ಮುಗುತಿಯ ಮುಂಬಾರಕೆ ನೀ ನಸು
ನಕ್ಕು ತಲೆ ಬಾಗಿಸುತಿರೆ ಹುಣ್ಣಿಮೆಯ
ಚಂದ್ರನು ನಿನ್ನ ಮೂಗನೇರಿ ಕುಳಿತಂತಿದೆ..
ಕಡಲಾಳದಲಿ ಹೆಕ್ಕಿ ತಂದ ಅಪರೂಪದ
ಮುತ್ತೊಂದನು ನಿನ್ನ ಮೂಗಿನ ತುದಿಗೆ
ಹೇಳಿ ಮಾಡಿಸಿ ಇಟ್ಟಂತಿದೆ...
ಎಳೆ ಕೆಂಪು ಕೆನ್ನೆಯ ಮೇಲೆ ಕೊಂಚ
ಕಪ್ಪು ಚುಕ್ಕೆ ಇಡಬಾರದೇ..
ಮುದ್ದಾದ ಮೂಗುತಿಯ ಸೌಂದರ್ಯಕ್ಕೆ
ನನ್ನ ಕಣ್ಣೆ ತಾಗುವಂತಿದೆ...
ನನ್ನ ಎದೆಯೊಳಗೆ ಯಾವುದೋ ಹೇಳತೀರದ
ಅಮಲು.
ಅದು ಕಾಮವೋ,ಪ್ರೇಮವೋ ನಾ ಕಾಣೆ
ಹಾದರವೆಂದು ಮಾತ್ರ ಜರಿಯದಿರು.
ಪ್ರೇಮ ಹರಿಯದಿರಲೆಂದು ಒಂದೊಂದು ಹೂವುಗಳನ್ನು
ಜೋಪಾಣವಾಗಿ ಪೋಣಿಸಿರುವೆನು.
ನಿನಗೆ ತಿಳಿದಿರಲಿ ನನ್ನ ಎದೆಯ ದಾರದ ಗಟ್ಟಿತನ.
ಕೊಳ್ಳುಬಾಕ ನಾನಲ್ಲ,
ಸವಿದು ಸವಿದು ನಿನ್ನ ಆತ್ಮ ತನಿಸಲು ಜೋಪಾನವಾಗಿ ಆಯ್ದ ಮುತ್ತುಗಳ ನಿನಗಾಗಿ
ಎತ್ತಿ ಇಟ್ಟಿರುವೆ ನನ್ನ ಎದೆಯ ಬಟ್ಟಲೊಳಗೆ.
ಒಂದು ಬಾರಿಯಾದರೂ ಹೃದಯ ಹಣತೆಯ
ಬೆಳಕಿನಲ್ಲಿ ನನ್ನ ಮುಖದ ಛಾಯೆಯನ್ನಾದರೂ ನೋಡು.
ಅಲ್ಲಿ ಕಂಡರೂ ಕಾಣಿಸಬಹುದು ನಿನಗೆ
ನನ್ನ ಆತ್ಮ ಸಂಗಾತಿಯ ರೂಪ.
--- ಸುರೇಶ ಜಕಾತಿ. ಜಮಖಂಡಿ
8746086672
ಎಲ್ಲಿಹೋದೆ ಜೀವನೀನು ಮತ್ತೆ ಬರದೆ ಮರಳಿ ಮನೆಗೆ ಮೌನದ ಮುಸುಕುಹಾಕಿ ಕಣ್ಣುಮುಚ್ಚಿ ಭದ್ರವಾಗಿ ಎಲ್ಲರನ್ನು ಬಿಟ್ಟುನೀನು ಒಂಟಿಯಾಗಿ ಹೊರಟುಹೋದೆ..... ಮತ್ತೆ ಬರದೆ ಮರಳಿ ಮನೆಗೆ ಚುಕ್ಕೆಚಂದ್ರ ಅಲ್ಲೇಇವೆ ನೆಲಜಲ ಇಲ್ಲೇಇವೆ ರಾತ್ರಿಹಗಲಿನ ಸರಧಿಯಲ್ಲೀ ಕಾಲನ ಪರಧಿಯಲ್ಲಿ ಹಕ್ಕಿಯಂತೆ ಹಾರಿಹೋದೆ .......... ಮತ್ತೆ ಬರದೆ ಮರಳಿ ಮನೆಗೆ ಕಣ್ಣಂಚಿನನೀರು ಕಣ್ಣಲ್ಲೇ ಹೆಪ್ಪುಕಟ್ಟಿ ದುಖಃದೀಕಾಮೋ೯ಡ ಕತ್ತಲೆ ಕವಿದಿರಲು ಮಾತೆಲ್ಲ ಮೂಕವಾಗಿ ನೂಕುತಿರುವ ದಿನಗಳು ಹೋದೆ ದೂರ ದೂರಕೇ ಎಲ್ಲರನ್ನು ಬಿಟ್ಟುನೀನು.
ಮತ್ತೆ ಬರದೆ ಮರಳಿ ಮನೆಗೆ
ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು,
ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು....? ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ, ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು...? ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ,
ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ,
ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ,
ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ..