ಮನಸ್ಸೆಂಬ ಹೂತೋಟಕೆ
ಹಾರಿ ಬಂತೊಂದು ಚಿಟ್ಟೆ... !!
ಹಿಡಿಯಲೇ.. ಬೇಡವೇ..
ಎಂಬಂತೆ ನಾ ನಿಂತು ಬಿಟ್ಟೆ... !!
ಅದರಂದವ ನೋಡುತ್ತಾ
ನೋಡುತ್ತಾ ನಾ ಪೂರ್ತಿ ಕೆಟ್ಟೆ..!!
ಮನಸಿನ ಕಚಗುಳಿ
ತಡೆಯಲಾಗದೆ
ಪ್ರೇಮ ಪತ್ರವ ಕೊಟ್ಟೆ..!!
ಅಷ್ಟರಲ್ಲಿ ಒಡೆಯಿತು
ಅವಳ ಕೋಪದ ಕಟ್ಟೆ..!!ಹು
ಹಿಡಿದಳವಳು ನನ್ನ ರಟ್ಟೆ..!!
ಹರಿದು ಚಿಂದಿ ಚಿಂದಿಯಾಯ್ತು
ನಾ ತೊಟ್ಟ ಬಟ್ಟೆ..!!
ಏಕೆ ಈ ಸಾವು,ಏಕೆ ಈ ಸಾವು
ಅರೆ ಪಾವು ಆಸೆಯನು ಇರಿಸದೇ...
ಅನುಚಿತ ಔಚಿತ್ಯವಲ್ಲದ ನೋವು
ಕಾಡಿದೆ ಸಾವಾಗಿ, ಬೇಡವಾಗಿಸಿದೆ ಬದುಕನೇ...
ದೇವರೆದುರಿಗೆ ಬಂಡಾಯವೆದ್ದಿದೆ ಮನಸು
ತಾಳಲಾರದಾಗಿದೆ ನೋವು ಮನದೊಳಗೆ.
ಯಾರ ಸಮಾಧಾನ ಅಸಮಧಾನ ಕೇಳಿಸದಾಗಿದೆ
ಉಳಿದಿಹುದೇನು ಜೀವನದಲಿ ಅನುರಾಗವೇ ಕರಗಿದಮೇಲೆ
ಬದುಕು ಬರುಡಾಗಿ ಬಂಡಾಯವೆದ್ದಿದೆ
ಕಣ್ಣೆದುರಗಿನ ಸತ್ಯವನರಗಿಸಿಕೊಳ್ಳಲಾಗದೆ ಚಡಪಡಿಸಿದೆ
ಮನಸು ಕುದಿಯುತಿದೆ ಕಾರುಣ್ಯವಿಲ್ಲದಿರುವ ದೈವ ಚಿತ್ತಕೆ.
ಧಿಕ್ಕಾರವೆಂದಿದೆ ದೈವ ಸಂಕಲ್ಪಕೆ,
ಧಿಕ್ಕಾರವೆಂದಿದೆ ಹಣೆಬರಹಕೆ,
ಧಿಕ್ಕಾರವೆಂದಿದೆ ಬದುಕಿನ ನಿಯಮಕೆ,
ಧಿಕ್ಕಾರವಿರಲಿ ನಮ್ಮ ಮಗಳಿಲ್ಲದೀ ಬದುಕಿನ ದಾರಿಗೆ.
ಇದ್ದ ಆಸೆ ಆಕಾಂಕ್ಷೆಗಳು ಮಣ್ಣು ಪಲಾದವು,
ಪ್ರೀತಿ ಮಮಕಾರ ವಾತ್ಸಲ್ಯ ಅರ್ಥಕಳೆದುಕೊಂಡು,
ಅವಳೊಂದಿಗೆ ಮಣ್ಣೊಳಗೆ ಕರಗಿ ಹೋದವು.
ಬದುಕು ಭಾರವಾಗಿ ಬೇಸರ ಬೇಗುದಿಯಾಗಿದೆ,
ತೀರದ ನೋವು ಝರಿ ತೊರೆಯಂತಾಗಿದೆ,
ನಮ್ಮೀಬದುಕು ಮುಗಿವವರೆಗೂ ಹೆಪ್ಪುಗಟ್ಟಿದ ಹರಳಾಗಿ ಕಾಡುವುದೀಸಾವು
ಇ ಮನದ ಕಲೆಯಲ್ಲಿ
ನಿಂತಿರುವ ನಿನ್ನ ನೆನಪಲ್ಲಿ
ಮರೆತಿರುವ ಹೊಸತನದಲ್ಲಿ
ಮಾತೆಲ್ಲ ಮಾಯವಾಗಿತಿಲ್ಲಿ
ಮೌನವೇ ಆವರಿಸಿದೆ ನಿನ್ನ ಪ್ರೀತಿಯಲ್ಲಿ
ಬಿತ್ತಿದ ಕನಸುಗಳ ದಾರಿಯಲ್ಲಿ
ಕೈ ಜಾರಿದೆ ಮನಸು ನಿನ್ನಲ್ಲಿ.....ಗೆಳತಿ
ನನ್ನವಳು ನಾನು ಕಡಲ ತೀರದಲಿ
ಕೇಳಿದಳು ನನ್ನಾಕೆ ಎಷ್ಟು ಪ್ರೀತಿಸುವೆ ಎಂದು
ಸಾಗರದಗಲ ಆಕಾಶದೆತ್ತರ ಎಂದೇಳಲಿಲ್ಲ ನಾನು
ಅಕ್ಕಿಯಷ್ಟೆಂದೆ ಜೋಳದ ಕಾಳಷ್ಟಂದೆ
ಅದಿಲ್ಲದೆ ಬದುಕಿಲ್ಲ ಬದುಕಲು ಸಾಧ್ಯವಿಲ್ಲ
ನಲ್ಲೆ ಬರುವಳೆಂದು
ಕಾಯುತ್ತಲಿರುವೆ||೨||
ಅಂಬ ಗಾಲೂರಿ
ಇಳಿ ವಯಸ್ಸು
ವಯಸ್ಸು ದಾಟಿದರೂ
ನಲ್ಲೆ ಬರಲಿಲ್ಲ
ನಲ್ಲೆ ಬಾರದ ಈ ಜೀವ
ಬೇಸರಗೊಂಡಿದೆ...
ಸಂತೈಸದಿರು ಗೆಳೆಯ
ಇನ್ನು ಮುಂದೆ ನೀ ನನ್ನ
ಬಾ ಗೆಳತಿ ಬೇಗ ನೀ ಇಲ್ಲದ
ಈ ಬಾಳು ಒಣಗಿದ
ಮರದಂತಾಗಿದೆ... ನೀ ಬಂದು
ಹೋಗು ಗೆಳತಿ ಬೇಗ....
ಕಾಯುತ್ತಿರುವೆ ಕಾಣದ ನಲ್ಲೆಗಾಗಿ