Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ಬರುವಾ ಹಾಗೆ......

ಕತ್ತಲೋಳಗೆ ಕತ್ತಲಡಗಿದೆ
ಕರಿ ಮೋಡ ಕವಿಯುತಿದೆ
ಕವಿ ಈಗ ಕವನ ಹೆಣೆಯುತಿಹೆ
ಕವನಗಳಿಗೆ ನಿ ಚಿಲುಮೆ
ಚಿಲುಮೆ ಈಗಾ ಚಿಟಬಡಿಸಿದೆ

ನೀನೇ ಬರಿ ನೀನೇ ...

ಮಿಂಚೆಕೋ ಮಂಕಾಗಿದೆ
ಮನಸೆಕೋ ತೇಲಾಡಿದೇ
ಮಳೆಬಿಲ್ಲು ಮಾತಾಡಿದೆ
ಕನಸೊಂದು ಮನೆಮಾಡಿದೆ
ನವಿಲ್ಲಿಂದು ನಲಿದಾಡಿದೆ

ನಿ ಬರುವಾ ಹಾಗೆ
ಅದೇಕೋ ಹೀಗೆ
✍✍PЯΛDΣΣP✍✍

- ಪ್ರದೀಪ.ಮ.ಪಾಡಮುಖೆ

09 Apr 2017, 12:56 am

ಹೀಗಿದ್ದಿದ್ದರೆ....

ಮನದಲೊಂದು ಭ್ರಮೆ ನಾನೂ
ಹಕ್ಕಿಯಾಗಿದ್ದರೆ, ಹಾರುತಿದ್ದೆ
ನನ್ನ ರೆಕ್ಕೆಗಳ ಬಲದಿಂದ

ಕಣ್ಣಲೊಂದು ಬಿಂಬ ನಾನೂ
ಚಿತ್ರವಾಗಿದ್ದರೆ ,ಬೀಗುತಿದ್ದೆ
ನನ್ನ ಬಣ್ಣಗಳ ಅಂದದಿಂದ

ಮೆದುಳಲೊಂದು ಯೋಚನೆ ನಾನೂ
ಪುಷ್ಪವಾಗಿದ್ದರೆ,ಹರಡುತಿದ್ದೆ
ನನ್ನ ಸುಗಂಧ ಪ್ರೀತಿಯಿಂದ

ಹೃದಯದಲ್ಲಿ ತುಡಿತ ನಾನೂ
ಕನ್ನಡಿಯಾಗಿದ್ದರೆ, ತೋರಿಸುತಿದ್ದೆ
ಪ್ರತಿಬಿಂಬ ನನ್ನ ಸರಳತೆ ಯಿಂದ

ಮನದಲ್ಲಿ ಆಸೆಗಳು ನೂರು ನಾನೂ
ಹೀಗಿದ್ದಿದ್ದರೆ,
ನಾನೂ ಹೀಗಿದ್ದಿದ್ದರೆ.......
ಕವಿರಾಜ

- kavita Rajesh

08 Apr 2017, 10:54 pm

ಹೆಣ್ಣು ಮಗು ನಾನು...........✍

ಭ್ರೂಣಾವಸ್ಥೆಯಲ್ಲೇ
ನನ್ನ ಸಾಯಿಸಲಾಗಲಿಲ್ಲವಾ
ಅವ್ವ ನಿನಗೆ.

ಈ ಲೋಕದ ರಕ್ಷೆಸತ್ವದ
ಮುಂದೆ ನಾತಾಳಿ
ನಿಲ್ಲಲಾರೇನು ನನ್ನವ್ವ.

ನನ್ನ ಮನೋಭಾವಗಳು
ಅರಿಯದಂತ ಜನರ ನಡುವೆ
ಹೇಗೆ ನಾ ಜೀವಿಸಲಿ ಹೇಳವ್ವ.

ಸ್ವಾರ್ಥ ಪೂರಿತ ಜನರಮುಂದೆ
ತಡೆದು ನಿಲ್ಲಲಾಗುತ್ತಿಲ್ಲ.

ನನ್ನ ಬಗ್ಗೆ ಒಂದು
ಚೂರಾದರೂ ಪ್ರೀತಿಯಿಲ್ಲ
ಈ ಕ್ರೂರ ಜನರ ಮನಸ್ಸಿನಲ್ಲಿ......✍

ಪ್ರಾಣ ತೆಗೆಯುವ ಜನರ ಜಗತ್ತಿನಲ್ಲಿ
ಕೋಮಲ ಮನಸ್ಸಿನ ಮುಗ್ದ ಕೂಸು ನಾನು.
ಅಮಾಯಕವಾದ ಮಗುನಾನು

ಹೆಣ್ಣು ಮಗು ನಾನು .

- ಚುಕ್ಕಿ

08 Apr 2017, 09:02 pm

ಕೋಪ

ಪ್ರೀತಿಸುವ ವ್ಯಕ್ತಿಗಳನ್ನು
ದೂರಮಾಡುವುದು ಕೋಪ.

ತಂದೆ-ತಾಯಿಯರನ್ನು
ದುಃಖಿಸುವಂತೆ ಮಾಡುವುದು ಕೋಪ.

ಬಂದು ಬಳಗವನ್ನು ನಿನ್ನಿಂದ
ದೂರ ಮಾಡುವುದು ಕೋಪ.

ಎಲ್ಲರನ್ನೂ ನಿನ್ನಿಂದ ದೂರ
ಮಾಡುವ ಕೋಪವೇತಕೆ ನಿನ್ನ ಬಳಿ.

ಎಲ್ಲರನ್ನೂ ನಿನ್ನ ಹತ್ತಿರ
ಸೇರಿಸುವ ಪ್ರೀತಿ ಇದ್ದರೆ ಸಾಕು ನಿನ್ನ ಬಳಿ.

- ಚುಕ್ಕಿ

08 Apr 2017, 08:16 pm

ನೋಂದ ಹೃದಯ.....

ಮನಸಿನ ಸುತ್ತ ಸೋಲು ಎನ್ನುವ
ಯಮನು ಕೋಟೆ ಕಟ್ಟಲು ಮುಂದಾಗಿದ್ದಾನೆ
ಗೆಲುವಿನ ದಾರಿಯೆ ಕಾಣದೆ ಸೋತಿದೆ ನನ್ನ ಮನ....
ನೋಂದ ಹೃದಯ.....

- chinmayi.....chinni

08 Apr 2017, 07:26 pm

ಮನಸಿನ ಭಾವನೆ....

ಬತ್ತಿದ ಭಾವನೆಗಳ ಬೆನ್ನಹತ್ತಿದೆ
ಈ ನನ್ನ ಪೆದ್ದ ಮನ
ಅಂತರಾಳ ಭಯಸುತಿದೆ
ಬೆರಾವುದೋ ಕನಸನ್ನ.....
ನೋಂದ ಹೃದಯ

- chinmayi.....chinni

08 Apr 2017, 07:19 pm

ಸಪೂರ ಆಗಲ್ಲ ..........

ಮನಸಿನ ಭಾರ ಹೆಚ್ಚಾದಾಗ
ದೇಹದ ಭಾರ ಕಡಿಮೆಯಾಗುತ್ತದೆ.

ದೇಹದ ಭಾರ ಹೆಚ್ಚಾದಾಗ
ಮನಸಿನ ಭಾರ ಕಡಿಮೆಯಾಗುತ್ತದೆ.

ಮನಸಿನ ಭಾರ ಎಂದಿಗೂ
ಕಡಿಮೆಯಾಗಲ್ಲ ಏಕೆಂದರೆ ನಿನ್ನ ನೆನಪಿನ
ಸಿಹಿಗಣಸು ಎಂದಿಗೂ ಸಪೂರ ಆಗಲ್ಲ.

- ಚುಕ್ಕಿ

08 Apr 2017, 03:01 pm

ಸುಮಧುರ

ಸುಮಧುರ ಸಂಗೀತದ ಗಾನದಲ್ಲಿ
ಮಧುರವಾದ ಪದವಾಗಿ ನಾನಿರುವೆ
ನಿನ್ನ ಎದೆಯಲ್ಲಿ .

ಕರೆವ ನೂರು ಹೆಸರಲ್ಲಿ ಮರೆಯಲಾಗದ
ಹೆಸರಾಗಿ ನೀನೀರು ನನ್ನ ಮನದಲ್ಲಿ.

- ಚುಕ್ಕಿ

08 Apr 2017, 01:35 pm

ನನ್ನಾಕಿ ಸಿಗಲಿಲ್ಲ

ಸಮಯ ಸಾಲುತ್ತಿಲ್ಲ
ಮೋಡ ಕವಿಯುತ್ತಿಲ್ಲ
ನೆನಪು ಅಳಿಯುತ್ತಿಲ್ಲ
ಕನಸು ಕಾಣುತ್ತಿಲ್ಲ
ಮನಸು ಮಾತೆ ಕೇಳುತ್ತಿಲ್ಲ
ಮಲ್ಲಿಗೆ ಅರಳುತ್ತಿಲ್ಲ
ಭಾವನೆ ಬಿರುತ್ತಿಲ್ಲ
ದಿನವೇ ಸರಿಯುತಿಲ್ಲ
ಇದೆಲ್ಲಕ್ಕಿಂತ ಹೆಚ್ಚು ಗಳಿಸಿದ
ಪ್ರೀತಿ ಸಿಗಲಿಲ್ಲ
.
✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

08 Apr 2017, 05:00 am

ಸಾಗರ

ಈ ನೀಲಿ ಸಮುದ್ರದಲ್ಲಿ ನಿನ್ನ ರೂಪ
ಕಾಣುತ್ತಿಲ್ಲ ಗೆಳೆಯಾ ಆದರೂ ಪರ್ವಾಗಿಲ್ಲ......

ಈ ಉಸಿರಿಲ್ಲದ ನೀರಿಗೇನು ಗೊತ್ತು
ನಿನ್ನ ಪ್ರೀತಿಯ ರೂಪ ನಾನೆಂದು.

ನನ್ನ ಪ್ರತಿಯೊಂದು ಚಟುವಟಿಕೆಯಲ್ಲೂ
ನೀನೇ ತುಂಬಿಕೊಂಡಿರುವೆಯೆಂದು.

ಸಾಗರದಲ್ಲಿನ ಪ್ರತಿ ಸಣ್ಣ ಅಲೆಯ ಹಾಗೆ
ನಿನ್ನ ಮೇಲಿನ ಪ್ರೀತಿ ನನ್ನಲ್ಲಿ ಈ ಕವನವಾಯಿತೆಂದು.

- ಚುಕ್ಕಿ

08 Apr 2017, 12:15 am