Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅವಳ ಕಂಗಳ ಕ್ಷಣದ ನೋಟಕೆ ದಿನವೆಲ್ಲ ಕಾಯುವ ಹಂಬಲ....!
ಆ ತುಟಿಗಳು ಚೆಲ್ಲುವ ಮುಗುಳುನಗೆಗೆ ಪ್ರತಿದಿನವೂ ಸೋಲುವ ಹಂಬಲ....!
ರಾಶಿ ಕನಸುಗಳ ಹೃದಯದ ಪೆಟ್ಟಿಗೆಗೆ ಬೀಗ ಅವಳು....!
ಪ್ರತಿ ಕನಸಿಗೂ ಪ್ರೀತಿಯ ಅಮೃತವ ಸೇರಿಸಿದವಳು....!
ಮಾತನಾಡದೆಯೇ ಮಧುರ ಭಾವನೆಗಳು ಮನದುಂಬಿ ಮೂಡಿರಲು, ಓರೆ ನೋಟ ಬೀರಿ ನಗುಮೊಗದಿ ಎಲ್ಲ ಅರಿತವಳು....!
ನೋಟಗಳು ಸೇರಿದಾಗ ಎದೆಯಲಿ ಹೂವಿನ ನಂದನ....!
ಮನಗಳು ಸೇರಿದಾಗ ಹೃದಯದಲಿ ಪ್ರೀತಿಯ
ಬಂಧನ....!
ಮೊದಲ ಪ್ರೇಮ, ಮೃದು ಮನಸುಗಳ ಸುಂದರ ಮಿಲನ....!
ರಾಜ್.S.
- ರಾಜ್. S
22 Feb 2017, 10:50 pm
ಪಗಡೆಯ ಅಟಕೆ ಕುಳಿತಿವೇ
ಸಾವು ಮತ್ತು ಉಸಿರು
ದಾಳದಂತೆ ನನ್ನ ಬಳಸಿ
ಅಗೋಮ್ಮೆ ಇಗೋಮ್ಮೆ
ಸಾವು ಗೆಲ್ಲುತಿತ್ತು
ಜೀವಾ ಸೋಲುತ್ತಿತ್ತು
ದೇವರು ನಿರ್ಣಾಯಕನಾಗಿ
ಕುಳಿತಿದ್ದ ನಕ್ಕು ನೋಡುತ
ನನ್ನ ತೋಳಲಾಟ
ದಾಳವ ಉರುಳಿಸಿ
ನೋವುಗಳ ಪೆಟ್ಟ ನೀಡಿತ್ತಿತ್ತು
ಪಗಡೆಯಾಟದ ಜೀವನದ ಪಟ
ಅತ್ತ ಸಾವು ಕರಿನೆರಳು
ಇತ್ತ ಅರಿಯದ ಜೀವನದ ಉಸಿರು
ಸೂತ್ರಧಾರನೆ ದಾಳವ ಗಾಳದಂತೆ ಬಳಸಿದ್ದ
ಉಸಿರ ಸೋಲಿಸಿ ಅತ್ಮ ವಾಯುವ
ನೀಲಾಗಸದ ಗಾಳಿಯಲಿ ಚೆಲ್ಲಿದ್ದ ಪ್ರಾಣ ಪಕ್ಷಿಯ
ದೇವರೆ ನೀ ಇರುವ ವಿಳಾಸವ ತಿಳಿಸು
ಅಗೀರೋ ಮೋಸಕೆ ನ್ಯಾಯವ ಕೇಳಬೇಕಿದೆ
ದೂರೋಂದನು ದಾಖಲಿಸಬೇಕಿದೇ
ಉಸಿರ ಕದ್ದೋಯಿದ ಜವರಾಯನ ಮೇಲೆ
- ಸುಪ್ರೀತ್ ಕ೦ಚಿಬೈಲ್(ಸುಕ)
22 Feb 2017, 09:35 pm
ಎತ್ತ3 ಸಾಗುತಲಿರುವೆ
ಈ ಬೆತ್ತಲ ಜಗದಲ್ಲಿ|
ಬಿತ್ತಲು ಜ್ಞಾನ ಬೀಜವ
ಮುತ್ತಲು ಈ ಜಗವ ಪ್ರೀತಿಯ||೧||
ಎತ್ತ3 ಸಾಗುತಲಿರುವೆ
ಈ ಅರಿಯದ ಜಗದಲ್ಲಿ|
ಅರಿವು ಮೂಡಿಸ ಹೊರಟಿಹೆ
ಬೆರೆತು ಬದುಕಲು ನೀನು||೨||
ಎತ್ತ3 ಸಾಗುತಲಿರುವೆ
ಆ ಇನಿಯಾ ಪಥ ಬದಲಿಸದಿದ್ದರೆ|
ಜಗವು ಬೆಳಕು ಕಾಣದೆಂದು
ನೀನು ಅವನ ಮಾರ್ಗವೇ ತುಳಿದೆ||೩||
ಎತ್ತ3 ಸಾಗುತಲಿರುವೆ
ಈ ಕಗ್ಗತ್ತಲ ಸಮಾಜದಿ|
ಕತ್ತಲ ಕಡೆಗೆ ಸಾಗುತಿದೆ ನಿನ್ನ ಪಯಣ
ಪ್ರಜ್ವಲಿಸುವ ದೀವಿಗೆಯಾಗಿ ಬೆಳಕು ನೀಡುತಾ||೪||
ಎತ್ತ3 ಸಾಗುತಲಿರುವೆ
ಭವ ಬಂಧಗಳ ಬಂಧಿಯಾಗಿ|
ಆದರ್ಶ ಪುರುಷನಾಗಿರುವೆ ನಮಗೆಲ್ಲ
ಎಂದೆಂದಿಗೂ ನಿನ್ನ ಅಭಯವಿರಲಿ ನಮ್ಮೊಂದಿಗೆ||೫||
ಎತ್ತ3 ಸಾಗುತಲಿರುವೆ
ಅಜ್ಞಾನವ ತುಂಬಿರುವ ಸಮಾಜದಿ|
ಜ್ಞಾನದ ದೀವಿಗೆಯನ್ನು ಪಸರಿಸುತ್ತಾ
ಈ ವಿಶ್ವವನ್ನೇ ಎಚ್ಚರಿಸುತ್ತಾ||೬||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
22 Feb 2017, 09:20 pm
ಹಸಿವ ರೋಗಕೆ ಬೆಂಕಿ ಇಟ್ಟು ಬೂದಿ ಮಾಡಿ ಹುಳಗಳ ಮಾರಣ ಹೋಮಕ್ಕೆ ಶಾಂತಿ ಸಿಗಲಿ...!
ಹೊತ್ತಿ ಉರಿವ ಹೊಟ್ಟೆಯೊಳಗೆ ತಣ್ಣೀರಾದರೂ ಎರಚಿ ನೋಡಿ....!!
ಟಾರು ಮೆತ್ತಿದ ಮುಖಕೆ ಚಂದಿರನೇ ಚರ್ಮವಾಗಲಿ..!
ನನ್ನೊಡಲ ಉರಿಯ ಬೆವರಿಗೆ ಬೆಳಕಿನ ತುಂಡು ಬಟ್ಟೆ ಕೊಡಿ....!!
ಒಡಲ ಹುತ್ತಕ್ಕೆ ಹಾಲೆರೆಯಲು ಬಂದು ಕೆಡವುವವರ ನಡುವಲಿ ಚಿಗುರೊಡೆಯುವ ಗೆದ್ದಲು ನಾನು..!
ಚಿವುಟಿ ಹಾಕೋ ಊಸರವಳ್ಳಿಯ ಉಸಾಬರಿಗೆ ಎಳ್ಳು ನೀರು ಬಿಡಿ..!!
ಕಾಣದ್ದು ಬೊಗಳುವ ಸೀಳು ತುಟಿಗಳಿಗೆ ಬೇರಿನ ಹೊಲಿಗೆಯಾಕಿಸಿ ಬಿಚ್ಚದಿರಲಿ..!
ಅವಿಜ್ಞಾನಿ
- ಅವಿಜ್ಞಾನಿ
22 Feb 2017, 08:59 pm
ಭ್ರೂಣ!!
ಮೂರು ತಿಂಗಳ ಮಾಂಸ ಮುದ್ದೆಯೊಂದು ಮಾಸದೆಣಿಕೆ ಶುರುವಿಟ್ಟಿದೆ..!
ಯೋನಿಯುಳ್ಳ ಪಿಂಡವೆಂದು
ಅಪ್ಪನಾದವನ ತಲೆ ಕೆಟ್ಟಿದೆ..!
ಒಳಗೆ ಹೊರ ಜಗತ್ತಿನ ಮೊದಲ
ಭೇಟಿಗೆ ಹಾತೊರೆಯುತ್ತಿದೆ.!
ಇಷ್ಟವಿಲ್ಲದ ಮುದ್ದೆಯನ್ನು ಕರಗಿಸಲೆಂಬ
ಯೋಚನೆ ಶುರುವಿಟ್ಟಿದೆ.!!
ಮೊದಲ ಕೂಗು ಅಮ್ಮನೆನಲೇ!?
ಅವ್ವನೆನೆಲೇ!?ಕೂಸು ದ್ವಂದ್ವದಲ್ಲಿದೆ!!
ಗುಳಿಗೆಯಾಗಲೇ!? ಕತ್ತರಿ ಹಾಕಿಸಲೇ!?
ಅಪ್ಪನ ಚಿಂತೆ ಇದಾಗಿದೆ..!!
ಸಹೋದರಿಯ? ಸಹೋದರನ?
ಮೊದಲು ಹೋದವರು ಯಾರಿರಬಹುದು!?ಮಾಂಸವು ಗ್ರಹಿಕೆಯಲ್ಲಿದೆ..!
ಮನೆಯಾ!? ದವಾಖಾನೆಯಾ!?
ಅಪ್ಪನ ಯೋಚನೆ ಚಾಲ್ತಿಯಲ್ಲಿದೆ!!?
ಅಂಬೆಗಾಲಿಡಲು ಮಗುವು ತಯಾರಿ
ಮಾಡಿ ಸಣ್ಣಗೆ ಒದೆಯುತ್ತಿದೆ.!
ಹೊಟ್ಟೆಯಲ್ಲಿರುವುದ ಕಿತ್ತೆಗೆಯಲು
ಸವಾರಿ ಆಗಲೇ ಉಧ್ಘಾಟನೆಯಾಗಿದೆ..!
ಕಾಣದ ಜಗದ ಕನಸು ಹಲವು
ಮಾಂಸದಲ್ಲಿ ಚಿಗುರೊಡೆಯುತ್ತಿದೆ.!
ನುಣುಪು ಕತ್ತರಿಯ ಚಿಕಿತ್ಸೆಗೆ
ಭ್ರೂಣವು ಹತ್ಯೆಯಾಗುತಿದೆ
(ಈ ಕವನಕ್ಕೆ ವಾಟ್ಸಾಪ್ ನಲ್ಲಿ ನಡೆದ ಸ್ಫರ್ಧೆಗಳಲ್ಲಿ ಆರು ಸಲ ಪ್ರಶಸ್ತಿ ಸಿಕ್ಕಿದೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಕವನ ಅನ್ನುವುದರಲ್ಲಿ ಸಂತಸವಿದೆ)
(ಅವಿಜ್ಞಾನಿ)
- ಅವಿಜ್ಞಾನಿ
22 Feb 2017, 04:50 pm
ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.
ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?
ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.
ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.
"" ಮಲ್ಲಿಕಾರ್ಜುನ ""
- Mallikarjun
22 Feb 2017, 03:49 pm
ಎಲ್ಲೆಡೆಯು ನಿನ್ನದೇ ಮನ್ವಂತರ
ಮೆಲ್ನಡಿಗೆಯು ಅದೇ ಸಂವತ್ಸರ
ಕಾಡುತಿವೆ ನೆನಪು ದಿನವು ನಿರಂತರ
ಬಿಂಬ ಹುಡುಕುತಿಯೇ ನಿನ್ನಂತರ
ನೀ ನಗದಿದ್ದರೆ ಎಲ್ಲವೂ ಸ್ಥಿರ
ಕಾಣಲು ಹೃದಯವದು ಭಾರ
ನನ್ನಲೆಕೆ ನಿನಗಾಗಿ ಈ ಕಾತರ
ನೀ ನುಡಿದರೇ ನನಗಾಗ ಹಗುರ
ಮನದಲ್ಲಿ ನಿನ್ನದೇ ಬರಿ ಝೆಂಕಾರ
ನನ್ನ ಕಂಡು ನಿನಗೇಕೆ ಇಷ್ಟು ಬೇಸರ
ಪ್ರೀತಿಸದೇ ಹೋದೆ ಏಕೆ ನೀ ದೂರ
ಕಿತ್ತು ಕೊಳ್ಳದಿರು ನನ್ನ ಈ ಉಸಿರ
-ಅಭಿಸಾರಿಕೆ
- ABHILASH
21 Feb 2017, 10:30 pm
ಪ್ರೀತಿ ಎಂದರೆ,
ನೆನಪು
ನಗು
ಮಗು
ನೋವು
ಪುಳಕ
ಸೆಳತ
ಜೀವ
ಭಾವ
ಬದುಕು
ಮನಸು
ಕನಸು
ದೈವ
ಚೆಲುವು
ನಿರಾಸೆ
ಇನ್ನೂ ಹತ್ತು ಹಲವು ಬಗೆಗಿಳಿವೆ
ಆದರೆ ಇವೆಲ್ಲವೂ ಪ್ರೀತಿಯಲಲ್ಲಿ ವ
- shree
21 Feb 2017, 10:21 pm
ನಗುವ ಹಿಂದೆ ನೋವಿದೆ....
ನೋವಿನ ಹಿಂದೆ ಅಳುವಿದೆ....
ಆ ಕಣ್ಣೀರಿನ ಪ್ರತಿ ಹನಿಯಲ್ಲೂ..
ಮನ ಮಿಡಿಯುವ ಕಥೆಯಿದೆ...
ಈ ಕಥೆಗೆ ಅವನೇ ಸೂತ್ರಧಾರಿ...
ನಾನೇ ಪಾತ್ರಧಾರಿ...
ಈ ಕಥೆಗೆ ಕೊನೆಯಿಲ್ಲ...
ನನ್ನ ಕಂಬನಿಗೆ ಬೆಲೆಯಿಲ್ಲ...
- B.Shree
21 Feb 2017, 10:05 pm
ನಾನೊಂದು ಕಣ್ಣ ಹನಿಯಾಗಿದ್ದ ರೇ
ನಿನ್ನ ಕಣ್ಣಿನಿಂದ ಜಾರಿ,
ನಿನ್ನ ಕೆನ್ನೆ ಮೇಲೆ ಸಾಯಲು ಬಯಸುವೆ.
ನೀನೊಂದು ಕಣ್ಣ ಹನಿಯಾಗಿ
ನನ್ನ ಕಣ್ಣಲ್ಲಿ ಇದ್ದರೆ ಗೆಳತಿ
ಹೃದಯ ಮಿಡಿಯುವವರೆಗೂ
ನಾ ನಗು ನಗುತ ಇರಲು ಬಯಸುವೆ.
↑^^^^^^↑^^^^^^↑^^^^^^↑^^^
- ಕುಮಾರ ಸಿದ್ದರಾಜ
21 Feb 2017, 09:01 pm