Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ಹೆಸರು..!

ಈ ಬಾಳ ಬಿಳಿಯ ಹಾಳೆಯಲಿ
ಚೆಲುವೆ ನಿನ್ನದೇ ಹೆಸರು!
ಬಾಳ ಸಂಪುಟದ ಪುಟಗಳಲಿ
ನಿನ್ನ ನೆನಪದು ಸದಾ ಹಸಿರು!

ಮುಂಜಾನೆ ಹಕ್ಕಿ-ಕಲರವದಲು
ಹಸಿರೆಲೆಯ ಇಬ್ಬನಿ ಮುತ್ತಿನಲು
ರವಿಯ ಹೊನ್ನ ರಶ್ಮಿಯಲು
ತೆರೆದ ಹೂವಿನೆದೆಯಲು ನಿನ್ನ-ಹೆಸರು!

ಸಂಜೆ ಮುಗಿಲ ಬೆಳ್ಳಕ್ಕಿ ಸಾಲಿನಲು
ಭುವಿಯ ಗೋಧೂಳಿ ಕೆಂಪಿನಲು
ಮೇಘಮಾಲೆಯ ಚಿತ್ತಾರದಲು
ತಂಪಿಡುವ ತಂಗಾಳಿಯಲು ನಿನ್ನ-ಹೆಸರು!

ಕಾರಿರುಳ ಅಂಧಕಾರದ ನೀರವತೆಯಲು
ಮಿನುಗಿ ಹೊಳೆವ ನಕ್ಷತ್ರರಾಶಿಯಲು
ನಗುವ ಶಶಿಯ ಶೀತಲಕಿರಣಗಳಲು
ದೀಪಗಳ ಬೆಳಕು ಕಾರಂಜಿಯಲು ನಿನ್ನ-ಹೆಸರು!


ಓದಲು ತೆರೆದ ಹೊತ್ತಿಗೆಯಲ್ಲು
ನಿದ್ರೆತುಂಬಿದ ಕಂಗಳ ರೆಪ್ಪೆಯಡಿಯಲ್ಲು
ಹಾಡುತ್ತಾ ಬರುವ ನಿನ್ನ-ಹೆಸರು
ನನ್ನ ಉಸಿರಲ್ಲೆ ನಿದ್ರಿಸಿ
ಮತ್ತೆ ಮುಂಜಾನೆ ಕನಸಲ್ಲು ಬಂದು
ಮುತ್ತಿಟ್ಟು ಮರುದಿನಕೆ ಶುಭಕೋರುವ
ದಿವ್ಯ ಮಂತ್ರವೇ ಗೆಳತಿ ನಿನ್ನ ಹೆಸರು

- ನಾಗರಾಜ್

17 Nov 2017, 09:15 am

ಪ್ರತಿಬಿಂಬ

ನಿನ್ನ ಕಣ್ಣ‌ ಕಡಲಿನಲಿ ನನ್ನ ಪ್ರತಿಬಿಂಬ
ಕ್ಷಣ ಕ್ಷಣವೂ ತೇಲುತಿರಲೆಂದು ಅನಿಸುತ್ತಿದ್ದಾಗಲೆ
ತಿಳಿದದ್ದು ಗೆಳೆಯ ನಾನು ಪ್ರೀತಿ ಪಾಲಾಗಿರುವೆ ಎಂದು


ಹುಣ್ಣಿಮೆ ರಾತ್ರಿಯಲಿ ನೀನಿರದ ನೋವಿನಲಿ
ತಿಳಿನೀರ ಎದುರಲಿ ನಾ ಹೇಗೆ ಕೂರಲಿ ಹೇಳು ಗೆಳತಿ
ಆ ಪೂರ್ಣ ಚಂದ್ರನಾಗಸದಲಿ ಕಂಡು ನಿನ್ನ ನೆನಪಾಗಿ
ನಾ ಬೀಸುವ ಒಂದೊಂದು ಕಲ್ಲ ಹೊಡೆತಕ್ಕೆ
ಎದ್ದ ಅಲೆಗಳಲಿ ನೀರಲಿ ಕುಳಿತು ನಗುತಿದ್ದ
ಚಂದ್ರನ ಪ್ರತಿಬಿಂಬಕ್ಕೂ ಸ್ಥಂಬನವಾಗಿ
ಮೇಲಿರುವ ಆ ಚಂದಿರ ಶಪಿಸಿ ಅಳುವನೇನೊ


ಕರುಳ ಕುಡಿಯ ಪ್ರತಿಬಿಂಬ
ತಾಯಿಯ ಕಣ್ಣ ಸೇರಿದರೆ
ಅವಳ ಕಣ್ಣಿಂದ ಜಾರುತಿರುವ ಕಣ್ಣೀರು ಕೂಡ
ಮುತ್ತಾಗಿ ನಗುವಲಿ ಉದುರುವುದೇನೊ

- ಶ್ರೀಕಾವ್ಯ

16 Nov 2017, 11:32 pm

ಸಿಹಿ ಮುತ್ತು

ನೋವಪಟ್ಟು ಜನ್ಮಕೊಟ್ಟು
ಹಾಲವುಣಿಸಿ ನೋವ ತಣಿಸಿ
ಅಮ್ಮ ಎಂಬ ಮೊದಲ ತೊದಲ
ನುಡಿಗೆ ಕೊಟ್ಟಳೊಂದು
ಸಿಹಿಯ ಮುತ್ತು ಯೆನಗೆ......ಸಹೃದಯಿ

- ಡಿ.ಸಿ.ಎನ್@100%

16 Nov 2017, 08:54 pm

ಹೇ ಪವಿ

ಮರೆತಾಗಿದೆ ನಿನ್ನೆಲ್ಲ ನೆನಪುಗಳನ್ನು,
ಇಣುಕಿ ನೋಡದಿರು ನಿನ್ನೊಮ್ಮೆ ನನ್ನನ್ನು,
ಬೇಸರಮೂಡಿಸಿದೆ ನಿನ್ನಿಲ್ಲದೆ ಕ್ಷಣವಿನ್ನು,
ಎಲ್ಲಿದ್ದರೇನು! ಗೆಳತಿ ಸುಖವಾಗಿರು ನಿನ್ನಿನ್ನು,
ತಳ್ಳಿಬಿಡು ಆ ನಿನ್ನೆಲ್ಲ ಭಾವನೆಗಳನ್ನು,
ದುರಾವಾಗುವೆ ನಾ ನಿನ್ನ ಸನಿಹದಿಂದಿನ್ನು......ಹೇಯ್ ಪವಿ

- ಪ ವಿ

16 Nov 2017, 05:25 pm

"ಮಾಸದಾ ಕನಸಾ"

ಮುಂಗುರುಳ ಮರೆಯಲ್ಲಿ
ಮಬ್ಬೇರಿಸಿ ಮೆರೆಯುವ
ಕಣ್ಣುಬ್ಬ ನಾ ನೋಡಿ
ತಬ್ಬಿಬ್ಬು ಗೊಂಡಿಹೆನು
ಅಬ್ಬಬ್ಬಾ ನಾ ನನ್ನನ್ನೆ
ಹುಬ್ಬುಬ್ಬಿ ಅರಿಯದೇ ಮರೆತೆ

ಕಣ್ಣಂಚಲಿ ಹರಿಬಿಡುವ
ಉನ್ಮಾದದ ಅಲೆಯಲಿ
ತೇಲಿ ಬಿಡಲೇ ನಾ........
ರಾಗವೆಂಬ ದೋಣಿಯನು
ಅನುಕ್ಷಣ ಯೋಚಿಸದೆ ನೀ
ದಡ ಸೇರಿಸು ನನ್ನನ್ನು.....

ತುಟಿಯಂಚಲಿ ತಡವರಿಸುವ
ಸವಿ ನುಡಿಯ ಆಲಿಸಲು
ಅಡಿಯಿಂಚಲಿ ಇಣುಕುತಿದೆ
ಅಣುಕಿಸದೆ ಅಂಕಿತವಾ ನೀ ನೀಡು
ಅನುದಿನವು ನೆನಪಿಸುವೆ
‌ಮಾಸಿ ಹೋಗದಾ ಕನಸಾ....‌‌.‌
-------ಚೌಡಪ್ಪ.ಪಿ
ಗಂಗಮ್ಮನಹಳ್ಳಿ.

- Chowdappa P

16 Nov 2017, 12:27 pm

ಒಲವಿನ ಕವಿತೆ

ಒಲವಿನ ಪ್ರೇಮ ಲತೆ
ಬಳುಕುತಿದೆ ನೋಡು
ಅದಕ್ಕೆ ಸರಿ ಸಾಟಿ ಯಾರು
ಹೇಳಬಲ್ಲೆಯ ನೀನು...

ಒಲವಿನ ಸಿಹಿ ಮುತ್ತು
ಚುಂಬಿಸಿದೆ ನೋಡು
ಅದಕ್ಕೆ ಬೇಲೆ ಎನು
ಕಟ್ಟಿ ಕೊಡುವೆಯ ನೀನು.....

ಒಲವಿನ ಎದೆ ಬಡಿತ
ಶುರುವಾಗಿದೆ ನೋಡು
ಅದಕ್ಕೆ ಪ್ರೀತಿಯ ಅಮೃತ
ಉಣಿಸ ಬಲ್ಲೆಯ ನೀನು......

ಒಲವಿನ ಕನಸೊಂದು
ಕೆಣಕುತಿದೆ ನೋಡು
ಅದಕ್ಕೆ ಉತ್ತರ ಕೊಟ್ಟು
ನನಸಾಗಿ ಜೂತೆ ಸೇರುವೆಯ ನೀನು.......

- ರಾಗಸಿರಿ....

16 Nov 2017, 09:35 am

ಚುಟುಕು*ವಿಶೇಷ

೧) *ರಂಗೋಲಿ*

ಚುಕ್ಕಿ...ಚುಕ್ಕಿ
ಸೇರಿ ಇಟ್ಟಾಗ
ಮಾತ್ರ
ಬಾಳೊಂದು
ಸುಂದರ
*ರಂಗೋಲಿ.*

೨) *ದೀಪ*

ನನ್ನ ಜೀವನವು
ಕತ್ತಲೆ ಆವರಿಸಿದಾಕ್ಷಣವೇ
ನೀನು *ಕಿರುದೀಪ*ವಿಡಿದು
ಬಲಗಾಲಿಟ್ಟು,
ಒಳಬಂದೆ.

೩) *ವ್ಯತ್ಯಾಸ*

ಹೂ ಕಟ್ಟುವ
ನಾರಿಗೂ
ಮುಡಿಯುವ
ನಾರಿಗೂ
ಬೆಲೆ
ಬೇರೆ-ಬೇರೆ.

೪) *ಸಲಹೆ*

ನೀನು
ಪದ್ಯ
ಬರೀಬೇಡ,
ಕಾದಂ-
ಬರಿ.

- ನಾಗರಾಜ್

16 Nov 2017, 07:50 am

,

ನೀ ನಡೆವ ಹಾದಿಗೆ
ಹೂ ಮಲ್ಲೆ ಹಾಸಿದೆ
ನೀ ಇತ್ತ ಒಲವಿಗೆ
ಈ ಹೃದಯ ಹಾಡಿದೆ
ನಿನ್ನ ಒಲವ ಪ್ರೇಮಕೆ
ಕಣ್ಣ ಹನಿ ತುಂಬಿದೆ
ಎದೆಯ ಗೂಡೊಳಗೆ
ನಿನ್ನೆಸರೇ ತುಂಬಿದೆ..,

- Avinash

15 Nov 2017, 09:47 pm

ಹನಿಗವನ

"ಮಬ್ಬಾಗಿತ್ತು ಮನ
ನೀ ಬಂದು ಹೋಗುವ ತನಕ
ಮೊಗ್ಗಾಗೇ ಇತ್ತು ಮನ
ಮುಗ್ದವಾಗಿ,
ಅರಳಿಸಿಕೊಂಡಿದ್ದು
ನನದೇ ತಪ್ಪು
ದೂರುವುದಿಲ್ಲ ನಿನ್ನನು
ಚಿಂತೆಬಿಡು..,"
#ಹನಿಗವನ

- Avinash

15 Nov 2017, 09:41 pm

ನಿಮ್ಮಂತೆ ನಾನು ಆಗುವ ಆಸೆ.....

ಹೇ ಗುಲಾಬಿಯೆ ನಿನೇಷ್ಟು ಸುಂದರ
ನಿನ್ನ ನಗುವ ನನಗು
ಸಾಲ ಕೊಡುವೆ ಎನೆ ದಿನ ಮುತ್ತಿಟ್ಟು
ಅದರ ಬಡ್ಡಿ ತೀರಿಸುವೆ......

ಹೇ ಗುಬ್ಬಿಯೆ ನಿನ್ನ ಗೂಡು ಎಷ್ಟೂ ಚಂದ
ಅಲ್ಲಿ ನನಗು ಬಾಡಿಗೆ ಕೊಡುವೆಯ
ದಿನ ಅಕ್ಕಿ ಕೊಟ್ಟು ಅದರ ಬಡ್ಡಿ
ತೀರಿಸುವೆ.....

ಹೇ ನವಿಲೆ ನಿನ್ನ ನಾಟ್ಯ ಅದೆಷ್ಟು ಅಂದ
ನನಗು ಆ ವಿಧ್ಯೆ ಕಲಿಸಿ ಕೊಡುವೆಯ
ಸದಾ ನಿನ್ನ ಜೂತೆಗೆ ಆಡಿ ಅದರ ಋಣವ ತೀರಿಸುವೆ.....

ಹೇ ದುಂಬಿಯೆ ನಿನ್ನ ಹನಿಯ
ಸಾಲ ಕೊಡುವೆಯ
ಹೂ ತೋಟವ ನೆಟ್ಟಿ
ನಿನಗೆ ಗೂಡು ಮಾಡಿಕೊಡುವೆ.....

ಹೇ ಕೋಗಿಲೆಯೆ ನಿನ್ನ ದನಿಯ ನನಗು
ಸ್ವಲ್ಪ ಕೊಡುವೆಯ ಎಷ್ಟು ಇಂಪು ಅದು
ನಿನ್ನ ದನಿಗೆ ನನ್ನ ದನಿ ಸೆರಿಸಿ ಅದರ ಋಣವ ತೀರಿಸುವೆ.....

ನನಗೂ ಸಾಲ ಕೊಡುವಿರೇನು
ತೀರಿಸುವೆನು ಅದರ ಋಣವ........
ನಿಮ್ಮಂತೆ ನಾನು ಆಗುವ ಆಸೆ
ನಿಮ್ಮಲ್ಲಿ ನನಗು ಜಾಗ ಕೊಡುವಿರೇನು.....

- ರಾಗಸಿರಿ....

15 Nov 2017, 09:11 pm