Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ

ಎಲ್ಲರ ಬಾಳಲಿ ಹಾದು ಹೋಗಿದೆ ಒಂದು ಕವನ
ಅದುವೇ ಯಾರು ಅಂದುಕೊಳ್ಳದ ಜೀವನ

ಜೀವನವೇ ಸಾಲದು ಬರೆಯಲು ಕವನ
ಆ ಕವನವೇ ಆಗಿದೆ ಎಲ್ಲರ ಜೀವನ

ಮೌಲ್ಯವನ್ನು ಅರಿತವನಿಗೆ ಸ್ವರ್ಗದ ಜೀವನ
ಅರಿಯದ ಮೂಡನಿಗೆ ನರಕದ ಮರಣ

ಮಾಡಬೇಕಿದೆ ಸರ್ವಶಕ್ತನ ನಾಮದ ಪಠಣ
ಪೂರ್ಣಗೊಳಿಸುವುದು ನಮ್ಮೆಲ್ಲರ ಜೀವದ ಕವನ


ಓಂ ಸಾಯಿ ರಾಮ

- laxmi

06 Oct 2026, 11:11 pm

ಎಂದೆಂದಿಗೂ ನಮ್ಮ ನಾಡ ನುಡಿ ಚಂದ

ಎಂದೆಂದಿಗೂ ನಮ್ಮ ನಾಡೇ ಅಂದ
ಎಂದೆಂದಿಗೂ ನಮ್ಮ ನುಡಿಯೇ ಚಂದ
ನಾವು ನುಡಿಯುವೆವು ಕನ್ನಡ....
ಪ್ರೀತಿಯ.ಮಮತೆಯ ಕನ್ನಡ....

ಬೇಲೂರ, ಹಂಪೆ,ಬಾದಾಮಿ ಐಯೋಳಿ
ಈ ನಾಡ ಶಿಲ್ಪಾ ಕಲೆ ಏಳುತಿವೆ ಕಥೆ
ಚಂದದೊಂದು ಇತಿಹಾಸ...
ಈ ಮಣ್ಣಿನ ಶೃಂಗಾರ ಹೊನ್ನಿನ ಕಥೆ
ವೈಭದಿ ಮಹಾರಾಜರ ಇತಿಹಾಸ

ಮೈಸೂರ ದಸರಾ ಈ ನಾಡ ವೈಭವ
ಅರಮನೆ ಈ ನಾಡಿನ ಸುಂದರ
ಈ ನಾಡಿಗಾಗಿ ಈ ನುಡಿಗಾಗಿ
ಹೋರಾಡಿದ...ಮನಿಯರ...
ನಮ್ಮ ಕವಿಗಳ ದಾಸರ..
ನುಡಿಮುತ್ತು ಸಿಹಿಮುತ್ತು ಮಾಣಿಕ್ಯವೋ

ನಮ್ಮ ನಾಡೇ ಶ್ರೀಗಂಧವೋ
ನಮ್ಮ ನಾಡೇ ಸೌಘoದವೋ
ನಮ್ಮ ಬಾಳಿನ ಸಿರಿ ಕನ್ನಡ
ನಮ್ಮ ಭಾಗ್ಯದಸಿರಿ ಕನ್ನಡ

✍️ವೀರೇಶ್ ವಿ ಕುಂಬಾರ ಖೈರವಾಡಗಿ







- Veereshappa v khairawadagi

06 Oct 2026, 02:31 am

ಬೇಗ ಹೇಳು ನೀನು, ಕಾಯುತಿರುವೆ ನಾನು...

ನನ್ನ ಪಾಡಿಗೆ ನಾನಿದ್ದೆ ನಾ ನನ್ನ ಬಾಳಲಿ,
ನಿನ್ನ ಕಂಡ ಮೇಲೆ ನನ್ನ ಪಾಡು ಏನೆಂದು ನಾ ಹೇಳಲಿ,
ಯೌವ್ವನದ ಸಿರಿಯು ನೀನು, ಕಲ್ಪನೆಯ ಕಡಲು ನೀನು,
ಕಣ್ತುಂಬಿಕೊಳ್ಳಲೇ ? ಕಣ್ಮುಚ್ಚಿ ನೋಡಲೇ ?,
ಸಿರಿಯ ಅರಸನಾಗಿಸುವೆಯಾ ?,
ಕಡಲಲ್ಲಿ ಮುಳುಗಿಸುವೆಯಾ ?,
ಬೇಗ ಹೇಳು ನೀನು, ಕಾಯುತಿರುವೆ ನಾನು...

__ tippu __

- tippu

04 Oct 2026, 08:35 pm

ನೆನ್ನೆ ಗಳಲ್ಲೇ ಉಳಿದ ಹುಡುಗಿ

​ಅವನು ವಿದಾಯ ಹೇಳಿದ ಆ ರೀತಿ
ಅಷ್ಟೇನೂ ದುಃಖ ತರಲಿಲ್ಲವೇನೋ,
ಅಥವಾ ಆ ನೋವು ಎಷ್ಟು ತೀವ್ರವಾಗಿತ್ತೆಂದರೆ
ಕಣ್ಣೀರು ಸುರಿಸಲೂ ಅವಳಿಗೆ ಸಾಧ್ಯವಾಗಲಿಲ್ಲವೋ.
ತನ್ನ ವಸ್ತುಗಳನ್ನೆಲ್ಲ ಮೂಟೆ ಕಟ್ಟಿ, ಬಾಗಿಲು ದಾಟಿ ಹೋದ ಅವನು,
ದೂರದೂರಿಗೆ ವಾಹನವನೇರಿ ಹೊರಟೇಬಿಟ್ಟನು,
ಅವಳು ಮಾತ್ರ ನಿನ್ನೆಗಳಲ್ಲೇ ಉಳಿದ ಹುಡುಗಿಯಾದಳು.

​ಸಾಗರದಾಚೆಯ ಪರದೇಶಕ್ಕೆ ವಿಮಾನವೇರಿ ಹೋದನು ಅವನು,
ಮನೆಯಲ್ಲೇ ಕುಳಿತು ತಿಳಿಯಲು ಪ್ರಯತ್ನಿಸಿದಳು ಇವಳು
ಇಷ್ಟು ಹತ್ತಿರವಿದ್ದ ವ್ಯಕ್ತಿ ಹೇಗೆ ಇಷ್ಟು ದೂರ ಹೋದನೆಂದು?
ಮತ್ತೆ ಅವಳು ನಿನ್ನೆಗಳಲ್ಲೇ ಉಳಿದ ಹುಡುಗಿಯಾದಳು.

​ಯಾವುದು ಸರಿ, ಯಾವುದು ತಪ್ಪು ಅವಳಿಗಿನ್ನೂ ತಿಳಿದಿಲ್ಲ,
ತಿಳಿದಿರುವುದೆಂದರೆ ಈ ದೀರ್ಘ ಕಾಯುವಿಕೆಯ ನೋವೊಂದೇ.
ಅವನಿಲ್ಲದ ದಿನಗಳಲ್ಲಿ ಸುರಿಸಿದ ಕಣ್ಣೀರ ಹನಿಗಳನು ಅವಳೆಂದೂ ಎಣಿಸಲಿಲ್ಲ,
ಏಕೆಂದರೆ ಅವಳ ಹೃದಯದಂತರಾಳದಲ್ಲಿ ದೃಢ ನಂಬಿಕೆಯಿದೆ
ಯಾವುದಾದರೊಂದು ದಿನ ಅವನು ಮರಳಿ ಬರುವನೆಂದು.
ಮತ್ತೆ ಅವಳು ನಿನ್ನೆಗಳಲ್ಲೇ ಉಳಿದ ಹುಡುಗಿಯಾದಳು.

- ಚೇತನ್ ಬಿ ಸಿ

02 Oct 2026, 07:54 pm

- ಚಿ.ಚೋರ

02 Oct 2026, 06:09 pm

ಕೆಂಪು ದೀಪದಡಿ
ಕೆಂಗುಲಾಬಿ ಮೊಗ್ಗು

ತಡೆದುಕೋ ನೀನು ಸ್ವಲ್ಪ ತಡೆದುಕೋ
ಈದೀಗ ನಾನು ನನ್ನ ಮಗುವಿನಾ ಜನ್ಮ ನೀಡಿರುವೆ ll

ತಿಳಿಯತೆ ನಿನಗೆ ಮುದಿಯ ಮೃಗವೆ

ಈ ನಿಜವನರಿಯದೇ ಕಾಮದಾಸೆಗೆ ನನ್ನನು ಕರೆತಂದೆ ll

ನಾನುಂಡ ಅನ್ನವು ಎದೇಹಾಲಾಗಲಿ ತಡೆದುಕೋ

ಯೆನ್ನಕರುಳ ಕುಡಿಯು ಚಿಗುರೊಡೆಯಲಿ ll

ನಿಖರವಾಗಿಯು ಹಕ್ಕಿದಿ ನಿನಗೆ
ನನ್ನ ಈ ಮಾಂಸಮೂಳೆಮೈಯ ಮೇಲೆ ll

ಅರ್ಥವಿಲ್ಲದ ಚಿತ್ರ ಬಿಡಿಸಲು ನಿನ್ನಲಿ
ಉಲಿಕುಂಚಗಲಿಲ್ಲ ಈ ಶಿಲೆಯನು ಕಲೆಯಾಗಿಸಲು ll

ಕೊಬ್ಬಿದ ಕೊಣವು ಕೇಸರಿನಲಿ ಕಾಯ್ದಾಡದಂತೆ

ಮೃಗೀಯ ಕಾಮನೇಗಳನು ತಡೆದುಕೋ ll

ಈ ಕೆಂಪು ದೀಪದಡಿಯ ಕೆಂಗುಲಾಬಿ ಮೊಗ್ಗಿಗೇ

ಅರಳಿ ನಗುವ ಸಹಜದಾ ಕನಸಿದೆ ll

ಎನ್ನ ಕಂದಮ್ಮನಿಗೆ ಹಸಿವಾಗಿದೆ

ಈದು ಕೆಂಪು ಕೆಂಪುದೀಪದ ಅಡಿಯಾ
ಕೊಂಪೆಯಲಿ ಅರಳುವ ಕೆಂಗುಲಾಬಿಯ ಮೊಗ್ಗಾಗಿಡೆ ll

ಕಲ್ಮೇಶ್ವರಯ್ಯ ಕಲ್ಮಠ (ಕವಿಕ)
ಕೋಡಿಕೊಪ್ಪ . 24/September/2025

- kalmeshwarayya Kalmath

02 Oct 2026, 08:42 am

ಮುದ್ದು ಕಂದ...

ಓ ನನ್ನ ಹೊಂಬೆಳಕೆ,
ಬಾ ನನ್ನ ಅಂಗಳಕೆ.

ನಿನ್ನ ಚೆಲುವಿನ ರೂಪ,
ನನ್ನ ಕಣ್ಣಿನ ದೀಪ.

ನಿನ್ನ ತೊದಲಿನ ನುಡಿಯು
ನನ್ನ ಹೃದಯದ ನಡೆಯು.

ನಕ್ಕರೆ ನೀನು ಹುಣ್ಣಿಮೆ ಚಂದಿರನ ಹಾಗೆ,
ಅತ್ತರೆ ನೀನು ತುಂಟ ಕೃಷ್ಣನ ಹಾಗೆ.

ನಿನ್ನ ಸುಂದರ ನಡೆಯು ಹಂಸ ಪಕ್ಷಿಯಂತೆ,
ನಿನ್ನ ಸುಂದರ ನುಡಿಯು ಕೊಳಲಿನ ನಾದದಂತೆ.

ನಿನ್ನ ಕಾಲ್ಗೆಜ್ಜೆಯನಾದ ಸುಮಧುರ ಸಂಗೀತದಂತೆ,
ನಿನ್ನ ಸುಂದರ ಮುಂಗುರುಳು ದೃಷ್ಟಿಯ ಬೊಟ್ಟಿನಂತೆ.

ನಿನ್ನ ಈ ಮುದ್ದಾಟದಲಿ,
ನಿನ್ನ ಈ ತುಂಟಾಟದಲಿ ನಾ ಕಂಡೆ ನನ್ನ ಬಾಲ್ಯವ.

- Sampada

28 Sep 2026, 09:46 pm

ಪ್ರೀತಿಯ ಸರದಾರ...

ನಿನ್ನ ಪ್ರೀತಿಯ ಬಲೆಯಲ್ಲಿ,
ಸಿಕ್ಕವಳು ನಾನು,
ಹೇಗೆ ಬಿಡಿಸಿಕೊಳ್ಳಲಿ ನಿನ್ನ ಪ್ರೀತಿಯ ಬಲೆಯಿಂದ,
ಹೃದಯದ ಬಡಿತದ ಪ್ರತಿ ನಿಮಿಷವು ಕಾದಿದೆ ನಿನ್ನ ಬರುವನ್ನು,
ನಿನ್ನ ಬರುವಿಕೆಗಾಗಿ ಕಾದಿರುವೆ ನಿನ್ನವಳು ನಾನು....

ಇಂತಿ ನಿನ್ನ ಆರಾಧಕಿ...

- Sampada

28 Sep 2026, 08:02 pm

ಭಾವ

ಭಾವವಿಲ್ಲದ ಭಾವ ಒಂದು ಭಾವನೆ ಭಯದಲ್ಲಿ ಭಾವಿಯಂತೆ ಭಾವಿಸಿತು.
ನಿನ್ನೊಲ್ವೆಮ್ಮೆಯ ಭಾವ ಜೀವವು ಭಾವನೆಗಾಗಿ ಕಾದಿತಂತೇ .
ಭಾವಕ್ಕೇ ಭಯವಾಗಿ ಭಾಗವಾಗಿತಂತೆ .
ಬದುಕು ಭಾವನೆಗಳ ನಡುವೆ  ಬದುಕನ್ನು ಆರಿಸಿದೆ ನೀ.
ನೀ ಇಲ್ಲದೆ ನಾ ಇರಬಲ್ಲನೆ ಎಂದೂ ಒಳಗಿರುವ ಭಾವವು ಬೇಚಿದಂತೆ .
ಬದುಕು ಭಾವನೆಗಳನ್ನು  ಭಯವಿಲ್ಲದೆ ಭಾಗಾಕಾರ ಮಾಡಿ ಭಾವನೆಯೇ ಇಲ್ಲದಂತೆ  ಬದುಕುತ್ತಿರುವ ಭಾವ ಜೀವಿ .
ಕೇಳು ನೀ ಓಮ್ಮೆ ಭಾವನೆಗಳ ಸರಮಾಲೆಯನ್ನು ಕಟ್ಟಿ ಭಾವ ಜೀವಿಯಂತೆ ಕಾದ ಭಾವನೆಗೆ ನೀ ಕೊಡಬಲ್ಲೆಯಾ?? ಭಾವವನ್ನು.
ಬಣ್ಣವಿಲ್ಲದ ಬದುಕಿಗೆ ಭಾವನೆಗಳ ಬಣ್ಣ ತುಂಬಿದ ಭಾವ ಜೀವಿಯೇ ನಿನಗೆ ನನ್ನ  ಪ್ರೀತಿ ಸಮರ್ಪಣೆ..



ಇಂತಿ ನಿನ್ನ  ಪ್ರೀತಿಯ ಭಾವ ಜೀವಿ.

- chaitra

28 Sep 2026, 12:14 pm

ಪೂರ್ಣಗೊಳ್ಳದ ಅರ್ಧ ಚಂದಿರ

ನೀನಾಗಿದ್ದೆ ನನ್ನ ಬಾಳಲ್ಲಿ ಪೂರ್ಣಗೊಳ್ಳದ ಅರ್ಧ ಚಂದಿರ .
ನಿನಗಾಗಿ ಕಾದೆ ಪ್ರತಿ ಕ್ಷಣ ನಿನ್ನ ಪೂರ್ಣಗೊಳಿಸಲು.
ನೀನಾಗಿದ್ದೆ ನನ್ನ ಬಾಳಲ್ಲಿ ಪೂರ್ಣಗೊಳ್ಳದ ಅರ್ಧ ಚಂದಿರ .
ನಿನಗಾಗಿ ನಾ ಕಾದಿದ್ದೆ ಧರಣಿಯಂತೇ ನಿನ್ನ ಪೂರ್ಣ ರೂಪ ಕಣ್ಣ ತುಂಬಲು.
ನೀನಾಗಿದ್ದೆ ನನ್ನ ಬಾಳಲ್ಲಿ ಪೂರ್ಣಗೊಳ್ಳದ ಅರ್ಧ ಚಂದಿರ .
ನಿನಗಾಗಿ ನಾ ಶಪಿಸಿದ್ದೇ ಆ ನೀಲಿ ಆಕಾಶವನ್ನು
ನನ್ನ ಕಣ್ಣಿಗೆ ಮರೆಮಾಡಿದಂಥ ನಿನ್ನ ರೂಪವ.
ನೀನಾಗಿದ್ದೆ ನನ್ನ ಬಾಳಲ್ಲಿ ಪೂರ್ಣಗೊಳ್ಳದ ಅರ್ಧ ಚಂದಿರ .
ಮೌನವು ಪ್ರೀತಿಯಾದಾಗ
ನೀನಾಗಿದ್ದೆ ನನ್ನ ಬಾಳಲ್ಲಿ ಪೂರ್ಣಗೊಳ್ಳದ ಅರ್ಧ  ಚಂದಿರ.
ಮಾತಿಗಿಂತ ಕಣ್ಣಿನ ಭಾಷೆ ಹೆಚ್ಚಿತ್ತು
ನೀನಾಗಿದ್ದೆ ನನ್ನ ಬಾಳಲ್ಲಿ ಪೂರ್ಣಗೊಳ್ಳದ ಅರ್ಧ ಚಂದಿರ.




✍️✍️ ಚೈತ್ರಾ

- chaitra

27 Sep 2026, 02:43 pm