Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರಣಹದ್ದುಗಳಿವು

ಸುಂದರ ಕನಸನ್ನು ಗುಯ್ಯ....
ಎನ್ನುತ್ತ ಆಳುಗೆಡಹುವ, ಸುಖ
ನಿದ್ದೆಗೆ ಭಂಗ ತರುವ ಸೊಳ್ಳೆಯ
ಹುಡುಕಿ- ಹುಡುಕಿ ಹೊಸಕಾಕುವ ನಾವು,ದಿನ- ನಿತ್ಯ ಕಿತ್ತು- ತಿನ್ನುವ
ಕ್ರೂರ- ಜಂತುಗಳನ್ನು ನಮ್ಮ ನೆತ್ತರ
ಬಸಿದು ರಕ್ಷಿಸುವ ನಾವೆಂತ ಮೂರ್ಖರು

ನಮ್ಮಿಂದಲೆ ಆರಿಸಿ
ನಮ್ಮನ್ನೆ ಆಳುವ ನಾಯಕರು
ನಮಗರಿವಿಲ್ಲದಯೇ
ನಮ್ಮ ದೋಚುತಿಹರು ನಮಿಸಿ

ರಕ್ಷಿಸುವರೆ ಭಕ್ಷಕರಾಗಿ
ರಕ್ಷಣೆಯೆ ಕನಸಾಗಿ
ಭೂಒಡಲ ಬಗೆದು
ಗರ್ಭವ ಸಿಗಿದು
ಬಂಜೆಯಾಗಿಸಿಹರಿಂದು

ನ್ಯಾಯದ ಅಲೆಯು
ಅನ್ಯಾಯದ ಸುಳಿಗೆ ಬಲಿಯಾಗಿ
ನ್ಯಾಯ ಸಾದಿಸಹೊರಟವರು
ರಾಜಕಾರಣಿಗಳ ಬಲೆಗೆ ಬಲಿಯಾಗಿ
ಮಾಡುವುದೇನೆಂದು? ಕೊರಗುತಿರುವರು ಮೂಖರಾಗಿ

ದನ- ಕಾಯುವವನಿಂದ
ದವಾಖಾನೆ ಕಾಯುವವನಿಗು
ತೆರಬೇಕು ಲಂಚ
ಕಸ- ಬಾಚುವವನಿಂದ
ದೇಶ ಆಳುವವನ ವರೆಗು
ಅಪೇಕ್ಷಿಸುವರು ಲಂಚ

ಲಂಚದ ಮೇಲೆ,ಹಾಸಿ ಮಂಚ
ಪೊಳ್ಳು ಬರವಸೆಗಳ ಬಲೆ ಬೀಸಿ
ಮುಗ್ದ ಜನರ ಮೂರ್ಖರಾಗಿಸಿ
ಮನಬಂದಂತೆ
ನೀತಿಸಂಹಿತೆಗಳ ರೂಪಿಸಿ
ಬಡವರ ರಕ್ತ-ಮಾಂಸವ
ಕಿತ್ತು ತಿನ್ನುತ್ತಿರುವರು ರಣಹದ್ದುಗಳಾಗಿ
ಇಂತಹ- ವುಗಳ ಅಂತ್ಯವ
ಕಾದು ಕುಂತಿರುವೆವು ಬಕಪಕ್ಷಿಗಳಾಗಿ


ಶಾರಧ

- ಶಕುಂತಲಾ

15 May 2017, 04:11 pm

ಆತ್ಮೀಯರು..........✍✍✍

ಕಡಲಷ್ಟು ನೋವನ್ನು ಕಣ್ಣಲ್ಲಿ ಬಚ್ಚಿಟ್ಟು
ಕಣ್ಣೀರ ಮರೆಯಲ್ಲಿ ಆನಂದ ಹಂಚುತಿರುವೇ........

ಆನಂದಭಾಷ್ಪಗಳೆಂದು ನಂಬುವವರು
ನನ್ನ ಕಣ್ಣಿಂದ ನೋಡುವವರು..................

ನೋವಿನಲ್ಲಿ ಕರಗಿದ ಮನಸಿನ ವ್ಯಥೆಯೆಂದು ತಿಳಿದವರು ನನ್ನ ಆತ್ಮೀಯರು.............

ಕೈಯಿಂದ ಬರೆದ ಪದಗಳನ್ನು ಸುಂದರ ಕವನವೆಂದು ಓದುವವರು ಮೆಚ್ಚಿದವರು...........

ಮನಸ್ಸಿಂದ ಬಂದ ಮಾತುಗಳೆಂದು
ಅರಿತವರು ಅಪರಿಚಿತರಾದರೂ ಆತ್ಮೀಯರು.......

- ಚುಕ್ಕಿ

15 May 2017, 02:57 pm

ಸಿಗದೆ ಹೋಗಿರುವ ಪ್ರೀತಿ........

ಸುರಿಯುವ ಮಳೆಯಲ್ಲಿ ,ನನ್ನ ಕಣ್ಣೀರಿಗೆ ಬೆಲೆಯೇ ಸಿಗಲಿಲ್ಲ .........
ಪ್ರೀತಿಸುವ ಹೃದಯಗಳ ಎದುರಲ್ಲಿ ,ನನ್ನ ಪ್ರೀತಿಯೇ ಕಾಣಲಿಲ್ಲ.......
ನಾ ಬಯಸಲಿಲ್ಲ ನಿನ್ನ ಅಂದು ಆದರೆ ಇಂದು ನೀನೇ ನನ್ನ ಉಸಿರಾಗಿರುವಗ .......ನೀನೇಕೆ ನನ್ನಿಂದ ದೂರವಾಗಿರುವೆ ಗೆಳೆಯ
........

- Acchu love

15 May 2017, 09:51 am

ಬಡತನ

ಅವನ ಬೆವರ ಹನಿಯಲಿ
ಅವಳ ಆಸೆಗಳಿತ್ತು,
ತೊದಲು ನುಡಿಯುವ
ಮಗುವಿನ ಬೇಡಿಕೆಯಿತ್ತು.

ಮಧ್ಯಾಹ್ನಕ್ಕೆ ಹನಿ ನೀರಿನ
ಊಟವಿತ್ತು,
ತೆರೆಯ ಮೇಲೆ ನಗುಮೊಗದ
ಮುಖವಾಡವಿತ್ತು.

ಕತ್ತಲಾದರೆ ಬೆಳಕಿನ
ಹುಡುಕಾಟವಿತ್ತು,
ದಿನಬೆಳಗಾದರೆ ಕಿತ್ತು ತಿನ್ನುವ
ಬಡತನದ ದಾರಿದ್ರ್ಯವಿತ್ತು.

- ಅಕ್ಷತ

15 May 2017, 09:49 am

ಕಾಗದದ ಚೂರು

ಬೀದಿಯಲಿ ಬಿದ್ದಿರುವ
ಕಾಗದದ ಚೂರೆಂದು
ನಿಂದಿಸಿದೆ ನೀನು ಅಂದು
ನನನ್ನು ಅವಹೇಳನಗೈದು!!

ತಲೆ ತಗ್ಗಿಸಿ ನೀನು ನನ್ನ
ನಿಂದಿಸಿ ನುಡಿದಿದ್ದೆ
ಕೆಲಸಕ್ಕೆ ಬಾರದೆ ಬೀದಿಯಲಿ
ಬಿದ್ದಿರುವ ಒಣ ತ್ಯಾಜ್ಯವೆಂದು!!

ನೊಂದ ಮನಸಿನಲಿ ನಾ
ಗಾಳಿಯಲಿ ತೂರಾಡಿ
ಮುಗಿಲೆತ್ತರಕ್ಕೆ ಏರಿ ನಿಂತೆ
ಇಂದು ಗಾಳಿಪಟವಾಗಿ!!

ನೋಡುವ ಬಯಕೆ ಇರೆ
ತಲೆ ಎತ್ತಿ ನೋಡು ಒಮ್ಮೆ
ನಾ ತೇಲುತ್ತಿರುವೆ ಇಂದು
ಸ್ವಚ್ಛಂದ ಆಕಾಶದಲ್ಲಿ!!

- ಪಿ.ಜಿ.ಜ್ಯೋತಿ

15 May 2017, 09:07 am

ಪ್ರೀತಿ..........

ನಿನ್ನ ಮುಡಿಗೇರಿಸಿ ಸಿಂಗಾರಿಸುವೆಯಾದರೆ,ನಿನ್ನ ಮುಡಿಗೆ ಹೂವಾಗಿ ನಾ ಬರುವೆ .........ರೆಪ್ಪೆ ಅಡಿಯಲ್ಲಿ ಬಚ್ಚಿಡುವೆ ಆದರೆ ,ಕನಸಾಗಿ ನಾ ಬರುವೆ. ಗೆಳತಿ...........

- Acchu love

14 May 2017, 11:46 pm

ಕಾಣದ ದಾರಿ...

ಭಾವನೆಗಳೇ ಸತ್ತಿರುವಾಗ ಮತ್ತೇನಿದೆ ಮಾತಾಡಲು..
ನನ್ನವರು ಎಂಬ ನಂಬಿಕೆಗೆ ಬೆಲೆಯೇ ಇಲ್ಲಿ ಇಲ್ಲವಾಗಿದೆ..
ಮುಂದೇನು ಅಂತ ಗೊತ್ತಿಲ್ಲ, ಆದರೂ ಮುಂದೆ ಸಾಗುವುದ ಮರೆತ್ತಿಲ್ಲ..

- ನಮಿತ ಗಟ್ಟಿ

14 May 2017, 10:54 pm

ಅವ್ವ

ಹುಟ್ಟಿ ಒಂದು ಕ್ಷಣವಾಯಿತು
ಮಗು ನೀನು ನಾನೇ ಪ್ರಪಂಚ
ನಿನಗೆ ಇದುವರೆಗೂ ********

ನನ್ನ ಮಾತು ಕೇಳುತ್ತಾ ನನ್ನ
ಕರುಳಬಳ್ಳಿಯ ಜೊತೆ ಆಟವಾಡುತ್ತಾ
ಬೆಳೆದೆ ನೀನು ನನ್ನೊಳಗೆ*******

ಬರಿಯ ದೇಹ ನಾನು ನನ್ನ ಜೀವ ನೀನು
ನೂರು ಆಸೆಗಳೊತ್ತು ಹೃದಯದಲ್ಲಿ
ನಿನ್ನ ಮುದ್ದು ರೂಪವ ನೀನೆದು
ಈ ನವಮಾಸಗಳು ನಗು ನಗುತ್ತಾ ಕಳೆದೆ******

ನಿನಗೆ ನನ್ನ ಒಡಲಲ್ಲಿ ಯಾವ ಕಷ್ಟವೂ
ಅಗಬಾರದೆಂದು ಆ ದೇವರ ಬೇಡುತ್ತಾ
ಈಗ ಅವನು ನಿನ್ನ ಜೋಪಾನ ಮಾಡಿ
ನನ್ನ ಕೈಯಲ್ಲಿಟ್ಟಿರುವನು***********

ಅವನ ಹಾಗೆ ನಾ ಕಾಯದಿರಬಹುದು ಕಂದಾ
ನನ್ನ ಜೀವಹೋದರು ಜೊತೆ ಬಿಡದೆ ನೆರಳಾಗಿ ನಾನಿರುವೇ ನಿನ್ನಿಂದೆ ನಿನನೆ ಹೆದರಾಗುವ
ಪ್ರರಿಯೊಂದು ನೋವು ನನ್ನ ದಾಟಿ ಹೋಗುವ ಹಾಗೆ ನಾ ಕಾಯುವೆನು ಕಂದಾ*******

- ಚುಕ್ಕಿ

14 May 2017, 08:13 pm

ಅಮ್ಮ ಐ ಲವ್ ಯ

ಕೈ ತುತ್ತು, ಕಡಲ ತೀರದ ಮುತ್ತು, ಭಾವದೊಳಗಿನ ಗಮ್ಮತ್ತು, ಸಾಗರದ ಸಿರಿಯ ಸಂಪತ್ತು, ಇವೆಲ್ಲಕ್ಕೂ ಮೀರಿದ ಸಂಪತ್ತು,ಮಾತೃ ವಾತ್ಸಲ್ಯದ ಮುತ್ತು ಮತ್ತು ಆಕೆಯ ಕೈ ತುತ್ತು

- Murali Ht

14 May 2017, 08:05 pm

ಮಡಿಲ ಸ್ವರ್ಗ

ಅತಿ ಕೋಮಲ ನಿನ್ನ ಸ್ಪರ್ಶೆ ಅಮ್ಮ
ನಿನ್ನ ಮಡಿಲ ಸ್ವರ್ಗದ ಬೆಲೆ ಆ
ದೇವರಿಗೂ ತಿಳಿದಿಲ್ಲ ಅಮ್ಮ
ಬೇರೊಂದು ಸ್ವರ್ಗವಿದೆಯೆಂದು ಭ್ರಮೆಪಡುತ್ತಿದ್ದಾರೆ................?

- ಚುಕ್ಕಿ

14 May 2017, 07:45 pm