Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಲೇಖನಿ

ಲೇಖನಿಯೇ ಹೇಳು ನೀನು ನನಗೊಂದು ಪದವಾ ನೀನೇ ಎಂದು...!!

ಚಲ್ಲಲ್ಲಾಗದ ರಕ್ತದ ಕಲೆಯ ನಿನ್ನಿಂದ ಬರೆದು ನರಕದಿಂದ ಮುಕ್ತಿ ಕೊಡಿಸುವವ ನೀನು...!!

ತಿದ್ದಲಾಗದ ಹಣೆಬರಹವ ತಿದ್ದುವ ಶಕ್ತಿ ನಿನ್ನದು ಲೇಖನಿಯೆ ನನ್ನಲಿ ಇರುವೆ ನಿನಿಂದೂ...!!

ಪ್ರೀತಿಯ ಓಲೆಯ ಸಾರಥಿ ನೀನು ನರಕದಿ ಬೀಳುವ ಅಲೆಯ ಬಲೆ ನೀನು...!!

ಲೇಖನಿಯೆ ನನ್ನ ಕವನದ ರೂವಾರಿ ನೀನು ನನ್ನಲ್ಲಿನ ಭಾವನೆಯ ಬಣ್ಣದ ಒಡೆಯ ನೀನು...!!

ತಾಯಿ ಇಟ್ಟ ತುತ್ತು ಲೇಖನಿ ಕೊಟ್ಟ ಅಕ್ಷರ ಜ್ಞಾನ ಕೊಟ್ಟ ಗುರು ಎಲ್ಲರ ಜೀವದ ಜೀವಾಳ ನೀನು...!!

ಲೇಕನಿಯೆ ಎನಿರುವದು ನಿನ್ನಲ್ಲಿ ಶಿವನ ಬಣ್ಣವ ಗುಣವನ್ನೆ ತಿದ್ದುವ ಶಕ್ತಿವಂತನು ನೀನು ನನ್ನಲ್ಲಿಯೂ ಇರುವೆ ನಿನಿಂದೂ...!!

ಓಲವೀನ ಕವಿತೆಗೆ ಭಾವದ ಮುರುತಿಯಾಗಿ ಬಾಗಿಲಲ್ಲಿ ನಿಂತು ಕಾಯ್ತತ್ತಿರುವೆ ನಿನ್ನ ಪದಕ್ಕಾಗಿ ಇಂದು ನನ್ನ ಲೇಖನಿಯೆ...!!

- sailent

27 Oct 2017, 07:44 pm

ಬದುಕಿನ ಪಾಠ....

ಜಿವನದ ಹಾದಿಯಲ್ಲಿ
ಬರಿ ಹೂವಿನ ರಾಶಿ ಬೇಕೆಂದರೆ ಹೇಗೆ
ಕಲ್ಲು ಮುಳ್ಳುಗಳು ಎನು ಪಾಪ ಮಾಡಿವೆ
ಅವುಗಳು ಸಿಗಲಿ ಬಿಡಿ ಅವುಗಳಿಗು ಆಸೆ
ಜೀವನದ ಜೂತೆಯಾಗಿ ಬರೂಕೆ
ನಗು ಅಳುವಿನ ಈ ಬದುಕಲ್ಲಿ
ಕಷ್ಟ ಸುಖಗಳು ಹಾಗೆ ಇರುತ್ತವೆ.....
ಏಳೂ ಬೀಳಿನ ಬದುಕಿನಲಿ ಎಲ್ಲರ ಪರಿಚಯವು ಹಾಗಬೇಕೂ ಅದರಲ್ಲಿ ಬಂದದ್ದೇಲ
ಅನುಬವಿಸಲೆ ಬೇಕು ಒಳ್ಳೆಯ ದಾರಿ ಒಳ್ಳೆಯ ಗೆಳತನ ಒಳ್ಳೆಯ ಸಂಬದ
ಎಲ್ಲರೂ ನಮಗಾಗಿ ಅಲ್ಲ ಏಳು ಬೀಳಿನ ಬದುಕು......

- ರಾಗಸಿರಿ....

27 Oct 2017, 01:30 pm

ಕವಲುದಾರಿ

ಕುರುಡು ಕನಸಿನ ಹಿಂದೆ ಅಲೆದು
ಸುಸ್ತಾಗಿ ಕೊರಗಿವೆ ಈ ನನ್ನ ಪಾದಗಳು.
ಎತ್ತ ಹೋಗಲಿ ನಾ...?
ಕವಲು ದಾರಿಯ ಮಧ್ಯಸಿಲುಕಿ.
ಅತ್ತ ಹೋದರೆ ನಾ ಮೆಚ್ಚಿದ ಹೃದಯ
ಇತ್ತ ಹೋದರೆ ನನಗಾಗಿ ಕಾಯುವ ಹೃದಯ.
ನೋವಿನ ಕಡಲಲಿ ಕೊರಗಿ
ನೋಯುತಿಹೆನು.......
ಉತ್ತರ ಸಿಗದೆ.....

ಕನಸು.....

- kanasu

27 Oct 2017, 01:03 pm

ಗೆಳತಿ......

ಚೈತ್ರದ ಚಿಗುರಲಿ
ಅಡಗಿ ಕುಳಿತ
ಕೋಗಿಲೆಯ ಕೂಗಿನಲಿ
ನಿನ್ನದೆ ರಾಗ..!

ಕಡಲಲೆಯ ನರ್ತನದಿ
ಉಯ್ಯಾಲೆ ಆಡುತಿರುವ
ಹಂಸನಾಬೆಯ ಆನಂದದಲಿ
ನಿನ್ನದೆ ವೈಯಾರ..!

ಹಸುವಿನ ಹಿಂಬದಿಯಲಿ
ಕುಣಿದಾಡುವ ಕೆಂಗರುವಿನ
ಹೊಳೆವ ಕಂಣಿನಲಿ
ನಿನ್ನದೆ ಚೆಲುವು..!

ಮಲೆನಾಡ ಗಿರಿಸಾಲಿನಲಿ
ಘಮ್ಮೆಂದು ಹೊರಟಿರುವ
ಸಸ್ಯಶಾಮಲೆಯಲಿ
ನಿನ್ನದೆ ಒಲವು..!

- ಮಳೆಯಲ್ಲಿ ಜೋತೆಯಲ್ಲಿ

27 Oct 2017, 08:50 am

ಎದ್ದೇಳು ಚೆಲುವಿ

ಮಲಗಿಹಳಿನ್ನು ಚೆಲುವಿ
ಮಂದಹಾಸವ ಚೆಲ್ಲಿ
ಕಾಣುತಿಹಳೊ ಏನೋ
ಹೊಂಗನಸು ನಿದ್ರೆಯಲ್ಲಿ..

ಮೂಡಣದಿ ನೇಸರನು ಬಂದ
ಮದನಿಕೆಗೆ ಬಿಸಿಲ್ ಕೋಲು ತಂದ
ಬೆಳಗಾಯ್ತು ಏಳು ಚೆಲುವೆ
ಹೊಸ ದಿನವ ನೋಡು ಅಂದ.

ಎಳೆ ಬಿಸಿಲು ಮುತ್ತಿಟ್ಟು ಹೊಳೆದ ಕೆನ್ನೆ
ಸೆಳೆದಿಹಳು ನಿದ್ರೆಯಲು ಕನಸ ಕನ್ಯೆ
ಹಣೆಗೆ ತುಟಿಯೊತ್ತಿ ಕೋರುವೆನು ಶುಭವ
ನೀನೆದ್ದು ನೋಡೋಮ್ಮೆ ಈ ಸುಂದರ ಜಗವ.

- ಶ್ರೀಗೋ.

27 Oct 2017, 07:50 am

ಗಾಂಧೀಜಿಯ ನಗು

ಗಾಂಧಿಯನ್ನು ಕೊಂದರು
ಶಾಶ್ವತವಾಗಿ ಅವರ ಹೆಸರು
ಮರೆತುಬಿಡಲಿ ಎಂದು !!

ಮರೆಯಲಿಲ್ಲ ಯಾರೂ
ಮೆರೆಸಿದರು ,ಗೌರವಿಸಿದರು
ಪೂಜಿಸಿದರು, ವಂದಿಸಿದರು !!

ಗಾಂಧಿ ಸದಾ ನಗುತಲೇ ಇದ್ದಾರೆ
ನಾನಿಲ್ಲದಿರೇ ನೀವಿಲ್ಲ ಎಂಬಂತೆ..

ಜನರ ಜೇಬಿನಲ್ಲಿ
ನೋಟಿನ ರೂಪದಲ್ಲಿ....

- ಅಲ್ತಾಫ್ ಬಿಳಗುಳ

27 Oct 2017, 12:33 am

ಭಾಗ್ಯ

ಸರಕಾರದ ಯಾವ
ಭಾಗ್ಯಗಳು ಜನರ
ಬದುಕನ್ನು
ಬದಲಾಯಿಸದು !!

ಯೋಜನೆಗಳು ಜನರನ್ನು
ತಲುಪುವವರೆಗೂ !!

ಸರಕಾರದ ಯಾವ
ಯೋಜನೆಗಳು
ಜನರಿಗೆ
ತಲುಪದು !!

ಭ್ರಷ್ಟ ರಾಜಕಾರಣಿಗಳು
ಇರುವವರೆಗೂ !!

- ಅಲ್ತಾಫ್ ಬಿಳಗುಳ

26 Oct 2017, 11:50 pm

ಸಾವಿನ ಹೆಜ್ಜೆ

ಸಂತಸದ ಕ್ಷಣಗಳು
ಕನಸಿನೊಳಗೆ ಹುದುಗಿಗೊಂಡಿವೆ
ಮರೆಯಬೇಕೆನ್ನುವ ನೆನಪುಗಳು
ಮತ್ತೆ ಮತ್ತೆ ಕಾಡುತ್ತಿವೆ
ಬಹುದೂರದಲ್ಲಿನ ಸಾವಿನ ಹೆಜ್ಜೆಗಳು
ನನ್ನತ್ತ ಕೈಬೀಸಿ ಕರೆದಂತಿದೆ!

- ಪ್ರಿಯಾಂಕ

26 Oct 2017, 08:54 pm

ಸೋಲು

ಕಣ್ಣಿಗೆ ಕಟ್ಟಿದ ಈ ಅಂಧಕಾರ
ಕಳಚಬೇಕಿದೆ ನಾನೀಗ
ತನ್ನಿಂದಲೇ ಎನ್ನುವ ಅಹಂಕಾರ
ದೂರಸರಿದಂತಿದೆ ನನಗೀಗ
ದೇವರೊಬ್ಬನೇ ಜಾದುಗಾರ
ಅರಿತೆನು ಸೋತ ನಂತರ!

- ಪ್ರಿಯಾಂಕ

26 Oct 2017, 08:53 pm

ಮಂಜಿನ ಹನಿ

ಮುಂಜಾನೆಯ ಮಂಜು ಹನಿ
ನೀನೆಕೆ ಹೀಗೆ ಎಲ್ಲಿಂದ ಬಂದೆ
ಬಂದು ಇಲ್ಲಿ ಏಕೆ ನಿಂತೆ
ಆಗಸದಿಂದ ಭೂಮಿಗೆ ಮಳೆಯಂತೆ ಬಂದು
ಇಬ್ಬನಿಯಾಗಿ ಕರಗಿ ಬಂದು ನಿಂತಿರುವೆ
ಹೂಗಳ ಮೇಲೆ ಕೂತಿರುವ ನಿನ್ನ ಚುಬಿಸಲು
ಬಲುಚಂದ.......
ಹಸಿರು ಮರಗಳ ಮೇಲೆ ಅಡಗಿರುವ ನಿನ್ನ
ಬಡಿದೆಬಿಸಿ ನಿನೋಂದಿಗೆ ನೆನೆಯುವ
ಆಸೆ ಅತಿ ಸುಂದರ ..........
ಗಿಡ ಮರಗಳ ಮೇಲೆ ಕುಳಿತು ಯಾರಿಗಾಗಿ ಕಾಯುತಿರುವೆ ನೀನು ನಿನ್ನ ಆ ಕಾಯುವಿಕೆ
ನೂಡಲೆ ಬೇಕು ನಾನೀಗ......
ಓ ಮುಜಾನೆಯ ಮಂಜಿನ ಹನಿಯೆ ಸುರಿವ ಮಳೆ ನಿಂತರು ನಾನಿರುವೆ ಎಂದು ದಿನ ಬೆಳಗೆ ಎಲ್ಲರ ಸ್ವಾಗತಿಸುವ ಹನಿಯೇ......
ನಿನಗೆ ಶುಬಾಷಯ.....
ಮಂಜಿನ ಹನಿಯೆ......

- ರಾಗಸಿರಿ....

26 Oct 2017, 08:24 pm