಳಕ.

ತೊಳೆದು ಇಟ್ಟ ಶುಂಠಿ ಕೊಂಬು,
ಹೊಳೆವ ಕಾಲ ಬೆರಳ ಇಂಬು.
ಜಗದ ಅಂದವೆಲ್ಲ ಜಾರಿ
ಸೇರಿತೇನೋ ಹೇಗೋ ಸೋರಿ.

ಬಾಳೆ ದಿಂಡಿನಂತ ನುಣುಪು,
ಗಂಧ ತೀಡಿದಂತ ಒನಪು,
ಪಾದರಸದಿ ತೋಯ್ದ ಪಾದ
ಜೊತೆಗೆ ಗೆಜ್ಜೆ ದಿವ್ಯ ನಾದ !

- ಶ್ರೀಗೋ.

26 Nov 2017, 03:21 pm

ಬದುಕುವಾಸೆ

ನನಗೂ ಬದುಕುವಾಸೆ
ಏಕೆ ತಡೆಯುವೆ ಮನಸೆ
ನೀ ಏತಕೊ ನೊಂದು ನರಳುವೆ
ಅದರಲಿ ನನ್ನನೂ ಏಕೆ ಸಾಯಿಸುವೆ

ನೀನು ಕೂಡಿಟ್ಟ ಭಾವಗಳ‌ ನೋವುಗಳಿಗೆ
ನನಗೇಕೆ ತರುವೆ ಸಂಕಟದ ವಿಷ ಗಳಿಗೆ
ನಿನ್ನ ನೋವುಗಳಿಗೆ ಆಗಬೇಕು ನೀನೆ ಹೊಣೆ
ಆದರೆ ನನಗೇಕೆ ಕೊಡುತಿರುವೆ ಇಂತ ಶಿಕ್ಷೆಯ ನಾಕಾಣೆ

ಅರಿಯದೆ ನಂಬಿ ನೀನು ಬಿದ್ದ ಕನಸು ಭಾವಗಳ ಬಾವಿಗೆ
ಎದ್ದುಬರಲಾಗದೆ ಶರಣಾಗಬೇಕೆ ಈ ದೇಹ ಸಾವಿಗೆ
ಕಣ್ಣಲ್ಲಿ‌ ಜಾರಿದರು ಕಣ್ಣೀರ ಕಡಲು ಯಾರಿಲ್ಲ ನೋಡಲು
ಕಾಲಿಯಿದ್ದರೂ ಒಡಲು ಬೇಕೆನಿವುದಿಲ್ಲ ಏನು ಉಣ್ಣಲು

ಸಾವಲ್ಲಾದರು ಸಿಗಬಹುದೆ ನೆಮ್ಮದಿಯ ನಿಟ್ಟುಸಿರು
ಹೇಗಿರುವುದೋ ಏನೋ ಕಾಣದ ಆ ಸಾವಿನೂರು‌
ತಿಳಿಸಿ ಹೇಳಲು ಹೋದವರು ಹಿಂದಿರುಗಿ ಬಂದಿಲ್ಲ ಯಾರು
ಹೋಗಿ ನೋಡಿ ಬರಲೇ ಒಮ್ಮೆ ಹೇಗಿರಬಹುದು ಆ ಊರು

- ಶ್ರೀಕಾವ್ಯ

26 Nov 2017, 09:47 am

ಅಭಿಯಾನದ ದಾರಿ...

ಪರಿಣಿತಿಯು ಶರಣಾಗಿ
ಉಸಿರಾಟ ಬಿಗಿಯಾಗಿ
ನೆರಳಿರದ ನೆಲೆಯಾಗಿ
ವಿಧಿಯಾಟ ಶುರುವಾಗಿ,
ಮನಮೋಹಕವಾಗುವ, ಹೊಸ ರೋಚಕ ನೀಡುವ,
ಅಭಿಯಾನಕೆ ದಾರಿ ನೀ ತೋರಿದೆ ಇಂದು...

- Spb...@#

26 Nov 2017, 09:38 am

ಕಾಲ

ಹೇಳಬೇಕಾದವರಿಗೆ
ಹೇಳಬೇಕಾದದ್ದು
ಹೇಳೋದಕ್ಕೆ ತುಂಬಾ
ಇದೆ ಮನದಲ್ಲಿ

ಕಾಲ ಕೂಡಿ
ಬರಬೇಕಷ್ಟೇ

ಧೃಡ ವಿಶ್ವಾಸವಿದೆ
ಬಂದೇ ಬರುತ್ತದೆ
ಆ ಕಾಲ ಮತ್ತೊಮ್ಮೆ
ನನಗಾಗಿ,

ಕೇಳಿಸಿಕೊಳ್ಳುವ
ತಾಳ್ಮೆಯುಳ್ಳ
ಮನಸ್ಸುಗಳಿಗಾಗಿ...

- ಅಲ್ತಾಫ್ ಬಿಳಗುಳ

26 Nov 2017, 12:18 am

ಪ್ರೀತಿ

ಪ್ರೀತಿ ಇಲ್ಲದ ಮೇಲೆ
ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?
ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ

- ಮಹೇಶ್ ಗೌಡ

25 Nov 2017, 08:58 pm

ಗೆಳತಿ

ಗೆಳತಿ ....
ನಿನ್ನ ನೆನಪಿನಲ್ಲಿ ಒದ್ದಾಡುತ್ತಿರುವೆನು ನಾನಿಲ್ಲಿ
ಒಂದು ಸಾರಿ ಬಳಿಬಂದು
ಎದುರು ನಿಲ್ಲಬೇಕಿದೆ ನೀನಿಂದು
ಬರೆದಿರುವ ಸುಂದರ ಕವಿತೆಗಳಿಗೆ
ಜೀವ ತುಂಬಬೇಕಿದೆ ನೀನಿಂದು
ಹೇಳದೆ ಕೇಳದೇ ಹೃದಯದಲ್ಲಿ
ಅವಿತು ಕುಳಿತಿರುವೆಯಲ್ಲ
ಒಮ್ಮೆಯಾದರೂ ತಿರುಗಿ ಬಂದುಬಿಡು
ಬೊಗಸೆಯಷ್ಟು ಪ್ರೀತಿಯನ್ನಾದರೂ ನೀಡಿಹೋಗು
ಆ ನಿನ್ನ ಪ್ರೀತಿಯಲ್ಲಿ
ಕಾಲ ಕಳೆಯುವೆನು ಗೆಳತಿ.....

- ಪ್ರಿಯಾಂಕ

25 Nov 2017, 07:28 pm

ಓ ನನ್ನ ಮನಸೇ

ಓ ನನ್ನ ಮನಸೇ
ನೀನಾಗು ಬಾ
ನನ್ನ ಕನಸ ನನಸುಗಾರ


ಒಮ್ಮೆ ಮಡಿದುಹುಟ್ಟಿ ಬಾ
ಹಳೆಯ ಕೊಳೆಯ ಬಿಟ್ಟು ಬಾ
ಹೊಸ ಛಲವ ತೊಟ್ಟು ಬಾ
ಅವತಾರ ಪುರುಷನ ಕುಡಿಯಾಗಿ ಬಾ


ಭೂತ ಭವಿಷ್ಯಗಳ ಕಟ್ಟಿ ಹಾಕಿ
ಋಣ ಶೇಷಗಳ ಸುಟ್ಟು ಹಾಕಿ
ಪಂಚ ಭೂತಗಳ ಬಲವಾಗಿ
ದೇವನ ಚರಣ ಕಮಲಗಳ ಧೂಳಿಂದ ಎದ್ದು ಬಾ


ಭವದ ಬೆನ್ನ ಹರಿದು
ಇಹದ ಮೋಹವ ತೊರೆದು
ತಾಳ್ಮೆಯ ಶಿಖರವಾಗಿ
ನಿನ್ನಾತ್ಮನ, ಪರಮಾತ್ಮನ ಶಿರದಿಂದ ಇಳಿದು ಬಾ


ಚೇತನಗಳ ಪರಮಚೇತನವಾಗಿ
ಸಂಕೋಲೆಗಳ ಕೀಲಿಯಾಗಿ
ಬುದ್ಧಿಯ, ಪ್ರಬುದ್ಧ ಸರಧಿಯಾಗಿ
ಮಳೆಯಾಗಿ ಇಳೆಗೆ ಕಳೆಯಾಗಿ ಬಾ

- ನಟರಾಜ ಕೆ

25 Nov 2017, 07:23 pm

ಮುತ್ತು

ಕಡಲ ತೆರೆಯೊಂದು
ದಡಕ್ಕಪ್ಪಳಿಸುವಾಗ
ಕಂಡ ಅಪೂರ್ವ
ಮುತ್ತೊಂದನ್ನು
ನಾ ಹೆಕ್ಕಲು
ಕೈ ಚಾಚಿದಷ್ಟೇ !!

ಮತ್ತೊಂದು ಧೈತ್ಯ
ತೆರೆ ಬಂದು
ಮುತ್ತನ್ನೆಳೆದೊಯ್ಯಿತು !!

ಹೋಗಲಿ ಅದು
ನನ್ನ ದುರಾದೃಷ್ಟ !!

ಚಿಂತಿಸಿ ಫಲವಿಲ್ಲ ...

ಬೇಸರ ಕಳೆಯಲು
ಕಡಲ ಶಿಕಾರಿಗಿಳಿದ
ಎನಗೆ ದಕ್ಕಿದ
ಸಣ್ಣದರೊಂದಿಗೆ ದೊಡ್ಡ
ಮೀನೊಂದ
ಹೊತ್ತು ತಂದೆ..

ಏನಾಶ್ಚರ್ಯ !!!
ನಂಬಲಸಾಧ್ಯ..

ಮೀನಿನ ಹೊಟ್ಟೆಯಲ್ಲಿ
ನಾ ದಡದಲ್ಲಿ ಕಂಡ
ಮುತ್ತು !!!

ಇನ್ಮುಂದೆ ಆ ಮುತ್ತು
ನನ್ನದೇ, ಎಂದಿಗೂ
ಕಳೆದು ಕೊಳ್ಳಲಾರೆ..
ನನ್ನಾಣೆ, ನನಗೆ
ದಕ್ಕಿದ ಮುತ್ತಿನಾಣೆ....

- ಅಲ್ತಾಫ್ ಬಿಳಗುಳ

25 Nov 2017, 03:11 pm