Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಂದಿರ‌ ನೀ ಆಗುವೆಯ....

ಚಂದಿರ ನೀ ಆಗುವೆಯ‌ ನನ್ನ ಗೆಳೆಯ
ಈ ಕತ್ತಲ ರಾತ್ರಿಗೆ ತೋರುವೆಯ ದಾರಿಯ
ಒಪ್ಪಿ‌ ಕೊಳ್ಳಲಾರೆನು ನಾನು ಸೋಲ
ಕೊಡುವೆಯ ನಿನ್ನ ಕಾಂತಿಯ ಕೊಂಚ ಸಾಲ

ಎಲ್ಲರಿಗೂ ಕಾಣಸಿಗುವುದು ನಾ ಕಂಡ ಸೋಲುಗಳು
ಎಸೆಯುವರು ಗಾಸಿ ಮಾಡುವ ಮಾತಿನ ಕಲ್ಲುಗಳು
ಇಲ್ಲವಾಗಿವೆ ಮನಸನರಿತು ಮುನ್ನಡೆಸುವ ಮನಸುಗಳು
ನಾ ಬದುಕಲಿ‌ ಗಟ್ಟಿಯಾಗಬೇಕು ಖಾಲಿಯಾಗುವ ಮುನ್ನ ಕನಸುಗಳು

ಸೋಲುಗಳಾಗಬಹುದು ಬಾಳಿಗೆ ಕಪ್ಪು ಛಾಯೆ
ಆಗಬಹುದೆ ಸೋಲುಗಳೇ ಮುಂದಿನ ಬದುಕಿಗೆ ಮಾಯೆ
ಕಾಯುತಲೆ ಇರುವೆ ನೋಡಲೊಮ್ಮೆ ‌ನಾನಾಗಬಹುದು ವಿಜಯೆ
ಆ ಗೆಲುವ ನೋಡದೇನೆ ನಾನು ಸಾಯೆ

ಚಂದ್ರನೆ ನಿನ್ನಳೊಗಿದ್ದರು ಅಷ್ಟು ಕಪ್ಪು ಕಲೆಗಳು
ಮರೆಸಿ‌ ಕದ್ದಿರುವೆ ನಿನ್ನ ಕಾಂತಿಯಲೆ ಮನಸುಗಳು
ನಾನೂ ಕಲಿಯಬೇಕಿದೆ ನೋವ ಮರೆಯುವ ಕಲೆಯ
ಒಮ್ಮೆ ಕೆಳಗಿಳಿದು ಬಂದು ಆ ರಹಸ್ಯವ ಕಲಿಸೆಯ
ನಾನು ಈ ಜಗದೊಟ್ಟಿಗೆ ಸೇರಬೇಕು ನಗುವಿನಲೆ ಆಗಿ ತನ್ಮಯ

- ಶ್ರೀಕಾವ್ಯ

25 May 2017, 12:10 pm

ಆಕಾಶದ ಕೆಳಗೆ

ಆಕಾಶದ ಕೆಳಗೆ ಕೂತು
ನೊಡುತಿರುವೆ ಬಾನಿನೆಡೆಗೆ........

ನಿನ್ನ ನೋಡುವ ಆಸೆಯಿಂದ
ಚಂದ್ರನಲ್ಲಿ ಹುಡುಕು ತಿರುವೇ.....

ಅಲ್ಲಿ ಎಲ್ಲಿ ಸಿಗುವೆ ನೀನು
ನನ್ನ ಮನವ ಬಿಟ್ಟರಲ್ವೆ......

ನಗುತಿಹುವು ನಕ್ಷತ್ರಗಳು
ನನ್ನ ನೋಡಿ ನಿನ್ನ ನೆನೆದು ನಾಚುತಿರಳು..........

ನನ್ನ ಬಿಡದ ನಿನ್ನ ಪ್ರೀತಿ ಸುತ್ತಲಿರುವುದು ಗಾಳಿಯಾಗಿ
ನನ್ನ ನಗುವ ನೋಡಲು........

- ಚುಕ್ಕಿ

25 May 2017, 12:09 pm

ನೊಂದ ಪ್ರೀತಿಗಾಗಿ.......

ಸುಮ್ಮನಿರು ಕಣ್ಣೀರೆ …ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ…..
ನಿನ್ನ ಅಳು ವ್ಯರ್ಥ ಸುಮ್ಮನಿರು……
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ …
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು….
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು….ಕಣ್ಣೀರೆ ನೀ ಸುಮ್ಮನಿರು……………………………….

- Acchu love

25 May 2017, 11:50 am

ಮಾಡದಿರು ಅಪಮಾನ

ಹಗಲಿರುಳು ನಿನ್ನದೇ ಧ್ಯಾನ ಮರೆ ಮಾಡದಿರು ನನ್ನ ಪ್ರೀತಿಯನ್ನ ಕಾಯುತ್ತಿರುವೆ ನೀ ಬರುವ ದಾರಿಯನ್ನ ಎಂದು ಮಾಡದಿರು ನನ್ನ ಪ್ರೀತಿಗೆ ಅಪಮಾನ ನೀ ಬಂದರೆ ಮಾಡುವೆ ನಿನಗೆ ಮನದಲ್ಲೆ ಸನ್ಮಾನ

#ಚಂದು

- ಶಿವು

25 May 2017, 08:52 am

ಮೊದಲ ಪ್ರೀತಿ...

ಅದು ಏನಡಗಿದೇ ಏನೋ ನಿನ್ನ ನೋಟದೊಳಗೆ,,, ಏನೋ ಆಗಿ ಹೋಯ್ತು ತಳಮಳ ನನ್ನೊಳಗೆ,,, ಸಿಕ್ಕಿ ಬಿದ್ದಿದೆ ನೋಡೇ ಬಲೆಯು ಈ ಎದೆಯೊಳಗೆ,,, ಬಿಡಿಸಲಾರದೆ ಇರುತಿಹೆನು ನೋಡೇ ಇದರೊಳಗೆ,,, ಸಿಹಿ ಎಂಬುದು ಮೂಡಿದೆ ನೋಡೇ ಒಳಗೊಳಗೆ,,, ಮಾತುಗಳು ಬರುತಿಹವು ನೋಡೇ ಮೆಲಮೆಲ್ಲಗೆ,,, ಆಸೆಯು ಹುಟ್ಟುತಿಹುದು ನೋಡೇ ಮನಸಿನೊಳಗೆ,,, ಮನಸ್ ಬಿಚ್ಚಿ ಹಾರಿದೆ ನೋಡೇ ಆಕಾಶದೊಳಗೆ,,, ನಿನ್ನನು ಕಂಡಿಹೇನು ನೋಡೇ ಅಲ್ಲಿನ ತಾರೆಯೊಳಗೆ,,,!!

- rajanikanth

25 May 2017, 08:13 am

ಹನಿ..

ಮುಂಜಾವಿನ ತಂಪಲಿ
ಇಳೆಯ ಕೆಂದುಟಿಯ
ಸಿಹಿಮುತ್ತಿಗೆ ,
ರವಿಯ ಮೊಗವು
ಕೆಂಪೇರಿದ ಬೆಳಗು...

- Indushekar Chinivar

25 May 2017, 05:16 am

ಮ‌ರುಕ‌ವಿತೆ

ನಾನು ಓದಿರುವ‌ ಎಲ್ಲ ಗ‌ದ್ಯ‌ ಪ‌ದ್ಯ‌ ಕ‌ಥೆ
ಕ‌ವ‌ನ‌ ಕ‌ವಿತೆಗ‌ಳಲ್ಲಿ‌ ನ‌ನ‌ಗಿಷ್ಟ‌ವಾದ‌ ಅತ್ಯಂತ‌
ಸ‌‌ರ್ವಶ್ರೇಷ್ಠ‌ವಾದ‌ ಸಾಲುಗ‌ಳ‌ನ್ನು ಹೆಕ್ಕಿ ಆಯ್ದು
ಜೋಡಿಸಿ ಮ‌ರುಜೋಡಿಸಿ ಪ್ರೇಮ‌ಕ‌ವಿತೆಯೊಂದ‌ನ್ನು ರ‌ಚಿಸಿ ನ‌ನ್ನ‌ವ‌ಳ‌ ಮುಂದಿಟ್ಟೆ "ಇದೇ ನ‌ನ್ನ‌ ಪ್ರೀತಿಯೆಂದು".
ಅಲ್ಲೇ ಇದ್ದ‌ ಬಂಡೆಯೊಂದ‌ರ‌ ಮೇಲೆ ಕುಳಿತು
ಓದಿ ಅರ್ಥೈಸಿ ವಿಮ‌ರ್ಶಿಸಿ ಪರಾಮ‌ರ್ಶಿಸಿ
ಸ್ವ‌ಲ್ಪ‌ ಹೊತ್ತು ಎತ್ತ‌ಲೋ ನೋಡುತ್ತ‌ ಮೌನ‌ದಿಂದ್ದ‌ಳು ನ‍ಂತ‌ರ‌ ನ‌ನ್ನೆಡೆಗೆ ನೋಡುತ್ತ‌
ಹೀಗೆಂದ‌ಳು "ಯಾರೋ ಇನ್ನಾರಿಗೋ ಬೇಯಿಸಿದ‌ ಮುೃಷ್ಟಾನ್ನ‌ವ‌ನ್ನು ನಿನ್ನ‌ ಪ್ರೀತಿಯೆನ್ನುವುದು ಎಷ್ಟು ಸ‌ರಿ"
ನಾನು ಎನ‌ನ್ನೊ ಯೋಚಿಸುತ್ತ‌ ಉತ್ತ‌ರಿಸಿದೆ
"ಈ ಪ್ರೀತಿ ಸ್ಪುರಿಸುವ‌ ಸಾಲುಗ‌ಳು ಸ‌ಮುದ್ರ‌ ಮಂಥ‌ನ‌ದ‌ಲ್ಲಿ ತೇಲಿ ಬಂದ‌ ಅಮುೃತ‌ದಂತೆ
ನ‌ಮ್ಮ‌ದೆ ಕ‌ನ‌ಸುಗ‌ಳ‌ ಕ‌ನ‌ವ‌ರಿಕೆಗ‌ಳ ಹಾಡಿನಂತೆ
ನ‌ಮ್ಮ‌ ಹೃದ‌ಯ‌ ಗೆದ್ದ‌ರೆ ಅವು ನ‌ಮ್ಮ‌ದೇ ಸಾಲುಗ‌ಳ‌ಲ್ಲ‌ವೆ"?
ಒಲ‌ವೇ ಸ‌ತ್ಯ‌ ಒಲ‌ವೇ ನಿತ್ಯ‌
ಒಲ‌ವೇ ನ‌ಮ್ಮ‌ಯ‌ ಜೀವ‌ನ‌.

- ಶಶಿಧರ ಹೆಚ್ ಎನ್

25 May 2017, 12:39 am

ಹನಿ..

ರಜನಿಯ
ನೀಳ ಜಡೆಯಂಚಿಗೆ
ಚಂದಿರ,
ತಾರೆಗಳ ಕುಚ್ಚನು
ಕಟ್ಟುವ ಇರುಳು...

- Indushekar Chinivar

24 May 2017, 10:29 pm

ನೋದ ಹೃದಯ

ಸುಮ್ಮನಿರು ಕಣ್ಣೀರೆ ...ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ.....
ನಿನ್ನ ಅಳು ವ್ಯರ್ಥ ಸುಮ್ಮನಿರು......
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ ...
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು....
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು....ಕಣ್ಣೀರೆ ನೀ ಸುಮ್ಮನಿರು......................................ಸುರೇಶ್ ಸೂರಿ ದಾವಣಗೆರೆ

- sureshsuri@gmail.com

24 May 2017, 10:17 pm

ಸ್ನೇಹ ಜೀವಿ.......

ಖುಷಿಯಲಿ ತೇಲಾಡಿದೆ ಮನವಿಂದು,
ನನಗೂ ಮನಸ್ಸಿದೆ ಎಂದು ತಿಳಿದವ
ನೀನೆ ಏನು ?
ತಿಳಿಯದೆ ಆದ ಸ್ನೇಹವಿದು,
ಯಾವುದೊ ಜನುಮದ ಬಂಧವಿದು,
ಕೂರಿಸಿದೆಯಲ್ಲೊ ಸ್ನೇಹದ
ಗೋಪುರದ ಮೇಲೆ,
ನೆಲೆಸು ಬಾರೊ ನನ್ನ ಗೆಳೆಯ,
ಸ್ನೇಹದ ಸನ್ನಿಧಿಯೊಳಗೆ….
ಸ್ಥಳ ಒಂದೇ ಆದರು ಎಷ್ಟು ಅಂತರ,
ಜೊತೆಯಿರೆ ಸಾಕು ನಮ್ಮ ಸ್ನೇಹ
ಜನುಮ ಜನುಮಾಂತರ….

- Acchu love

24 May 2017, 10:11 pm