Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಸೆಗಳು

ಎಷ್ಟೆಷ್ಟೋ ಆಸೆಗಳು ಈಡೇರಿಸಿಕೊಳ್ಳಲು ದಾರಿಯಿಲ್ಲದೆ ಮುಗಿ ಬಿದ್ದಿವೆ ಇಷ್ಟಿಷ್ಟೇ ನಿನ್ನ
ಜೀವನ ಎಂದು ನಮ್ಮ ಕಣ್ಣಲ್ಲಿ ಕನಸುಗಳಾಗಿ.

ಬನದಲ್ಲಿನ ಬಾಗು ಚಂದಿರ ಹುಣ್ಣಿಮೆಯ ದಿನಕೆಂದು ಕಾದು ನೋಡಿ ಸೋತಂತೆ
ನಾವಿನ್ನೂ ಕಾಯುತ್ತೀವಿ ನಾಳೊಂದು ದಿನ
ಬರುವುದೆಂದು ನಮ್ಮ ಕಲ್ಪನೆಗಳ ಬುಟ್ಟಿ ನನಸಾಗಿ
ತುಂಬುವುದೆಂದು.

ತಂಗಾಳಿಯ ಬೆನ್ನೇರಿ ಇಬ್ಬನಿಯು ಮಳೆಯಾಗಳು
ಕಾದಂತೆ ನಾವು ಇಲ್ಲಿ ನೋವುಗಳ ಮರೆವಿಗಾಗಿ ನಲಿವುಗಳ ಬೆಳವಣಿಗೆಗಾಗಿ ಇಲ್ಲದ ಮಂದಹಾಸವನ್ನು ಮಂದಿ ಮುಂದೆಲ್ಲಾ ಎತ್ತಿಡಿದು
ತಿರುಗುತ್ತಿವಿ ಬಯಕೆಗಳ ಬಾಯಾರಿಕೆ ತೀರಿಸಿಕೊಳ್ಳುವುದಕ್ಕಾಗಿ.

ಪಟ್ಟ ಶ್ರಮ ಬೆಂಕಿಯಲ್ಲಿ ಬೂದಿಯಾಗದೆ ಚಿನ್ನದಂತೆ ಹೊಳಪು ಪಡೆದು ನಮ್ಮ ಕೈಯಲ್ಲಿನ
ಅದೃಷ್ಟ ರೇಖೆಯಾಗಳೆಂದು ಮುಖಾಮುಕಿ ಸಂದಿಸುತ್ತೀವಿ ಸವಿಮಾತುಗಳ ಪ್ರಹರಿಯನ್ನು
ಆಸೆಗಳ ಹಿಡಿರಿಕೆಗಾಗಿ.

- ಚುಕ್ಕಿ

08 Nov 2017, 11:21 pm

ಬರೀ ನೆನಪೆ.....

ವಿಷಯವಿರದ ಆ ಪಿಸುಮಾತು
ಮತ್ತೆಲಿಂದಲೋ ಎದ್ದ
ಒಂದು ಕ್ಷಣದ ಮೌನ ,
ಆ ಹುಸಿ ಕೋಪ,
ಮತ್ತೆ ನಿಸ್ವಾರ್ಥತೆಯ ನಿಗೂಡ ಪ್ರೀತಿ
ಇದೀಗ ಎಲ್ಲವೂ ಬರೀ ನೆನಪಷ್ಟೇ........

- Shilpa

08 Nov 2017, 10:55 pm

ಆತ್ಮ ನಿವೇದನೆ ......

ಕೆಲವೊಮ್ಮೆ ನನ್ನೋಡನೆ ನಾನೆ
ಮಾತಿಗಿಳಿಯುತ್ತೇನೆ
ನನ್ನೊಳಗೆ ನೀನಿರುವೆಯೆಂಬ
ಸುಳ್ಳು ಸತ್ಯವನ್ನು
ಆತ್ಮಕ್ಕೆ ನಿವೇದಿಸುತ್ತಾ .....

- Shilpa

08 Nov 2017, 10:55 pm

ನನ್ನವಳ ನೇನಪೂ.....

ಕಡಲ ಅಲೆಯಲಿ ಮುಳುಗುತಿದೆ ಚಂದ್ರಬಿಂಬ.
ಮನದ ಕಡಲಲಿ ಸುಳಿಯುತಿದೆ ನಿನ್ನದೆ ಬಿಂಬ,
ಸೋಲಲಾರದ ಭಾವದಲ್ಲಿ ಮರೆಯಾಗಿದೆ
ಒಲವಿಲ್ಲಿ,,,,ನೀ ರಾಜಿಯಾಗದ ಕನಸುಗಳು
ಕಾಡಿವೆ ದಿನವೂ ನನ್ನಲ್ಲಿ....

- ಮಳೆಯಲ್ಲಿ ಜೋತೆಯಲ್ಲಿ

08 Nov 2017, 10:09 pm

ಮತ್ತೆ ಕಾಣಾದಿರು

ಮತ್ತೆ ಕಾಣಾದಿರು
ಮತ್ತೆ ಕಾಡದಿರು
ಒಡಲ ಮಡಿಲಿಗೆ ಮತ್ತೆ
ನೋವು ತರದಿರು
ನೆನಪಿದೆ ಕಡಲ ತಡಿಯಲ್ಲಿ
ಅಂದು ಅಲೆಯಂತೆ
ಕೊಚ್ಚಿ ಹೋದ ಮನದ ಮಾತು
ಎಂದೂ ಮಾಸದು..

- ಎಸ್ಕೆ

- ಎಸ್ಕೆ

08 Nov 2017, 10:02 pm

ದೇವತೆ ನನ್ನ ಸಂಗಾತಿ

ದೇವತೆ ನನ್ನ ಸಂಗಾತಿ ಜೀವಕ್ಕೆ
ಹೆಸರಾದ ಸೊಗಸಾದ ಜೊತೆಗಾರ್ತಿ
ತಾಯಿಯಂತೆ ಮಮತೆ ತೋರುವಳು
ಗೆಳತಿಯಂತೆ ಆರೈಕೆ ಮಾಡುವಳು.

ಪ್ರತಿನಿತ್ಯ ಮನತಣಿಸುವಳು
ಮುದ್ದಾದ ಮಾತುಗಳಿಂದ ನನ್ನೊಡತಿ.
ನಂಬಿಕೆಗೆ ಇನ್ನೊಂದು ಹೆಸರಾಕೆ
ಪ್ರೀತಿಗೆ ಪ್ರತ್ಯೇಕ್ಷ ರೂಪವಾಕೆ.

ನನ್ನ ಹೃದಯದ ಗುಡಿಯಲ್ಲಿ
ಪ್ರೀತಿಯ ಹಣತೆ ಹಚ್ಚಿ
ದಿನನಿತ್ಯ ನನ್ನ ನಗುವನ್ನು ಕಾಯುವವಳು
ನೀನೇ ಚೆಲುವೆ ನನ್ನ ಒಲವಿನ ಮನವೇ.

ಸಮಯದ ಪರಿವೆಯೇತಕೆ ಸಂಗಾತಿ
ನಿನ್ನೆದುರು ಕುಂತಾಗ
ನನಗೆ ನಿನ್ನ ಕಣ್ಣಲ್ಲಿನ ನನ್ನ ರೂಪ
ಸಾಲದೆ ಜೀವನದಾದ್ಯಂತ ನಿನ್ನೊಡನೆ ನಾ ಬಾಳಲು
ತಂಪಾದ ನಿನ್ನ ಚುರುಕು ನೋಟಕ್ಕೆ ಸಿಲುಕಿ
ಬಿಡಿಸಲಾಗದ ನಂಟು ಇರುವಾಗ.

- ಚುಕ್ಕಿ

08 Nov 2017, 08:00 pm

ಏಕಾಂಗಿ

ದೂರಾದ ನನ್ನವರು
ತಿರುಗಿ ನನ್ನ ಬಳಿ ಬರಲು
ಹೃದಯ ಮತ್ತೆ ಖುಷಿಪಡಲು
ದೇವರಿಗ್ಯಾಕೋ ನನ್ನ ಮೇಲೆ
ಮುನಿಸಿರಲು,
ನನ್ನವರನು ತನ್ನತ್ತ ಕರೆಸಿಕೊಂಡನು
ಮತ್ತೆ ನನ್ನ ಒಬ್ಬಂಟಿಯಾಗಿ ಮಾಡಿ!

- ಪ್ರಿಯಾಂಕ

08 Nov 2017, 04:11 pm

ಯಾರನೆಂದು ಸ್ಮರಿಸಲಿ

ಆರನಿಲ್ಲಿ ನೆನೆಯಲಮ್ಮ
ನಿನ್ನೊಡಲಲಿ ಬೆಳೆದವರನ
ನಿನ್ನಡಿಯಲಿ ತಣಿದವರನ
ನಿನ್ನೆಸರಲಿ ಬೆರೆತವರನ

ಆರನಿಲ್ಲಿ ಪೊಗಳಲಮ್ಮ
ನಿನ್ನೇಳ್ಗೆಯಲಿ ದುಡಿದವರನ
ನಿನ್ ಪೊಗಳಿ ಕೊಂಡಾಡಿದವರನ
ನಿನ್ ಇರುವಿಕೆಯ ಜಗಕೆ ಸಾರಿದವರನ

ಎಲ್ಲರೂ ನಿನಗೊಂದೆಯಮ್ಮಾ
ವಟವೃಕ್ಷದಂತೆ ಹಬ್ಬಿ
ನೆರಳನಿತ್ತು ನಮ್ಮ ತಣಿಸುತಿಹರು
ನಿನ್ನೇಳ್ಗೆಯಲಿ ನಡೆಯಲೆಂದು........ಡಿ.ಸಿ..

- ಡಿ.ಸಿ.ನಾಗೇಶ್

08 Nov 2017, 12:09 pm

ಹುಡುಕಿ ಕೊಡೆ...

ಹುಡುಕಿ ಕೊಡೆ ನೀನು
ಕಳೆದೋದೆ ನಾನು
ಕತ್ತಲಲೀ ನಿನು ನಾನು

ಮಿಂಚಂತೆ ಬಾರದಿರೇ
ಆ ಪಿಸುಮಾತು ಆಡದಿರೇ
ಕೈಹಿಡಿದು ನಡೆಸದಿರೇ
ಈ ತುಸು ಪ್ರೀತಿ ತೋರದಿರೇ

ಕೊನೆಗೋ ಕತ್ತಲಲೀ ನೀನೆ ನಾನು

- ಡಿ.ಸಿ.ನಾಗೇಶ್

08 Nov 2017, 09:39 am

ನಾಡ ಕೋಟೆ

ನನ್ನೀ ಬರಹದಲ್ಲೀ, ಪ್ರಾಸಗಳಿಲ್ಲ
ನಗೆಸುವ ಹಾಸ್ಯವಿಲ್ಲ
ಷಟ್ಪದಿ,ಛಂದಸ್ಸಾನುಸಾರ
ಸಾಲ್ಗಳಿಲ್ಲ, ಇಹುದೊಂದೇ.......

ದಾರಿಹೋಕರಂತೆ ಅಲೆದು
ನಾಡ ಕೋಟೆ ಕಟ್ಟಿದರು
ಸ್ವ-ಸ್ತಿರತೆ ಒಳಗಿನ್ನೂ
ಹರಿದ ಹೆಂಚ ಮನೆಯಲ್ಲೇ

ತನ್ ತಾಯ್ನ ಬೆತ್ತಲ ಮಾಡುತ್ತ
ಪರರವ್ವನ ಸಿಂಗರಿಸುತ್ತಿಹರು
ಸಿಂಹವ ಸಿಂಹಾಸನದಿಂ ತಳ್ಳಿ
ಗ್ರಾಮ ಸಿಂಗವ ಕೂರಿಸ ಹೊರಟಿಹರು

ಒಗ್ಗೂಡಿಸಿದಿರಿ ನಾಡ ಯೇಳ್ಗೆಗಾಗಿ
ಕಿಚ್ಚಲೇ ಉರಿಯುತಿದೆ ಬಾಳ್ಗೇ
ನಾಡ ಹಿತಕೆ ನಿಮ್ಮ ಧನಿಯು
ಒಲ್ಲೆಯೆನ್ನುತಿಹರು ಬೇವಂತೆ ನೆನೆದು.......ಡಿ.ಸಿ

- ಡಿ.ಸಿ.ನಾಗೇಶ್

08 Nov 2017, 09:30 am