Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಎಲ್ಲಿರುವೆ ನೀನೆಲ್ಲಿರುವೆ.....?

ಹೇ ತಾಯೆ .......
ಹೆ ದೇವನೆ.......
ಹೆ ಭಗವಾನ್......
ಎಲ್ಲಿಹೆ ನೀ ನುಡಿ ಮೆಲ್ಲನೆ !

ಕಾಲುಹಾದಿಯಲ್ಲಿ
ಕಾಲಿಗೆ ಅಡ್ಡಿ ಒಡ್ಡಿದ
ಕಲ್ಲನೊಯ್ದು ಇಲ್ಲಿ
ಮೂರ್ತಿ ಮಾಡಿದ
ಶಿಲ್ಪಿಯಲ್ಲಿ ನೀನಿರುವೆಯ!

ನಿರಾಶ್ರಿತರಾದ ನಿಮಗೆ
ಆಶ್ರಯ ನೀಡಲೋಸುಗ
ಹಗಲು- ಇರುಳು ದುಡಿದು
ಮಂದಿರದ ನಿಮ್ರಾತೃಗಳಾದ
ಕೂಲಿಕಾರರ ಮನದಲ್ಲಿ ನೆಲೆಸಿರುವೆಯ!

ಮಂತ್ರಗಳ ಮಳೆಗರೆಯುತ್ತ
ಘಂಟೆಯ ಗರ್ಜನೆ ಮಾಡುತ್ತ
ದೀಪದಿ ಲೋಕಬೆಳಗುವೆನೆನುತ್ತ
ಅಜ್ಞಾನ ಕೂಪಕ್ಕೆ ಭಕ್ತರ ತಳ್ಳುತ್ತ
ಉದರ ಹೊರೆಯುತಿಹ ಹಾರವರಲ್ಲಿರುವೆಯ!

ಅರಿಷಡ್ ವರ್ಗಗಳ ತವರಾಗಿ
ಸನ್ಯಾಸಿಗಳ ನಾಯಕರಾಗಿ
ಕಪಟತನದಲಿ ಕಾವಿಯ ವೇಷಧಾರಿಗಳಾಗಿ
ಸೋಗಿನ ವಿದ್ವಾಂಸಕರಾಗಿ
ಮೆರೆವ ಮಾಯಾವಂತರಲ್ಲಿ ನೀನಿರುವೆಯ!

ಸಂಪ್ರದಾಯಗಳ ಶಿರದಲ್ಲಿ ಹೊತ್ತು
ಮಾನವೀಯತೆಯ ಮಣ್ಣಲ್ಲಿ ಹೂತು
ವಿಧ- ವಿಧದ ಉಡುಗೊರೆಗಳನಿತ್ತು
ಬಹು ವಿಧಗಳ ವ್ರತಗಳ ಮಾಡುತ್ತ‍
ಗುಡಿ- ಗೋಪುರಗಳ ಸುತ್ತುವ ಭಕ್ತರಲ್ಲಿರುವೆಯ!

ಎಲ್ಲಿರುವೆ ನೀ.......
ಕಾಣದ ಕಡಲಾಳದಲ್ಲವಿತಿರುವೆಯ
ತಂಪು ಸೂಸುವ ತಂಗಾಳಿಯಲ್ಲಿರುವೆಯ
ಎಲ್ಲೆ ಮೀರಿ ಹಾರುವ ಬಾನಾಡಿಯಲ್ಲಿರುವೆಯ
ಎಲ್ಲಿರುವೆ ನೀ........?
ನುಡಿ ಬಾ ಮೆಲ್ಲನೆ........!




ಶಾರಧ

- ಶಕುಂತಲಾ

24 Nov 2017, 05:00 pm

ಕವಿ ಕವಿತೆ

ವಣಿ೯ಸಲಾಗದು ಕವಿ ಕವಿತೆಯ ಸಂಭಂದ|
ಕವಿ ಕವಿತೆಯ ಭಾವನೆಯ ಅನುಭಂದ
ಕವಿಗೆ,ಕವಿತೆಯೇ ಜೀವ...
ಕವಿತೆಗೆ,ಕವಿ ನೀಡುವ ಭಾವ....

ಎಂಥಾ..,ನೋವಿನಲೂ ಕವಿ ರಚಿಸುವ
ಕವಿತೆ
|
ಕವಿಗೆ ಕವಿತೆ,ಸಂತೋಷವ ನೀಡುವ ದೇವತೆ...|
ವಸಂತ ಕಾಲವ ಕಾಯುವ ಕೋಗಿಲೆಯಂತೆ,
ಕವಿಯ ಮನಸ್ಸನು ಕಾಡುವುದು ಕವಿತೆ
|
ತನಗೆ ತನ್ನದೆ ಆದ ರೂಪ ನಿಡುವಂತೆ
.....|

ಕವಿತೆಯಲಿ,ಕವಿ ಕಾಣುವ...
ಸೌಂಧಯ೯ದ ಮಮ೯ವ
,
ಪ್ರಕೃತಿಯ ತಕ೯ವ
,
ವಿಕೃತಿಯ ನಾಕವ
,
ಪ್ರೀತಿಯ ಲೋಕವ...

ಏಕೆಂದರೇ,ಕವಿತೆ ಕವಿಯ ಕೈಗನ್ನಡಿಯಂತೆ,
ಕವಿಯ ಮನಸ್ಸಿನ ಬಿಂಬದಂತೆ
....
ಕವಿಯ ಕನಸ್ಸಿನ ಕೂಸಂತೆ,
ಕವಿಗೆ ಕವಿತೆಯೇ,ಅಮೃತದ ಸುಧೇಯಂತೆ,
ಬಿಗಿದಪ್ಪಿ ಸಂತೈಸುವ ತಾಯೀಯಂತೆ...

- Bhagya Girish

24 Nov 2017, 04:09 pm

ತಿರುಗಿ ನೋಡಿಬಿಡು

ಜಾತ್ರೆಯಲಿ ನಿನ್ನ ಕಂಡೆ
ನಿನ್ನ ಮುದ್ದು ಮುಖವ ನೋಡಿ
ನನ್ನ ಮನಸು ನಿನ್ನ ಕೂಗಿ ಕರೆಯಿತು
ನೀ ಏಕೆ ತಿರುಗಿ ನೋಡಲಿಲ್ಲ........

ಜನ ಜಂಗುಳಿಯಲ್ಲಿ ನನ್ನ ಕಣ್ಣು
ನಿನ್ನನ್ನೆ ಹುಡುಕಿ ಹುಡುಕಿ ಸನ್ನೆ
ಮಾಡಿ ಕರೆದರು ನನ್ನ ಕಣ್ಣ ನೋಟ ಅರ್ಥ
ವಾಗದೆ ನೀ ಎಕೆ ತಿರುಗಿ ನೋಡಲೆ ಇಲ್ಲ.....

ನಿನ್ನ ಅಂಗಡಿಯ ಬಳಿ ಬಂದು
ನಿನ್ನನ್ನೆ ನೋಡುತ ಮನಸು ಕೂಗಿ ಕೂಗಿ ಕರೆದರು
ನೀ ಎಕೆ ತಿರುಗಿ ನೋಡಲಿಲ್ಲ.......

ನಿನ್ನ ಮನೆಯ ಅಂಗಳದಲ್ಲಿ ನಿಂತು
ಎಲ್ಲರ ಕಣ್ತಪ್ಪಿಸಿ ನನ್ನ ಮನಸು ಕೂಗಿದರು
ನೀ ಎಕೆ ತಿರುಗಿ ನೋಡಲಿಲ್ಲ‌......

ನೀ ಹೋಗುವ ದಾರಿಯಲ್ಲಿ ಕಾದು ಕುಳಿತು
ನಿನ್ನನ್ನೆ ಎದುರು ನೋಡುತ್ತ ನಿನ್ನನ್ನೆ ಕರೆಯುತಿದೆ
ಈ ಮನಸು ನೀ ಎಕೆ ಬರುತ್ತಿಲ್ಲ.....

ತಿರುಗಿ ನೋಡಿಬಿಡು ಒಮ್ಮೆ
ಕಾಯಿಸಬೆಡ ಈ ಮನಸ್ಸ........

- ರಾಗಸಿರಿ....

24 Nov 2017, 04:09 pm

......

ಬಹುಶಃ ನಾ
ಕಾಣಬೇಕಿದ್ದ ಕೋನೆಯ
ಕನಸಿರಬೇಕು ನೀನು ,
ಅಥವಾ
ನಾ ಕೊಲ್ಲಲಾಗದೆ ಹೋದ
ಕೋನೆಯಾಸೆಯಿರಬೇಕು,
ಇಲ್ಲವಾದರೆ
ನೀನೆನ್ನುವ ನನಗೆ
ಇಲ್ಯಾವ ಹೊಸ ಅರ್ಥಗಳು ಇಲ್ಲ ........

- Shilpa

24 Nov 2017, 03:12 pm

ಪಂಜರದ ಗಿಳಿ

ನಾನು ಒಂದು ಪಂಜರದ ಗಿಳಿ
ನನ್ನನ್ನು ಈ ಪಂಜರದಿಂದ ಬಿಡಿಸು
ನಾನು ಯಾರ ಬಳಿಯು ಕೈ ಚಾಚಲಾರೆ
ಎಲ್ಲಾ ಹಕ್ಕಿಗಳಂತೆ .
ನಾನು ಹಾರಾಡ ಬೇಕಿದೆ ಓ ನನ್ನ ದೇವರೇ
ಈ ಪಂಜರ ದಿಂದ ಬಿಡಿಸಿ ಕರೆದುಕೊಂಡು ಹೋಗು ನಾನು ಖುಷಿಯಿಂದ
ಹಾರಡುತ್ತ ಇರುತ್ತೇನೆ ......
............ಸಂಧ್ಯಾಸೂರ್ಯ .......

- sparsha surya

24 Nov 2017, 02:16 pm

ನೆನಪು

ಮರೆತು
ಹೋಗಿರುವ
ಆ ದಿನಗಳು
ಮತ್ತೇ ಮತ್ತೇ
ನೆನಪಾಗುತ್ತಿದೆ...

ಬಹುಶಃ

ಇದುವರೆಗೂ
ನಾ ಏನನ್ನೂ
ಮರೆತಿಲ್ಲ
ಎಲ್ಲವನ್ನೂ
ನೆನಪಿಟ್ಟುಕೊಂಡು

ಮರೆತಂತೆ
ನಟಿಸುತ್ತಿದ್ದೆ.....

- ಅಲ್ತಾಫ್ ಬಿಳಗುಳ

23 Nov 2017, 11:51 pm

ನಿಜವೋ...ಸುಳ್ಳೋ...

ನೀ ನನ್ನ ಪ್ರೀತಿಸುತಿರುವುದು
ನಿಜವೋ...ಸುಳ್ಳೋ...
ಅದು ನನಗೆ ತಿಳಿಯದು
ಅದರೆ,,,,
ಆ ಪ್ರೀತಿ ನನ್ನ ಹೃದಯ ವೃಂದಾವನಕೆ
ಬೆಂಕಿ ಇಡದಿದ್ದರೆ ಅಷ್ಟೇ ಸಾಕು
ನಾಳೆಯದ್ದು ನಾಳೆ
ಈಗದರ ಚಿಂತೆ ಬೇಡ
ನನ್ನಷ್ಟಕ್ಕೆ ನಾನಿರುವೆ
ಏಕಾಂಗಿಯಾಗಿರಲು ಬಿಟ್ಟು ಬಿಡು
ಸಂಬಂಧಗಳ ಬಂಧದಲಿ
ಬಂಧಿಯಾಗಿರಲು ನನಗಿಷ್ಟವಿಲ್ಲ
ಏಕೆಂದು ಪ್ರಶ್ನಿಸದಿರು
ಕಾಡದಿರು...ಹಿಂಸಿಸದಿರು...
ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತಾ
ನಾ ಉತ್ತರಿಸದ ಮಾತ್ರಕ್ಕೆ ಉತ್ತರವಿಲ್ಲ ಎಂದಲ್ಲ
ಉತ್ತರವಿದ್ದರೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ
ಏಕೆಂದರೆ,,,
ಇತ್ತೀಚಿಗೆ ನನ್ನಲಿ ನಾನೇ ಇಲ್ಲ

- ಶಂಭು

23 Nov 2017, 11:10 pm

ಕಿನ್ನರಿ......

ಕಿನ್ನರ ಲೋಕದ ಕಿನ್ನರಿ ಇವಳು
ಕಂಡರು ಕಾಣದವಳು
ಹುಡುಕಿದರೆ ಎಂದು ಸಿಗದವಳು
ಕೈ ಚಾಚಿ ಕರೆದರೆ ಕೈ ಹಿಡಿಯದವಳು
ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಮಾಯವಾಗುವವಳು
ಯಲ್ಲರ ಕನಸನು ಎಬ್ಬಿಸುವವಳು
ಕಿನ್ನರ ಲೋಕದ ಕಿನ್ನರಿ ಇವಳು
ಇವಳು ಯಾರು..........ಕಿನ್ನರಿ

- ರಾಗಸಿರಿ....

23 Nov 2017, 08:33 pm

ಮದುವೆ

ಆ ಹುಡುಗಿಯ ಚೆಲುವಿಗೆ ಮನಸೋತು
ಮದುವೆಗೆ ಒಪ್ಪಿಗೆ ಸೂಚಿಸಿದ್ದೆ ಅಂದು
ಆದರೆ
ಅವಳು ತರುತ್ತಿದ್ದ ಹೋಟಲೂಟಕ್ಕೆ
ಮನೆ -ಮಠ ಮಾರಿಕೊಂಡೆ ಇಂದು!

- ಪ್ರಿಯಾಂಕ

23 Nov 2017, 07:58 pm

ಪಶ್ಚಾತ್ತಾಪ

ಚೆಂದುಳ್ಳಿ ಚೆಲುವೆಯ ಕಂಡು ನಾ ಹೊರಟೆ
ಬೈಕಿಗೆ ಪೆಟ್ರೋಲ್ ತುಂಬಿಸಿಕೊಂಡು,
ಇಂದು
ಈರುಳ್ಳಿ ಹೆಚ್ಚುತಲಿರುವೆ ನಾ
ಅವಳ ವರಿಸಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟುಕೊಂಡು!


*ಪ್ರಿಯಾಂಕ✍*

- ಪ್ರಿಯಾಂಕ

23 Nov 2017, 07:57 pm