Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾಯಲಾರೆ

ಗೆಳೆಯ
ನಾ ನಿನಗೆ
ಇಷ್ಟವಿಲ್ಲವೆಂದರೆ
ಹೇಳಿಬಿಡು.‍

ಹೊರತು,
ನಾನು ಅಲ್ಲದ
ನನ್ನನ್ನು
ಸೃಷ್ಟಿಸಿಬೇಡ.

ಕಣ್ಣೀರನ್ನು
ನಿನ್ನ ನೆನಪಿನ
ಚಿತೆಗೆ
ಹಾಕಿಬಿಡುವೆನು.

ಹೊರತು,
ನಿನ್ನ ಮಾತುಗಳಿಗೆ
ಕೊರಗಿ
ಸಾಯಲಾರೆನು.

- ಅಕ್ಷತ

27 May 2017, 12:34 pm

ಸವಾಲುಗಳು ಎಂಬ ಬಲೆಯೊಳಗೆ

ಆವ ಶುಭಕಾರ್ಯವಿಹುದಿಂದು
ಇನಿತು ಹೂ ತಂದಿರುವಿರೆಂದು
ಸಂದೇಹದಿ ಇನಿಯನ ಕೇಳಲು
ಸನಿಹ ಬಂದ.... ಇನಿಯನು
ನಿನ್ನ ಮುತೈದೆಯಾಗಿ ನೋಡುವಾಸೆ
ಏಕೋ.... ಮೂಡಿದೆ ಮನಕಿಂದು
ಎಂದು ನೋವಿನಿಂದ ನುಡಿದನಂದು...

ಮಡದಿ- ಮಕ್ಕಳ ಕಡೆಗೆ
ಮಂದಹಾಸದಿ ಕೈ- ಬೀಸಿ
ನಡೆದನು ಗೆಳೆಯನ ಒಡಗೂಡಿ
ಮರಳಿ ಬಾರದ ಲೋಕಕ್ಕೆ
ಕಣ್ಣಿಗೆ ಕಾಣದ ಊರಿಗೆ
ನಂಬಿದವರ ಬಾಳಲ್ಲಿ
ಬಿರುಗಾಳಿ ಎಬ್ಬಿಸಿ......,,,,?

ಮನೆಯೆ ದೇವಾಲಯವೆಂದು
ಇನಿಯನೆ ದೇವರೆಂದು......
ಬಾಳು ಸಾಗಿಸಿದವಳಾಕೆ
ಲೋಕದ- ವ್ಯವಹಾರಕ್ಕೆ
ದೂರವಿದ್ದವಳಾಕೆ......?

ಬಂಧುಗಳಿಗೆಲ್ಲ ಬಾರವಾದಳು
ಇಳೆಯೊಳಗೆ ಒಬ್ಬೊಂಟಿಯಾದಳು
ಕರುಳ- ಬಳ್ಳಿಗೆ ನೆರಳಾಗಿ
ಬಾಳುವ ಛಲ ತೊಟ್ಟಳು
ಸವಾಲುಗಳ ಸಾಗರದಲ್ಲಿ
ಮುಳುಗಿ- ತೇಲುವದ
ಕರಗತ ಮಾಡಿಕೊಂಡು ಮನ್ನುಗ್ಗುತಿರುವಳು.......
ಮುಕ್ತಿಯ ಅರಸಿಕೊಂಡು......


ಶಾರಧ

- ಶಕುಂತಲಾ

27 May 2017, 12:02 pm

ಪ್ರೇಮಿಕನು ನೀನು......

ಚಳಿಯಾಗಿದೆ ನನ್ನ ಹೃದಯಕೆ
ನಿನ್ನ ಉಸಿರಾ ಬಿಸಿ ತಾಪವಿಲ್ಲದೆ ಜೊತೆಗೆ.............
ಬಚ್ಚಿಡು ನನ್ನ ನಿನ್ನ ಹೃದಯದಲ್ಲಿ ಗಾಳಿ ತಾಗುವ ಮುನ್ನಾ...........

ಅಲ್ಲಿರುವ ನನ್ನ ಛಾಯೆಯನ್ನು ಕೇಳಿ ಬರುವೇ ಒಂದು ಕ್ಷಣವಾದರು ನಿನ್ನನ್ನು ಮರೆತನಾ ನೆನೆಯದೆ ಎಂದು......

ಅಲ್ಲಿಂದ ಹೋಗಬೇಡವೆಂದು ಹಠ ಹಿಡಿಯಬೇಡ ಏಕೆಂದರೆ ಅಲ್ಲಿ ನನ್ನ ಜೊತೆ ನಾ ಕುಳಿತರೆ ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವವರ್ಯಾರೋ ಬಂಗಾರ ನಾನಿಲ್ಲದೆ.......

ಮಲಗಿರುವಾಗ ಮುದ್ದಾದ ಮಗು ನೀನು ,
ಎದ್ದ ಮೇಲೆ ತುಂಟ ಹುಡುಗ ನೀನು ,
ನೋವಿನಲ್ಲಿದ್ದಾಗ ಸ್ನೇಹಿತನು ನೀನು .....

ನನ್ನ ಜೊತೆ ನಾನಿದ್ದಾಗ ನನ್ನ
ಹೃದಯದ ಬಡಿತ ನೀನು,
ನನ್ನನ್ನು ನಾನಾಗಿ ಪ್ರೀತಿಸುವ ಪ್ರೀಯವಾದ ಪ್ರೇಮಿಕನು ನೀನು........

ಒಂದು ಸೆಕೆಂಡಿಗೊಮ್ಮೆ ಕಣ್ಣ ರೆಪ್ಪೆಯು ಮುಚ್ಚಿ ತಗಿಯುತ್ತೆ ಯಾಕೆ ಗೊತ್ತಾ ಅದರಲ್ಲಿವ ನಿನಗೆ
ಈ ಜಗವ ಜಾಗ್ರತ್ತೆಯಿಂದ ತೋರಲು ಮತ್ತೆ ನಿನ್ನ ರೂಪವನ್ನು ಎಲ್ಲಿಗೂ ಹೋಗದಂತೆ ನನ್ನಲ್ಲೇ ಬಚ್ಚಿಡಲು.......

- ಚುಕ್ಕಿ

27 May 2017, 11:11 am

ಸಿಗಲಿಲ್ಲ ನನಗೆ ಬಯಸಿದ್ದು......

ಬಯಸಿದ್ದು ಸಿಗಲಿಲ್ಲ ,
ಸಿಕ್ಕಿದು ಹಿಡಿಸಲಿಲ್ಲ,
ಹಿಡಿಸಿದ್ದು ನನ್ನ ಬಳಿ ಬರಲಿಲ್ಲ ,
ಬಳಿ ಬಂದ ಪ್ರೀತಿಗೆ ನಾ ದೂರವದೆ ,
ದೂರವಾದ ಪ್ರೀತಿಗೆ ಹಂಬಲಿಸುವಂತಾಯಿತು.


ನಾ ನಿನ್ನ ಎಷ್ಟು ಹಂಬಲಿಸಿದರು ,ಕೂಗಿ ಕರೆದರು ನೀ ಮರಳಿ ಬರಲೇ ಇಲ್ಲ ............

ಕಾರಣ ನೀ ಮತ್ತೆ ಬಾರದ ಚುಕ್ಕಿ ತಾರೆಯ ನಕ್ಷತ್ರವಾಗಿರುವೆ.........
ನೀ ಏಕೆ ನನಗೆ ಸಿಗಲಿಲ್ಲ.........

- Acchu love

27 May 2017, 09:41 am

ಕ‌ಡ‌ಲು

ಕ‌ಡ‌ಲ‌ ಒಡ‌ಲೆಲ್ಲ‌ ವಿಷ‌ವೇ ತುಂಬಿಹಿದು
ಪ್ರೀತೀಯ‌ ಅಮೃತ‌ವೆಲ್ಲಿಂದ‌ ತ‌ರ‌ಲಿ?
ಮ‌ನ‌ದ‌ ಬೇಗುದಿಯ‌ ಪ್ರ‌ಶ್ನೆಗೆ
ಉತ್ತ‌ರ‌ ಎಲ್ಲೆಂದು‌ ಹುಡ‌ಕ‌ಲಿ?
ನಿನ್ನ‌ದೇ ಪ್ರ‌ಶ್ನೆಗೆ ನೀನೆ ಉತ್ತ‌ರ‌
ನ‌ನ್ನ‌ದೇನಿದ್ದ‌ರು ಮೌನ‌ ನಿರಂತ‌ರ‌.


- ಶಶಿಧರ ಹೆಚ್ ಎನ್

26 May 2017, 10:21 pm

ಹನಿ..

ನಿನ್ನ ನಯನಗಳ
ಅಂದಕೆ ಮನಸೋತು
ನಿಶೆಯು
ಕಾಡಿಗೆಯಾಗಿ
ಕಣ್ ತಂಪಾಗಿಸಿದ
ಇರುಳು...

- Indushekar Chinivar

26 May 2017, 09:38 pm

^ ಅಂದು-ಇಂದು ^ °°°°°°°°°°°°°°°°

" ಅಂದು!
ಊರೊಳಗೆ?
ಸೇದಿ-ಕುಡಿಯುತ್ತಿದ್ದರು!
ಬಾವಿ-ನೀರು.

ಇಂದು!
ಬಾರೊಳಗೆ?
ಸೇದಿ-ಕುಡಿಯುತ್ತಿದ್ದಾರೆ!
ಸಿಗರೇಟ್-ವಿಸ್ಕಿ-ಬೀರು."

ಬರಹ
ರಾಮಪ್ಪ ದುಮ್ಮಾಡಿ
HRD@BELLARY

- RAMAPPA DUMMADI

26 May 2017, 09:17 pm

ವೈಖರಿ

ಮುಖವಾಡಹೊತ್ತು ತಿರುಗುವ
ನಟನೆಯಲ್ಲಿ ಹುಸಿನಗೆಯ ತೋವರ
ಜನರ ವೈಖರಿಯನ್ನು ನಂಬಲಾರೆನು
ಮತ್ತೆ ನಗು ನಗುತ್ತಾ ಅವರ ಬಳಿ ಮಾತನಾಡಲಾರೆನು...........!!!!!

ಸ್ವಾರ್ಥಪೂರಿತ ಮನುಷ್ಯರೆಲ್ಲಾ
ಇತರರನ್ನು ತುಳಿದು ಹಾಕಿ
ಶ್ರೇಷ್ಠರೆಂಬ ಪಟ್ಟಕಟ್ಟಿಕೊಂಡಿರುವ
ಕೀರ್ತಿಪತಾಕೆಯೊತ್ತು ತಿರುಗುವ ಘನತೆಯ
ನಾನು ನೋಡಲಾರೆನು.........!!!!!

ನಂಣ್ಮುಂದೆ ನಗುನಗುತ್ತಾ ಹೇಳುವರು
ನಿಜವಲ್ಲದ ನಿಜವನ್ನು
ಇತರರಲ್ಲಿ ಹೇಳುವರು ನನ್ನ ಬಗ್ಗೆಯೇ
ನಿಜವಲ್ಲದ ಸುಳ್ಳನ್ನು ..............!!!!!

ಒಬ್ಬೊಬ್ಬರಿಗೆ ಒಂದೊಂದು ಮಾತು
ಅವರ ಕಿವಿಗಳು ಕೇಳಬಯಸುವ ಮಾತು
ಅದು ನಿಜವಾದರೂ ಸರಿ ಮಿಥ್ಯಾವಾದರು
ಸರಿ...........!!!!!

ಯಾರ ಬಳಿಯಾದರು ನೀನು ನೀನಾಗಿರು
ಸತ್ಯಕ್ಕೆ ತಲೆಬಾಗುವ ಉತ್ತಮ ಗುಣಹೊಂದಿರು
ಲೋಕವೆಲ್ಲಾ ನಿನಗೆ ವಿರುದ್ಧವಿದ್ದರು
ನೀನು ನಿನ್ನತನವನ್ನು ಎಂದಿಗೂ ಕಳೆದುಕೊಳ್ಳದಿರು...........!!!!!

- ಚುಕ್ಕಿ

26 May 2017, 08:49 pm

ನೀ ಕಲಿಯೋ‌ ಬುದ್ಧಿ....

ಆಕಿ‌ ನೋಡಿ ಮನಸು ಸೋತೋಯ್ತೆಂದು ತಿಳಿದಿ
ಅವಳ ಮಾತು ಕೇಳ್ತಾನ ನಿನ್ನೆ ಮರೆತೋದಿ
ನೀ ಕಂಡ ಆಕಿ ಮನಸ ನೋಡಿ ನೀ‌ ಶರಣಾದಿ
ಬಯಸುತ ಅವಳ ಹಿಂದಿ ಬಿದ್ದಿ
ಅಂದೆ ಮನಸಲೆ ಮಂಡಕ್ಕಿ‌ ತಿಂದಿ
ನೀ ತಿಳಿಯಲಿಲ್ಲ‌ ಅವಳ‌ ಮನಸ ಓದಿ
ನಿನ್ನ ಮನಸು ಬಯಸೋದೆ ಸರಿ ಅಂದಿ
ಅವಳಿಗೂ ಇರುವರು ಅವಳದೆ ಮಂದಿ
ಆಕಿಗೂ ಇರ್ಬೋದಲ್ಲೊ ಅವಳ ಬದುಕಿನ್ ಕನಸ್ಗಳ್ ಬಂಧಿ
ಅವ್ಗಳ ಬಿಡಲಾಗದೆ ಹೋದಳು‌ ತಿರುಗಿ ನೋಡದೆ ಹಿಂದಿ
ನೀ‌ ಇಟ್ಕೊಬೇಡವೊ ಮನಸಿನ್ಯಾಗ ಜಿದ್ದಿ
ನೀ ಅವಳ ಹಿಂದ ಬಿದ್ದಾಗಲೆ ತುಂಬ್ಕೊಂಡೆ ತಲೆಲಿ ಲದ್ದಿ
ಕೊರಗುತ ನೀ‌ ಯಾಕೊ‌ ಮಾಡ್ಕೊತೀಯೊ ಬದುಕ ಚಿಂದಿ
ಬದುಕ ಅಂದ್ಕೊಂಡ್ರ್ಯಾನ ಬೇಡ ಅಂದ್ರೆ ಬಿಸಾಕೊ ರದ್ದಿ
ಯಾರ್ದೂರ ಹೋದ್ರೇನು ನಿಲ್ತೈತೇನು ಬಾಳ ಬಂಡಿ‌
ಮನಸ‌‌ ಮಾತ ಕೇಳ್ಕೊಂಡು ನೀ‌ ಆಗ್ಬೇಡ್ವೊ ಮಂದಿ ಮಾತಾಡೋ ಸುದ್ದಿ
ಉರುಳೊ ಕಾಲಕೈತಿ ಎಲ್ಲಾ ‌ಮರೆಸೊ‌ ಚಾತಿ
ಕಾಲ ಕಳೆದೋಗ ಮೊದ್ಲೆ ನೀ ಕಲಿಯೊ ಬುದ್ದಿ

- ಶ್ರೀಕಾವ್ಯ

26 May 2017, 07:36 pm

ಪ್ರೀತಿ..

ಪ್ರೀತಿ ನೀ ಎಲ್ಲಿಂದ ಬಂದೆ ?
ನನ್ನೀ ಎದೆಗೂಡಲಿ ನಿನ್ನ ದೀಪವ ಹಚ್ಚಿದವರಾರು?
ನೀ ನೆಲೆಸಿ ನನ್ನಲಿ
ಕಳಚಿದೆ ಎಲ್ಲಾ ಬಂಧನವ
ತೊರೆದೆ ನಾ ಎಲ್ಲಾ ಭೇದ ಭಾವವ

ನಿನ್ನಿರುವಿಕೆ ಅರಿತ ಮೇಲೆ
ನಗುತಿದೆ ಮನಸು
ಅರಳಿದೆ ಹೃದಯ
ಹಗುರಾಯಿತು ತನುವು
ಜಗವು ಸುಂದರ,ನಿರ್ಮಲ

ನೀ ನನ್ನ ಅಪ್ಪಿದೆ
ಮೊದಲು ತಾಯಿಯಾಗಿ
ಕಂಡೆ ನೀ ತಂದೆಯಲ್ಲಿ
ಅಣ್ಣ ತಂಗಿಯಲ್ಲಿ,ಅಕ್ಕ ತಮ್ಮನಲ್ಲಿ
ಗೆಳೆಯ ಗೆಳತಿಯರಲ್ಲಿ
ಬಂಧುಬಾಂದವರಲ್ಲಿ
ಇಡೀ ಸಮಾಜದಲ್ಲಿ

ಇಷ್ಟಾದರೂ ಸಾಲದೆಂದು
ನನಗಾಗಿ ನೀ ನೆಲೆನಿಂತೆ
ನನ್ನ ಮುದ್ದು ಗೆಳತಿ,ನಲ್ಲೆಯ ರೂಪದಲ್ಲಿ...

- Indushekar Chinivar

26 May 2017, 04:44 pm