Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೌನ ತುಂಬಿದ ಮನಕೆ
ಜೀವನ ಬರಿ ಕತ್ತಲು.....
ಪ್ರೀತಿ ತುಂಬಿದ ಮನಕ್ಕೆ
ಬದುಕೆಲ ಬರಿ ನರಕ.....
ಮಮತೆ ತುಂಬಿದ ಮಡಿಲಿಗೆ
ಕರುಣೆ ಇಲ್ಲ ದ ತವಕ......
ಯಾರು ಇಲ್ಲದ ಜಿವಕೆ
ಆಸರೆ ಸಿಗದ ಬದುಕು.....
ಒಳ್ಳೆಯ ಮನಸ್ಸಿಗೆ ಎಂದಿಗು
ಬೆಲೆ ಸಿಗದ ಕುರುಡು ಲೋಕ.......
- ರಾಗಸಿರಿ....
05 Oct 2017, 09:24 pm
ನಾನೊಬ್ಬಳು ಕೊರವಂಜಿ
ನನ್ನ ಹೆಸರು ಸಿರಿವಂಜಿ!!
ನನ್ನ ನುಡಿಯು ಅಪರಂಜಿ
ನೀ ಕೇಳು ಗುಲಗಂಜಿ!!
ಕಣ ಕಣದಲ್ಲೂ ಕಣಿಯ
ನುಡಿಯುವುದು ನನ್ನ ಕಾಯ!!
ನೀ ಕೇಳಲು ನನ್ನ ದನಿಯ
ನಾ ನುಡಿಯುವೆ ಮರು ದನಿಯ!!
ಊರೂರು ಅಲೆಯುತಲಿ
ತಿರುಗುವ ನಾ ಕೊರವಂಜಿ!!
ನೀ ಹೋಗದಿರು ಅಂಜಿ
ನನ್ನ ನುಡಿಯು ಅಪರಂಜಿ!!
ಅಂಗೈಯಲ್ಲಿನ ಬರಹ
ತಿಳಿಸುವುದು ನಿನ್ನ ಕುರುಹ!!
ಮುಖ ಲಕ್ಷಣ ನೋಡಿದರೆ
ನಾ ನುಡಿಯುವೆ ನಿನ್ನ ಕಥೆಯ!!
- ಪಿ.ಜಿ.ಜ್ಯೋತಿ
05 Oct 2017, 08:31 pm
ಲಕ್ಷ್ಮಿ ದೇವಿ ಮನೆಗೆ ಬಂದು
ಹರಸಮ್ಮ ತಾಯಿ ನಮ್ಮನು ಇಂದು!!
ಧನ ಕನಕಗಳ ಒಡತಿ ಕರುಣಿಸಿ ಬಾರೆ
ಸಕಲ ಸೌಭಾಗ್ಯವನ್ನು ನೀ ಹೊತ್ತು ತಾರೆ!!
ಆ ತಂದೆ ಕುಬೇರನ ಸೌಭಾಗ್ಯ ಕುವರಿ
ಚಂದಿರನ ಸಹೋದರಿ ನೀ ಹರಸಮ್ಮ ತಾಯಿ!!
ಕ್ಷೀರ ಸಾಗರದಿ ಶ್ರೀ ಹರಿಯ ಸೇರಿ
ನೆಲೆಸಿರುವ ದೇವಿ ನೀ ಸಲಹಮ್ಮ ತಾಯಿ!!
ಕೃಪೆ ತೋರಿ ನೀ ಬರಲು ಕಾದಿಹುದು ಈ ಮನೆಯು ಕರುಣಿಸು ಬಾ ಮ್ಮಾ ಶ್ರೀ ಮಹಾಲಕ್ಷ್ಮಿ!!
ನಿನ್ನ ಆರಾಧನೆಗೆ ಸಂಭ್ರಮದಿ ಕಾದಿಹೆವು
ದಯೆ ತೋರಿ ಬಾ ಮ್ಮಾ ಶ್ರೀ ಮಹಾಲಕ್ಷ್ಮಿ!!
- ಪಿ.ಜಿ.ಜ್ಯೋತಿ
05 Oct 2017, 08:31 pm
ಮನದೊಳಗಿನ ಮನೆಯಲ್ಲಿ
ಪರಿಚಯದ ನಗು ಚೆಲ್ಲಿ!!
ಬಂದಿರುವ ಗೆಳೆಯ ನೀನು
ನಾ ಅರಿಯದ ಪರಿಚಿತನು!!
ಮರಳಿ ಮರಳಿ ಮನದ ಮನೆಗೆ
ಬಂದೆ ನೀನು ಬಯಸುತ ಸಲಿಗೆ!!
ದಿನ ಹೀಗೆ ನನ್ನಯ ಒಳಗೆ
ತಂದೆ ಹೂ ನಗೆ ನೀ ಬಂದು ಮೆಲ್ಲಗೆ!!
ಕಾದು ಕಾದು ಕಾಡುವ ಪರಿಗೆ
ನಿನ್ನಯ ಹೆಸರ ನಾನು ಬರೆದೆ!!
ಏಕೆ ಈ ತರ ನೀ ಬಂದು ಕಾಡುವೆ
ಹೊಸತಾದ ಈ ಬಗೆ ನೀ ತಂದೆ ಇಲ್ಲಿಗೆ!!
ಬೆರೆತ ಸನಿಹದಲ್ಲಿ ಕಲಹ
ಬಾರದಿರಲಿ ಎಂದಿಗೂ ಚೆಲುವ!!
ದಿನವೂ ಹೀಗೆಯೇ ಮನವು
ನಿನ್ನಯ ಒಲವ ಬೇಡಿದೆ!!
- ಪಿ.ಜಿ.ಜ್ಯೋತಿ
05 Oct 2017, 08:30 pm
ಕಣ್ಣಿಹುದು ಮುಖದಲ್ಲಿ
ಜಗದ ಅಂದವನ್ನು ಕಾಣಲು!!
ಅಂಧಕಾರವೇ ತುಂಬಿರುವಾಗ
ಕಣ್ಣಿದ್ದು ಕುರುಡರಿಲ್ಲಿ!!
ಅಂಧರಿಗೂ ಕಾಣುವುದು
ಅಂತರಂಗದ ಆರಾಧನೆಯಲ್ಲಿ!!
ಕಣ್ಣದ್ದೂ ಕಾಣದವರೇ
ಹೆಚ್ಚು ಈ ಲೋಕದಲ್ಲಿ!!
ಇರುಳಿನಲ್ಲಿ ಹಣತೆ ಹಚ್ಚಿ
ಬೆಳಕನ್ನು ಕಾಣುತಿಹರು!!
ಮತಿಯು ಅಂಧಕಾರದಿ
ಮುತ್ತಿರುವಾಗ ಕಣ್ಣಿದ್ದೂ ಕುರುಡರಿಲ್ಲಿ!!
- ಪಿ.ಜಿ.ಜ್ಯೋತಿ
05 Oct 2017, 08:29 pm
ನಿನ್ನ ಕನಸುಗಳಿಲ್ಲದೆ ದಿನ ರಾತ್ರಿ ಪೂರ್ತಿ ಆಗುತ್ತಿಲ್ಲ ......
ನಿನ್ನ ನೆನಪುಗಳಿಲ್ಲದೆ ದಿನ ಆರಂಭವಾಗುತ್ತಿಲ್ಲ.....
ಕಣ್ಣುಮುಚ್ಚಿ ಕಣ್ಣ ತೆರೆಯುವ ಮುನ್ನ......
ಕಲ್ಪನೆಗಳಾಗಿ ಬಳಿ ಸುಳಿದು.....
ಕವಿತೆಗಳ ಬರೆಸುವ ನನ್ನವನೇ....
ನೀ ನನ್ನೇದುರು ಬರದೆ ಕವಿತೆಯಲ್ಲೆಕೆ ಅಡಗಿ ಕುಳಿತೆ......!!!!
ಯಾವಾಗ ನನ್ನ ಬಳಿ ಬರುವೆ ....
ನಿನಗಾಗಿ ಕಾಯುತಿರುವೆ ......
ನಿನ್ನ ರಾಜಕುಮಾರಿ .......
- Shilpa
05 Oct 2017, 07:42 pm
ನೀಲಕಡಲಿನ ಬೆಳ್ನೊರೆ ಅಲೆ ನೀನು
ತೀರದಲಿ ಅಷ್ಟಷ್ಟೇ ಕರಗುವ
ಮರಳು ನಾನು..
ದೂರವೆಷ್ಟು ಕ್ರಮಿಸಲಿ
ಮರಳಿ ಮರಳಿ ನನಗೆ ನೀನು
ನಿನಗೆ ನಾನು...
- ಮಳೆಯಲ್ಲಿ ಜೋತೆಯಲ್ಲಿ
05 Oct 2017, 07:32 pm
ಹಬ್ಬವಂತೆ ಅಲಂಕಾರವಂತೆ
ಮನೆಯ ಬಾಗಿಲಿಗೆ ತಳಿರ ತೋರಣವಂತೆ
ತಳಿರ ತೋರಣ ಕಟ್ಟಿ ದುಷ್ಟ ಶಕ್ತಿ ತಡೆಯುವರಂತೆ
ನೆಮ್ಮದಿಯ ಸುಖವದರಲಿ ಅರಸುವರಂತೆ
ಜಗದೊಳಗೆ ಮನಸೊಳಗಿರಲು ದುಷ್ಟ ಮಹಾ ಮಾರಿ
ಹುಡುಕಾಡಿದರೇನು ಒಳ್ಳೆಯ ಫಲಕ್ಕಾಗಿ ಪರಿಪರಿ
ಕೊಡಬಹುದು ಕೊಂಚ ನೆಮ್ಮದಿ ದುಷ್ಟತನದ ಸವಾರಿ
ಅದೆಂದೂ ಮನ, ಮಾನವನಿಗೆಂದು ಅಪಾಯಕಾರಿ
ಮನಸೊಳಗಿದ್ದರೆ ಪ್ರೀತಿ ಪ್ರೇಮದ ಹೂರಣ
ಜಗಕ್ಕಂಚಿ ಆಗ ನೇ ಕಿ ದೆ ನೆಮ್ಮದಿಯ ಸಾರಲು ಕಾರಣ
ಆದರೆ ಜಗದೊಳಗಿನ ಈ ನೋವುಗಳ ಮಾರಣ
ಅದೇ ಅಲ್ಲವೆ ಮನೆ ಮನ ಜಗಕ್ಕೆಲ್ಲ ಕಟ್ಟಿದ ತಳಿರ ತೋರಣ
- ಶ್ರೀಕಾವ್ಯ
05 Oct 2017, 06:22 pm
ಈ ಸುಂದರ ಜಗದಲ್ಲಿ
ನಿನಗಿಂತ ಯಾರೂ ಸುಂದರಿಯಿಲ್ಲ.
ನಾನಂತೂ ನಿನ್ನ ಆರಾಧಕ
ನಿನ್ನ ಮೇಲಿನ ಸೌಂದರ್ಯಕ್ಕಲ್ಲ!..
ನೀ ಬರುವ ದಾರಿಯಲ್ಲಿ
ಕಾದಿರುವೆ ಪ್ರತಿದಿನ
ನೀ ಬಾರದೇ ಹೋದಾಗ
ನೊಂದು ಅಳುವುದು ನನ್ನ ಮನ!
ಕಣ್ಣರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವುದು ಈ ನಯನ.
ನೀ ಕಾಣದೇ ಹೋದಾಗ
ಪರಿತಪಿಸುವುದು ನನ್ನೀ ಹೃದಯ!
ನಿನ್ನ ಪ್ರೀತಿಯ ಬಂಧನದಲ್ಲಿ
ನಾ ತೇಲಿಹೋದಂತೆ,
ನಿನ್ನೊಲುಮೆಯ ಮಾತು ಕೇಳಿದಂತೆ
ಕನಸು ಕಾಣುತ್ತಿರುವೆ ನಾನಿಲ್ಲಿ!
ಓ ನನ್ನ ಪ್ರೀತಿಯ ಸಖಿ
ನೀನಾಗ ಬಯಸುವೆಯ ಬಾಳಸಂಗಾತಿ
ನೀ ಜೊತೆಗಿದ್ದರೆ ನಾನು ಸುಖಿ
ನೀ ದೂರವಾದರೆ ಸಾವೇ ಗತಿ!
- ಪ್ರಿಯಾಂಕ
05 Oct 2017, 05:59 pm
ಬದುಕೆಂಬ ರಂಗಿನಾಟದಲ್ಲಿ
ಬಣ್ಣ ಬಳಿದುಕೊಂಡವರೇ ಬೆಳಿದಿರುವರು
ಬಣ್ಣ ಬೇಡವೆಂದು ತಲೆ ಎತ್ತಿ ನಡೆದೇವರೆಲ್ಲ
ನೆರಳಿಗೂ ಗುರುತು ಸಿಗದೇ
ಕತ್ತಲಲ್ಲೇ ಮರೆಯಾಗಿ ಹೋದರು
ಕುಡಿಯದೆಯೇ ಕುಡಿದ ಹಾಗೇ
ಖುಷಿಯಲ್ಲಿಯೇ ಅಳುವಿನ ಸೋಗು
ಎಲ್ಲರು ತಮ್ಮದಲ್ಲದ ಪಾತ್ರದಲ್ಲಿ ತಲ್ಲೀನರಾಗಿರಲು
ಸೂತ್ರದಾರನಿಗೆ ಮರೆತೇ ಹೋಗಿದೆ
ತಾ ಕೊಟ್ಟ ಪಾತ್ರಗಳು
ಕುಲವೆಂಬ ಕಪ್ಪು ಬಣ್ಣ
ಆಸ್ತಿಯೆಂಬ ಕೆಂಪು ಬಣ್ಣ
ಸ್ವಾರ್ಥವೆಂಬ ನೀಲಿ ಬಣ್ಣ
ಅಧಿಕಾರವೆಂಬ ಕೇಸರಿ ಬಣ್ಣ
ಅನೀತಿಯೆಂಬ ಹಳದಿ ಬಣ್ಣ
ಎಲ್ಲ ಬಣ್ಣ ಒಟ್ಟಿಗೆ ರಾಚಿರಲು
ಮನುಷ್ಯತ್ವವೆಂಬ ಮೂಲ ಬಣ್ಣವೇ
ಆಕಾಶದಲ್ಲಿ ಮಾಯವಾಗಿತ್ತು
ಗಾದೆಪ್ಪ
- ಗಾದೆಪ್ಪ
05 Oct 2017, 05:34 pm