Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇನಿಯನಿಗೆ ಓಲೆ

ನಿನಗಾಗಿಯೆ ಒಂದು ಪ್ರೀತಿಯ ಓಲೆಯ
ಬರೆಯಬೇಕೆನಿಸುತ್ತದೆ ದೂರಾಗಿರುವ ಇನಿಯ‌
ಹೊರಗಿಣುಕಿದಾಗಲೆಲ್ಲ ಒಳದನಿ
ನಡುಗುವುದು ‌ಕೈಯಲ್ಲಿಡಿದ ಲೇಖನಿ‌

ಗೀಚಿತ್ತು ಹರುಷದಲೆ ನೂರಾರು ಪ್ರೇಮಪತ್ರ
ನಾ ಸೇರಿ ನಗುತ ಬಾಳಬೇಕೆಂದು ನಿನ್ನ ಹತ್ರ
ಈಗ ಕಂಡಾಗ ಕಣ್ಣಾಲಿಯಲಿ ನಿಂತ ನೀರ ಹನಿ
ಸುರಿಸುತಿದೆ ಆ ಲೇಖನಿಯು ನೋಯುತ ಕಂಬನಿ

ಆ ಎಲ್ಲ ಸವಿ ನೆನಪುಗಳು ಕಾಡುವ ಘಳಿಗೆ
ತೆರೆಯುವುದು ನನ್ನೆದೆಯೊಳಗೆ ನೋವಿನ ಮಳಿಗೆ
ಸಿಗಬಹುದು ಯಾರಾದರು ಕೊಡುವವರು ನಗುವಿನ ಗುಳಿಗೆ
ಆದರೆ ನೀನೆನೆ‌ ಮೊದಲು ಕೊನೆ ಪ್ರೇಮದೊಲವಿನ ಬಾಳಿಗೆ

ಕಾಯುವೆನು ನಿನಗಾಗಿ ಆಗಲಿ ಎಷ್ಟಾದರು ವರುಷ
ನೀನಿದ್ದರೆ ನಗುತ ಜೊತೆಗೆ ಬಾಳ‌‌ಲಿ ನನಗದೆ ಹರುಷ
ನಿನ್ನ ನೆನದಾಗಲೆಲ್ಲ‌ ಸುರಿವುದು ‌ಕಣ್ಣಲಿ‌ ಕಣ್ಣೀರನಿಯ ವರ್ಷ
ನಿನಗಾಗಿ ಬರೆದ ಕಾಗದ ಮಸುಕಾಗಿದೆ, ತಾಗಿ ಕಣ್ಣೀರ ಸ್ಪರ್ಶ

ನಿನಗಾಗಿ ಓಲೆ ಬರೆಯಲು ಕುಳಿತಾಗ ಇದೆ ಪುನರಾವರ್ತನೆ
ಹೇಳಲಾಗದು ನಿನಗೆ ನನ್ನ ಮನದೊಳಗಿನ ಯಾತನೆ
ಮುನಿಸ ತೋರುತಿದೆ ಲೇಖನಿ ಸಿಕ್ಕಾಗಲೆಲ್ಲ ನಾ ಬರೆವ ಸೂಚನೆ
ಅದಕ್ಕೂ ನೋವಿರಬಹುದು ‌ಪದೇ ಪದೇ ಬರೆಯಲು ನೋವಿನ ನಿವೇದನೆ

- ಶ್ರೀಕಾವ್ಯ

16 Oct 2017, 07:03 pm

ಓ ಮುದ್ದಿನ ಕರು

ಬಾ ಬಾ ಕರುವೆ

ಬಾ ಬಾ ಕರುವೆ
ಮುದ್ದಿನ ಕರುವೆ
ಆಟವ ಆಡುತ
ಜೊತೆಯಲಿ ಇರುವೆ

ನಿನ್ನನು ನೋಡುತ
ಅಮ್ಮನ ಮರೆವೆ
ಕುಣಿಯುತ ಆಡುತ
ಜೊತೆಯಲಿ ನೆರೆವೆ

ಮುದ್ದಿನ ಮಾತಾಡುತ
ಆನಂದವ ಪಡೆವೆ
ತುಂಟಾಟದಿ ನಲಿಯುತ
ಹಾಲನು ಕುಡಿವೆ

ಅಮ್ಮಾ ಎಂದರೆ
ಅಂಬಾ ಎನ್ನುವೆ
ಎರಡೂ ಒಂದೆ
ನಿನಗೆಲ್ಲಿಯ ತಿಳಿವೆ?

- ಚಂದ್ರಶೇಖರ ಹೆಗಡೆ

16 Oct 2017, 06:53 pm

ಪ್ರಕೃತಿ

ಪ್ರಕೃತಿಯ ಚೆಲುವಿಗೆ ಯಾವುದು ಸಾಟಿ
ಯಾರದು ಈ‌‌ ಸೊಬಗಿನ‌ ಸೃಷ್ಟಿಗೆ ಮೇಟಿ
ಅವನಿಗೆ ನನ್ನ‌ ನಮನಗಳು ಕೋಟಿ ಕೋಟಿ
ಅತಿ ಅದ್ಭುತ ಅವನ‌ ಈ ಸುಂದರ ಸೃಷ್ಟಿ

ಮತ್ತೆ ಹುಟ್ಟಿ ಬರುವ ಮುಳುಗೋ‌ ರವಿ
ಸಾರುತಿರುವ ಏಳು ಬೀಳಲಿರುವ ಬಾಳ ಸವಿ
ಪೂರ್ಣ ಶಶಿಯಲ್ಲಿಯೂ ಕಲೆಗಳ ರಾಶಿ
ಅದರ ನಡುವೆ ಹಂಚುವ ಮನಸುಗಳಿಗೆ ಖುಷಿ

ಹಸಿರು ಕಾನನ, ಮಳೆಯ ಪ್ರೇಮ‌ಸಿಂಚನ
ನೀಲ ಗಗನ, ಭುವಿಯ ಪ್ರೀತಿ ಮಿಲನ
ಹಕ್ಕಿಗಳ ಚಿಲಿಪಿಲಿ ಇಂಚರ ಗಾನ, ನವಿಲ ನರ್ತನ
ಪ್ರಕೃತಿ ಒಡಲಲಿ ಸುಂದರ ಸಮ್ಮಿಲನ

ಬೆಳಗಿನ ಇಬ್ಬನಿ‌ ಇರಬಹುದೆ‌ ಕರಗುವ ಚಂದ್ರನ‌ ಕಂಬನಿ
ಮೊದಲ ಮಳೆಯಲಿ ಮಣ್ಣು ಸುವಾಸನೆಯ ಖನಿ‌
ಬಾನಲಿ ಬೆಳ್ಳಕ್ಕಿಯ ಸಾಲು, ಮೇಘಗಳ‌ ಮಾಲೆ
ಇಳೆಯಲಿ ಪಚ್ಚೆ ಪೈರು, ತಂಪು ಗಾಳಿ ಸ್ವರ್ಗ ಇಲ್ಲೆ

ನದಿಯ ಹರಿವು ಕಡಲ ಕಡೆಗಿನ ಒಲವು
ಧುಮುಕೊ ಜಲಪಾತ ಇಮ್ಮಡಿಸಿದೆ ಚೆಲುವು
ಝರಿಯ ಜುಳುಜುಳು ಗಾನವೇ ಸರಿ
ಬೆಟ್ಟ ಗುಡ್ಡಗಳ ಹಸಿರ‌ ಸಾಲು‌ ಸೌಂದರ್ಯಕೆ ಗರಿ

- ಶ್ರೀಕಾವ್ಯ

16 Oct 2017, 03:28 pm

ಆಯ್ಕೆಯೆಂಬ ಚಿಂತೆಯ ಚಿತೆ?

ಸಕಲವು ನನ್ನ ಮುಂದೆ
ಆಯ್ಕೆಯೇ ನನ್ನ ಚಿಂತೆ
ಸವಿಯುವ ಆಸೆ ಕಣ್ಣ ಮುಂದೆ
ರುಚಿಸದಿರಲು ಏನೋ ವ್ಯತೆ!

ಶ್ರಮ ವಹಿಸಲು ಸಿಗುವುದು
ಸಾಧನೆಯ ,ಸಾಗರದ ತೀರ
ನಡುವೆ ತೊಡಕುಗಳಿರುವವೆಂದು
ಹೆಳೆವೆ ಸೋಮಾರಿತನದ ದಾರ!

ದುಡಿಯುವಾಸೆ ಮನತುಂಬ
ಸಾಧಿಸುವಾಸೆ ಕಣ್ಣತುಂಬ
ಸೋಮಾರಿತನವಿರುವುದು ಮೈತುಂಬ
ಇನ್ನೂ,ಬೇಡಿದರೆ ದೇವ ನೆನೆಂಬ!



ಶಾರಧ

- ಶಕುಂತಲಾ

16 Oct 2017, 01:43 pm

ಕುರುಡು ಮನಸ್ಸು.....

ಎಲ್ಲವನ್ನು ಅರಿಯುವ ಮನಕೆ
ಅಂದಕಾರವೆ ತುಂಬಿದೆ
ಮನಸೆ ಕತ್ತಲಿನೆಡೆಗೆ ನಡೆಯುವಾಗ
ಬೆಳಕ ತರುವವರು ಯಾರು
ಮನಸ್ಸಿಗೆ ಕಣ್ಣಿಲ್ಲವಾದರೆ
ಮನಕ್ಕೆ ಕಣ್ಣಾಗಿ
ಬೆಳಕಿನೆಡೆಗೆ ದಾರಿ ತೂರುವ ಮನವ
ನೀ ಎಲ್ಲಿರುವ..........

- ರಾಗಸಿರಿ....

16 Oct 2017, 01:30 pm

ಬಣ್ಣದ ಲೇಖನಿ

ಚೆಂದದ ಲೇಖನಿ ಕೈಯಲ್ಲಿದ್ದರೂ
ನೋವಿನ ಗುರುತುಗಳು ಮನಸ್ಸಲಿತ್ತು.
ಉಡುಗೊರೆಯಾಗಿ ನೀ ಕೊಟ್ಟ ಪುಸ್ತಕ
ನನ್ನತ್ತಲೇ ಕೈಬೀಸಿ ಕರೆದಿತ್ತು!

ಒಲ್ಲದ ಮನಸಿನಿಂದ ಬರೆದ ಸಾಲುಗಳು
ಕಣ್ಣೀರಿನಲಿ ಕರಗಿ ಹೋಗಿರಲು
ನನ್ನ ಕನಸುಗಳೆಲ್ಲ ಚೂರಾದ ಹಾಗೆ
ಉಂಡೆಯಾಗಿ ಕಸದ ಮೂಲೆ ಸೇರಿದ್ದವು!

ಮತ್ತದೇ ಲೇಖನಿಯ ಹಿಡಿದು
ಹೊಸದಾದ ಹಾಳೆಯಲ್ಲಿ ಗೀಚಿದ್ದೆ
ಹೃದಯದ ಭಾವನೆಗಳ ಸೇರಿಸಿ
ಮುದ್ದಾದ ಕವನವ ರಚಿಸಿದ್ದೆ!

ಬಣ್ಣಬಣ್ಣದ ಲೇಖನಿ ನನ್ನಲಿದ್ದರೂ
ಬದುಕಿನ ಬಣ್ಣ ಮಾಸಿಹೋಗಿತ್ತು.
ಪ್ರೀತಿಸುವ ಮನಸುಗಳು ದೂರಾಗಿದ್ದರೂ
ದಪ್ಪ ಪುಸ್ತಕದ ಮತ್ತಷ್ಟು ಪುಟಗಳು
ನನಗಾಗಿ ಕಾಯುತಲಿತ್ತು!

ಪ್ರಿಯಾಂಕ✍

- ಪ್ರಿಯಾಂಕ

16 Oct 2017, 01:26 pm

ಉಸಿರು ನಿಂತ ಮೇಲೆ....

ಎಂದು ಕಾಣದ ನೂವು
ನನಗೆ ಇಂದು
ನಿನ್ನ ಯ ಪ್ರೀತಿ ಯ ಮಾತು
ಮಂಜಿನಂತೆ ಕರಗಿ ಹೂಯಿತೆ
ನಿನ್ನ ಆ ಮುದ್ದು ಮನಸು
ಮಾಯ ವಾಗಿ ಹೂಯಾತೆ
ನನ್ನ ಮಾತು ಬೇಡವೆನಿಸಿತೆ
ನಿನ್ನ ನೀನೆ ಮರೆತು ಬಿಟ್ಟರೆ
ಉಳಿಯುವುದಾದರು ಹೆಗೆ
ಅಂದಿನ ಮನಸ್ಸು ಇಂದು
ಬಾಡಿದ ಹೂ ಆಯಿತೆ
ತಿಳಿಯುವುದಾದರು ಹೇಗೆ
ತಿಳಿಸುವೆಯ ಗೆಳೆಯ
ನನ್ನ ಪ್ರೀತಿ ಕಷ್ಟ ವಾಗಿ ಹೂಯಿತೆ
ತಿಳಿಸಿ ಬಿಡು ಒಮ್ಮೆ
ಮೌನದಿ ಕೂಲ್ಲುವ ಬದಲು
ತಿಳಿಸಿ ಬಿಡು ನಿನ್ನ ಮನದ ಅನುಮಾನವ
ನಾನೆ ನಿನ್ನ ಮಡಿಲಿನಲ್ಲಿ ಬಿಟ್ಟು ಬಿಡುವೆ
ಈ ಜೀವವ..............
ತಿಳಿಸಿ ಬಿಡು ಒಮ್ಮೆ ಈ ಜೀವದ ಹಕ್ಕಿ ಹಾರಿ ಹೂಗುವ ಮುನ್ನ.......
ನಿನ್ನ ಮನದ ಕಲಹವ.........
ಈ ಉಸಿರು ನಿಂತ ಮೇಲೆ
ಅರ್ಥವಾಗ ಬಹುದೆ ನನ್ನ ಮನಸ್ಸು........
ಈ ಜೀವದ ಜೀವವೆ ನೀನು ...........

- ರಾಗಸಿರಿ....

16 Oct 2017, 01:00 pm

........

ಕಣ್ಣ ಕಣ್ಣ ಹೋಸ ಭಾಷೆಯ ಅರಿತು
ಸಣ್ಣ ಸಣ್ಣ ಪ್ರೇಮ ಪಾಠವ ಕಲಿತು
ಹಾಲು ಜೇನಿನಂತೆ ಬೇರೆತು
ಪ್ರೀತಿಸೋಣ ಜಗವ ಮರೆತು

- Shilpa

16 Oct 2017, 08:58 am

ಭಯ

ಯಾವ ಪುರುಷಾರ್ಥಕ್ಕೆ ಈ ಕುಲಗೇಡಿ
ಹುಚ್ಚು ಭಯ ಅವಿತು ಕುತಿದೆ ನನ್ನಲ್ಲಿ ನನ್ನ ಮನಸ್ಸನ್ನೇ ತವರಂತೆ ಮಾಡಿಕೊಂಡು¿?

ಸ್ವಾರ್ಥಿಗಳ ಕೈಹಿಡಿದು ಕರೆತರುವುದು ನನ್ನೆಡೆಗೆ ತಾನಿರುವೆನೆಂದು ಪ್ರತಿಕ್ಷಣವು ನನ್ನ ಕೊಂದು ಹೆದರಿಕೆಯಿಂದ ಸ್ವಾರ್ಥಕ್ಕೆ ದುರಾಸೆಗೆ ಉಸಿರು ನೀಡಲೆಂದು ನನ್ನ ಹಿಂಸಿಸಲೆಂದು¿?

ಕೂಗಿ ಕೂಗಿ ಹೇಳುತ್ತಿದೆ ನನ್ನ ಮನ ನಿನ್ನ ಸ್ವಾತಂತ್ರ್ಯ ಅರಿಸುತ್ತಿದೆ ಈ ಭಯಾನಕ ಭಯವೆಂದು ದೂರ ತಲ್ಲಿ ನಿನ್ನ ನಗುವು ಕಳೆದೊಗದಂತೆ ಕಾಪಾಡಿಕೊ ಎಂದು¿?

ಸ್ನೇಹ ಪ್ರೀತಿ ಬಂಧನಗಳು ನಿನಗೆ
ಕೊಡಬೇಕಾದ್ದು ಸಂತೋಷ ಕರುಣೆ ಇಲ್ಲದ ಕಠೋರ ನರಕವಲ್ಲ ಬಿಟ್ಟು ಬದುಕು ನಿನ್ನಲ್ಲಿನ ತಾಳ್ಮೆ ತಂದಿಟ್ಟಿಕೊ ನಿನ್ನ ಸ್ವಾರ್ಥಕ್ಕೂ ಒಂದು ರೂಪ ಅವರಂತೆ ಎಂದು¿?

ಭಯ ಹುಟ್ಟಿಸುವ ಯೋಚನೆಗಳು ನಿನ್ನೊಳಗಿನ
ಕಣ್ಣೀರಿನ ಮೂಲಕ ಹಾದು ಹೋಗುವ ಮುನ್ನ ಅಡ್ಡಿಯಾಕು ನಿನ್ನಲ್ಲಿನ ಧೈಯವನ್ನು.
ಕಿತ್ತೆಸೆಯಾಲು ವಿಷಪೂರಿತ ಭಯವೆಂಬ ಪಾಷಣವನ್ನು ರೂಪವಿಲ್ಲದೆ ಸಾಯಿಸಾಕಲೆಂದು¿?

- ಚುಕ್ಕಿ

15 Oct 2017, 11:22 pm

ಯಾರವಳು.....

ತುಂಟ ನಗೆಯನ್ನು ಚೆಲ್ಲಿ
ಕಣ್ಣಲ್ಲೇ ನನ್ನ ಸೆರೆಯಾಗಿಸಿ
ನನ್ನ ಇರುವಿಕೆಯನ್ನು ಮರೆಸಿ
ಮರೆಯಾಗಿಬಿಟ್ಟಳಲ್ಲ, ಯಾರವಳು!

ಅವಳ ಏಕಾಂತವ ಬಯಸಿ ಮನವಿಂದು
ಹುಚ್ಚನಂತೆ ಅಲೆಯುತ್ತಿದೆ,
ಸಮಯದ ಅರಿವು ಇಲ್ಲದಂತೆ
ನನ್ನ ಕೊಲ್ಲುತ್ತಿದ್ದಳಲ್ಲ, ಯಾರವಳು!

ಬೀಸುವ ತಂಗಾಳಿಯ ಜೊತೆಯಲ್ಲಿ
ತನ್ನುಸಿರನು ಸೇರಿಸಿ
ಸದ್ದಿಲ್ಲದೆ ನನ್ನುಸಿರಿನಲಿ ಬೆರೆತು
ಹೃದಯವ ಕದ್ದಳಲ್ಲ, ಯಾರವಳು!

ಕಣ್ಣರೆಪ್ಪೆಯೊಳಗೆ ಅಡಗಿ ಕುಳಿತವಳು
ಕಣ್ತೆರೆದರೆ ಕಾಣಿಸದವಳು
ಕನಸಲ್ಲೂ ಕಾಡುತಿಹಳು
ಹುಡುಕಿದರೆ ಸಿಗದವಳು, ಯಾರವಳು!

- ಮಳೆಯಲ್ಲಿ ಜೋತೆಯಲ್ಲಿ

15 Oct 2017, 09:07 pm