Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆಯಾದ ಏಕಾಂತ

ನಿನ್ನ ಕಣ್ಣೋಟಕೆ
ಯಾವ ಬಾಣ ಸಾಟಿಯು!!
ನನ್ನ ಬೆನ್ನ ಬಿಡದೇ
ಹುಡುಕಿ ಬಂದ ಬೇಟೆಯು!!

ನನ್ನ ಏಕಾಂತವನ್ನು
ತಿವಿದು ನೀನು ಕೆಡುವಿದೆ!!
ಬಾಳ ಸಂಗಾತಿ
ಎಂಬ ಮಂತ್ರ ಪಠಿಸಿದೆ!!

ಈ ಯವ್ವನದ ಕುದುರೆನು ಏರಿ
ಓಡಿಸ ಬಂದೆಯಾ ನೀ ಸವಾರಿ!!
ನನ್ನ ಈ ತನುವನು ಮೀಟಿ ನೀನು
ನುಡಿಸ ಬಂದಯಾ ವಾದ್ಯಗಾರ!!

ನಿನ್ನ ತಾರುಣ್ಯದ ರೂಪ ಕಂಡು
ಮನಸೋತು ಮರುಳಾದೆ ನಾನು!!
ನಿನ್ನ ಈ ಮೋಹದ ಮೋಡಿಗೆ ಸಿಲುಕಿ ಮರೆಯಾಯಿತು ನನ್ನ ಏಕಾಂತ!!

- ಪಿ.ಜಿ.ಜ್ಯೋತಿ

06 Jun 2017, 06:24 pm

ನನ್ನಕ್ಕರೆಯ ಸ್ನೇಹಾಂಬರವೆ..

ಮಂಜಲಿ ಮಿಂದ ಶ್ವೇತಾಂಬರವೆ
ಮುಗ್ಧನಗೆಯ ಕನಕಾಂಬರವೆ
ಸ್ಫಟಿಕಮನದ ನೀಲಾಂಬರವೆ
ನನ್ನಕ್ಕರೆಯ ಸ್ನೇಹಾಂಬರವೆ

ಮರೆಯಲಾಗದ ಸ್ನೇಹವು ನೀ..
ಬಾಳ ಯಾನದ ದಿಕ್ಸೂಚಿ ನೀ..
ಮತ್ತೆ ಮತ್ತೆ ನೆನಪಾಗುವ
ನಲ್ಮೆಯ ಭಾವಬಿಂದು ನೀ...

- Indushekar Chinivar

06 Jun 2017, 06:01 pm

ಮಳೆಯ ಸುರಿಸು

ತಂಪು ಗಾಳಿಯೇ ನೀ
ಗಗನ ಸೋಕಿ ಬಾ!!
ಆ ಮೇಘರಾಜನ ನೀ
ಧರೆಗೆ ಕರೆದು ತಾ!!

ಮೇಘರಾಜನೇ ನೀ
ಕರಗಿ ಸುರಿದು ಬಾ!!
ಈ ಧರೆಯ ಒಡಲಿನ
ಧಗೆಯ ತಣಿಸು ಬಾ!!

ಮಿಂಚು ಬಳ್ಳಿಯೇ
ನಿನ್ನ ಸಂಚು ಅರಿಯೆ ನಾ!!
ಕೊಂಚ ದೂರವೇ ನೀ
ಮಿಂಚಿ ಹೋಗಯಾ!!

ಗುಡುಗ ಸದ್ದಿಗೆ ನಾ
ಬೆದರಿ ಹೋಗುವೆ!!
ಸದ್ದು ಮಾಡದೇ ನೀ
ಮಳೆಯ ಸುರಿಸಯಾ!!

- ಪಿ.ಜಿ.ಜ್ಯೋತಿ

06 Jun 2017, 05:49 pm

ಬಯಸಿ ಬರಬಾರದೇ

ತಿಳಿ ನೀರ ಬಾವಿಯಲ್ಲಿ ಇಣುಕಿ
ನಾ ನೋಡುತ್ತಿದ್ದೆ ನಿನ್ನಯ ಬಿಂಬ!!
ಕಲ್ಲು ಎರಚಿ ಚದುರಿಸಿದೆ ನೀ
ಏತಕೆ ನಿನಲ್ಲಿ ಈ ಒಣ ಜಂಬ!!

ತಿಳಿಯಾದ ಈ ನನ್ನ ಹೃದಯದ
ಕನ್ನಡಿಯಲ್ಲಿ ನಿ‌ನ್ನದೇ ಪ್ರತಿಬಿಂಬ!!
ಹಿತವಾಗಿ ನೀ ಒಮ್ಮೆ ನೋಡು ಎಂದು
ನುಡಿದಿಹುದು ನನ್ನ ಅಂತರಂಗ!!

ನಿನ್ನ ಕಂಡ ಮೇಲೆ ಅರಿಯದೇ
ಆಯಿತು ನನ್ನ ಮನದ ಏಕಾಂತ ಭಂಗ!!
ಅದ ಅರಿತೂ ಕಾಡುವೆ ಏತಕೆ ನೀ
ಬಯಸಿ ಬರಬಾರದೇ ನನ್ನ ಸಂಗ!!

- ಪಿ.ಜಿ.ಜ್ಯೋತಿ

06 Jun 2017, 05:45 pm

ಬಾಳು ಸ್ವರ್ಗ

ನಿತ್ಯ ಸಂತೋಷ ನೀ ತಂದ ಮೇಲೆ
ಸ್ವರ್ಗವಾಗೋಯ್ತು ಈ ನನ್ನ ಬಾಳು!!
ಬಾಳ ಸಂಗಾತಿ ನೀ ಜೊತೆ ನಡೆದರೆ
ಕಲ್ಲು ಮುಳ್ಳೆಲ್ಲ ಹೂವಂತೆ ಕೇಳು!!

ನಿನ್ನ ನಗೆಗಾಗಿಯೇ ನಿನ್ನ ನುಡಿಗಾಗಿಯೇ
ಕಾದು ಕಳೆದಿರುವೆ ನಾ ಹಗಲು ಇರುಳು!!
ನೀನು ನನಗಾಗಿಯೇ ನಾನು ನಿನಗಾಗಿಯೇ
ಬಾಳು ಸಿಹಿಯಾಯ್ತು ಈ ಒಲವು ಬೆರೆತಾಗಲೇ!!

ಜಿಗಿಯುವ ನಾವೀಗಲೆ ಇರುಳ ಆ ಬಾನಿಗೆ
ತಾರೆಯ ತೋಟದಲ್ಲಿ ಇಂದು ಬೆಳದಿಂಗಳು!!
ಚಲಿಸುವ ಮೋಡದಿ ನಿಂತು ನಾವಿಬ್ಬರೂ
ಕರಗಿ ಮಳೆಯಾಗಿ ಸುರಿದೊಮ್ಮೆ ಧರೆಗಿಳಿಯುವ!!

ಜೋಡಿ ನಗುವಾಗುವ ನಗುವ ಕನಸಾಗುವ
ಕನಸು ನನಸಾಗಿ ಎಂದೆಂದೂ ಜೊತೆ ಬಾಳುವ!!
ಬಾಳ ಈ ಪಯಣದಿ ದುಃಖವ ಮರೆಸುತ
ಸುಖವು ನಮ್ಮದಾಗಲಿ ಎಂದೂ ಹಾರೈಸುವ!!

- ಪಿ.ಜಿ.ಜ್ಯೋತಿ

06 Jun 2017, 05:37 pm

ಜೊತೆಯಲ್ಲಿ ನೀನಿಲ್ಲದೇ

ಜೊತೆಯಲ್ಲಿ ನೀನಿಲ್ಲದೇ
ಏಕಾಂತ ನನ್ನ ಕಾಡಿದೆ!!
ಬದುಕಲ್ಲಿ ನೀ ಬಾರದ
ವನವಾಸ ಸಾಕಾಗಿದೆ!!

ಆ ಕಾಣದ ದೇವರಿಗೆ
ಕೈ ಮುಗಿದು ನಾ ಬೇಡಿದೆ!!
ಬೇರೇನೂ ನಾ ಕೇಳದೇ
ನಿನ್ನನ್ನೇ ನಾ ಕೇಳಿದೆ!!

ಕಣ್ಣೀರು ಕಣ್ಣ ತೊರೆದು
ತಾ ಧರೆಗೆ ಜಾರಿದೆ!!
ಇಬ್ಬನಿಯ ಸಾಲನ್ನು
ಸೇರದೇ ಅದು ಆರಿದೆ!!

ನಿಂತಲ್ಲೇ ನಾ ನಿಂತರೂ
ಮನಸೆಲ್ಲಿಗೋ ಓಡಿದೆ!!
ಕಣ್ಣೆದಿರು ನೀ ಕಾಣದೇ
ಈ ಜಗವೆಲ್ಲ ಬರಿದಾಗಿದೆ!!

- ಪಿ.ಜಿ.ಜ್ಯೋತಿ

06 Jun 2017, 05:31 pm

ಪ್ರೀತಿಯಾಗಿ

ಬಚ್ಚಿಟ್ಟಿರು ಭಾವನೆಗಳ ಕುರಿತು
ತಿಳಿಸಿರುವ ಮಾತುಗಳಿಂದ ತಿಳಿದು
ನೀ ಕದ್ದಿರುವ ನನ್ನ ನಗೆಯಲ್ಲಿ
ಬೆರೆಸಿ ಹಿಂತಿರುಗಿಸು ನನಗೆ
ನಿನ್ನ ಪ್ರೀತಿಯಾಗಿ.........

- ಚುಕ್ಕಿ

06 Jun 2017, 05:17 pm

ಹಕ್ಕಿಗಳಿಲ್ಲ ಕೇಳಲು‌ ಚಿಲಿಪಿಲಿ ಹಾಡು....

ಈಗ ಹಕ್ಕಿಗಳಿಲ್ಲ ಕೇಳಲು‌ ಚಿಲಿಪಿಲಿ ಹಾಡು
ಎಲ್ಲೆಲ್ಲೂ ಗುಜು‌‌ ಗುಜು‌ ವಾಹನಗಳದೆ ಸೌಂಡು
ಅಂದು ಮುಂಬಾಗಿಲಲೆ‌ ಎಷ್ಟೊ ಹಕ್ಕಿ ಹಾಕುತ್ತಿದ್ದವು ರೌಂಡು
ಗದರಿದರು ಹಾರದೆ ಕುಳಿತಿರುತ್ತಿದ್ದವು ಹಿಡಿದು ಮೊಂಡು
ಎಲ್ಲೂ‌ ಕಾಣಲಾಗದು ಈಗ ಒಂದೆ ಒಂದು ಗುಬ್ಬಚ್ಚಿ ಗೂಡು
ಅಂತರ್ಜಾಲದಲಿ ಹುಡುಕುತ್ತಿರುವರು ಅವುಗಳ ಜಾಡು
ಅಳಬೇಕೊ ನಗಬೇಕೊ ತಿಳಿಯದು ನೋಡಿ ಈ‌ ಪಾಡು

ನಳನಳಿಸಿ ಮನೆ ಮುಂದೆಲ್ಲ ಹಬ್ಬಿದ್ದ ಹಸಿರ ಅಳಿಸಿ
ಕಾಡು ನೋಡಲು ದೇಶ ಸುತ್ತುವರು ಹಣವ ಬರಿಸಿ
ಅಭಿವೃದ್ಧಿಯ ನೆಪವ ಎಲ್ಲೆಲ್ಲೂ ಪಸರಿಸಿ
ಕಂಡ ಕಂಡ ಮರಗಳನೆಲ್ಲ ಕೊಂದರು ತರಿಸಿ
ಹುಡುಕಾಡುತಿರುವರು ಎಲ್ಲೆಲ್ಲೊ‌ ಶುದ್ಧ ಗಾಳಿಯ ಹರಸಿ
ಉಸಿರಾಡುತಿರುವೆವು ನಾವು ಕೆಟ್ಟ ಗಾಳಿನೆಂದು ಅಬ್ಬರಿಸಿ

ನಾಡು‌ ಕಟ್ಟತ್ತೇವೆಂದು ಕಾಡು‌ ಕತ್ತರಿಸಿದರು
ಹಣದ ಲಾಲಸೆಗೆ‌ ಕಾಡಿಗೆ ಬೆಂಕಿ ಹೊತ್ತಿ‌ಸಿ ಉರಿಸಿದರು
ತಿನ್ನಲು ಹರಸಿ ಕಾಡುಪ್ರಾಣಿ ನಾಡಿಗೆ ಬಂದರೆ ಹೌಹಾರಿದರು
ಅವುಗಳ ಕೊಂದು ಉಳಿಸಿ ಎಮ್ಮನು ಎಂದು ಬೇಡುವರು
ಹನಿ ಹನಿ ನೀರಿಗೂ ಪರದಾಡೊ ಸ್ಥಿತಿ ತಂದಿರುವರು
ಅಳಿದುಳಿದ ಮರಗಳಿಗೂ ನೀರಿಲ್ಲದೆ ಕೊಳ್ಳಿ ಇಡುತ್ತಿರುವರು
ನೀರಿಗೂ ಹೊಡೆದಾಡುತ್ತಿರುವ ನೋವಿಗೆ ನಾವೆ ಕಾರಣರು

ಪರಿಸರ ದಿನವೆಂದು ಆಚರಿಸುವುದರಲ್ಲಿ ಏನಿದೆ ಫಲ
ಎಲ್ಲಿ‌ ಸಿಗುವವು ನಮಗೀಗ ಶುದ್ಧ ಗಾಳಿ, ಕುಡಿಯಲು ಜಲ
ಅವುಗಳು ಸಿಕ್ಕಾಗಲೆ ಆಚರಣೆಯಾಗುವುದು ಸಫಲ
ಇತರೆ ಜೀವ ಜಂತುಗಳಿದ್ದರೆ ಮಾತ್ರ ಮಾನವನಿಗೆ ಸಾವಿಲ್ಲ
ಅಳದುಳಿದವ ಉಳಿಸಿಕೊಳ್ಳುವುದರಲಿ ಅವನಾದರೆ ವಿಫಲ
ಮಾನವನಿಗೆಂದು ಭೂಮಿ ಮೇಲೆ ನೆಲೆಯಿರುವುದಿಲ್ಲ

- ಶ್ರೀಕಾವ್ಯ

06 Jun 2017, 04:44 pm

ನೊಂದ ಕಂದಮ್ಮನ ಅಳಲು

ಸುಡು ಬಿಸಿಲಲ್ಲಿ ತನ್ನಪ್ಪನಿಗೆ
ನೆರವಾಗಿ ದುಡಿವಳು ತಾಯಿ
ಸುಂದರ ಮನೆಯ ನಿರ್ಮಾಣಕ್ಕೆ
ಅವರು ಕೊಡುವ ಕಾಸಿಗೆ

ಜೆಲ್ಲಿ-ಸಿಮೆಂಟು,ಇಟ್ಟಿಗೆಗಳೆ
ಗೆಳೆಯರಾಗಿ ಬಿಸಿಲಲ್ಲಿ
ರಸ್ತೆಯ ಇಕ್ಕೆಲಗಳಲ್ಲಿ
ನಯ- ನಾಜೂಕಿಲ್ಲದೆ
ಅಮ್ಮನ ತೋಳಿನ ಆಸರೆಗಾಗಿ
ಅಂಬಲಿಸುವ ಪುಟ್ಟ ಕಂದಮ್ಮನು ನಾನು,ಬಲ್ಲವರಾರು ನನ್ನ ನೋವನು?

ನಾ- ಅಮ್ಮನಿಗಾಗಿ ಹಟಮಾಡಿದಾಗ
ಅವಳು ನನ್ನ ಬಡಿದು ಗದರಿಸುವಳು
ಒಡೆಯನು ಏನೆಂದಾನೊ?
ಎಂಬ ಬೀತಿಯಲಿ.....
ನೀ ಯಾಕೆ ಬಂದೆಯೊ
ನನ್ನ ಒಡಲಲ್ಲಿ.......
ಎಂದು ಕಂಬನಿ ಸುರಿಸವಳು
ನೋವಿನಲಿ.....


ಶಾರಧ

- ಶಕುಂತಲಾ

06 Jun 2017, 02:52 pm

ನಿಸರ್ಗದ ಮಹಿಮೆ

ಸಾಗರವನ್ನೆ ಬರಿದು ಮಾಡಿದರು
ಭೂ- ತಾಯಿಯ ತಣಿಸಲಾರ
ಆಗಸದಿಂದ ಮಳೆ- ಹನಿ
ಧರೆಯ ತಾಗದ ಹೊರತು

ಮಳೆಯ ಸ್ಪರ್ಶದಿ ಇಳೆಯು
ತಾನಾಗುವಳು ಮದುವಣಗಿತ್ತಿ
ಕೊಚ್ಚೆಯಲ್ಲ ಕೊಚ್ಚಿಹೋಗಿ
ಹರಡುವುದು ಮಕರಂದ ಎಲ್ಲೆಲ್ಲಿಯು

ತಳಿರ ತೋರಣಗಳಿಂದ ಸಿಂಗಾರಗೊಂಡು,ಕಂಗೊಳಿಸುವೆ
ಕಾನನದ ಅದಿದೇವತೆಯಾಗಿ
ನರನು,ನಾಶಮಾಡದಿದ್ದರೆ
ಅವನ ಉಸಿರಿಗೆ ನೀ- ಹಸಿರಾಗಿ

ನೀ- ಹೊರತು, ನಾವಿಲ್ಲ
ಅರಿತಿರುವಿರಿ ಎಲ್ಲ
ಆಚರಣೆಯಲ್ಲೆ ಮುಗಿವುದೆಲ್ಲ
ಯಾರು ಅದ ಪಾಲಿಸುವುದಿಲ್ಲ

ಘೋಷಣೆಯ ಬಿಡಿ
ಕಾಯಕವ ಮಾಡಿ
ನಿಸರ್ಗವ ಉಳಿಸಿ!
ದೇಶವ ಉಳಿಸಿ!


ಶಾರಧ
( ಪರಿಸರ ದಿನಾಚರಣೆಯ ಶುಭಾಶಯಗಳು)

- ಶಕುಂತಲಾ

06 Jun 2017, 02:27 pm