Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41
ನುಚ್ಚಾದ ಕನ್ನಡಿಯಲ್ಲಿ ಸಜ್ಜಾಗಿ ಬಂದ ಸುಂದರಿಯ ಬಿಂಬ..
ತಂಗಾಳಿ ಬಚ್ಚಿಟ್ಟ ಮಾತ ನೀ ಒಮ್ಮೆ ಹೇಳಬಾರದೆ..?
ಈಗೊಮ್ಮೆ ಆಗೊಮ್ಮೆ ಕೆಣಕುತಿದೆ ನಿನ್ನದೇ ಕಲ್ಪನೆ...
ಆ ಕಣ್ಣ ಅಂಚಿನ ಮಿಂಚಿನ ಕಾಡಿಗೆಯ ಸಂಚಿಗೆ ವಶವಾಗಿದೆ ಈ ಜೀವ...
ನಿನ್ನ ನಾಚುವ ನಗುವಿನಲ್ಲಿ ನನ್ನೊಮ್ಮೆ ಆಮಂತ್ರಿಸು..
ನೀ ಸನಿಹಕ್ಕೆ ಬರುವ ಸುಳಿಯೊಂದು ಸೂಚಿಸು..
ಶುರುವೋ ಅಂತ್ಯವೋ ತಿಳಿಯಾದ ನೋಟ..
ಅಪರಾಧಿ ನಾನು ಪ್ರೀತಿ ಶಿಕ್ಷೆ ವಿಧಿಸು ನೀನೂ..
insta:- unique_abhyaa
- abhi.s.j
27 Nov 2025, 07:33 pm
ಕಾಡುವ ಗೆಳತಿ...
ಬಾಣಂಗಳದಲ್ಲಿ ನಗೆಯ ಚೆಲ್ಲಿ,
ಬೀದಿಗೆ ಚಂದ್ರಮನ ಮೊಗವ ತೋರಿ
ಕಣ್ ರೆಪ್ಪೆ ಬಿಡುವ ಮುನ್ನ
ಮಾನವ ಕಲಕಿ ಮರೆಯಾದಕೆ
ನೀನೇನಾ...
ನೀನೇನಾ ಅದು ನೀನೇನಾ
ದಿನ ದಿನ ಪ್ರತಿ ದಿನ
ಬೆಳಗೆದ್ದು ಕಾಣವೇನು
ನನ್ನ ಕಣ್ಣ ಕನ್ನಡಿಯೊಳಗೆ
ಚಂದದ ಗೊಂಬೆಯನ್ನ
ನೀನೇನಾ ಅದು ನೀನೇನಾ..
ಕನಸಾಗಿ ಕಂಡಾಕೆ
ಮಿಂಚಿ ಮರೆಯಾದಕೆ
ಅಚ್ಚ ಮಲ್ಲಿಗೆಯ ನಗೆಯಾಕೆ
ಬೆಳದಿಂಗಳಂತ ಸೀರೆಯುಟ್ಟಾಕೆ
ಅದು ನೀನೇನಾ ಅದು ನೀನೇನಾ..
ಗೆಳತಿ ಬಾರೆಯಾ
ಒಲವ ತೊರೆಯಾ
ಕನಸ ನನಸು ಮಾಡೆಯಾ
ಜೊತೆ ಹೆಜ್ಜೆ ಇರಿಸು ಏಳೇಳು ಜನಮಕ್ಕೂ
ಕಾಯುವೆ ಉಸಿರು ನಿಲ್ಲುವ ತನಕವು...
insta:- unique_abhyaa
- abhi.s.j
25 Nov 2025, 08:08 pm
ನಾನೊಬ್ಬ ಭಗ್ನಪ್ರೇಮಿ...
ಕಾದು ಕಾದು ಸಾಕಾಗಿದೆ
ಜೀವವಿಲ್ಲದ ಆ ಬೆಂಚುಗಳು
ಲೈಟ್ಕಂಬಗಳಿಗೂ ಯಾಕೋ
ಯಾರೋ ಕಲ್ಲೊಂದು ಹೊಡೆದು ಹೋಗಿದ್ದಾರೆ
ನಾನು ನೀನೂ ಜೊತೆಯಲ್ಲಿ ನಡೆಯಲು
ಇನ್ನು ಆ ದಾರಿ ಕತ್ತಲು..
ಅಯ್ಯೋ ಎಂತ ಪೆದ್ದ ನಾನು
ದಾರಿಯಲಿ ನುಡಿಯಲು ನೀನಿಲ್ಲವಲ್ಲ ಈಗ..!!
ಸುಮ್ಮನೆ ಕೂತು ಬೋರಗಿದೆ
ಚಾಟ್ ಮಾಡುತ್ತಾ ಕಾಲ ಕಳೆಯೋಕೆ
ನಿನ್ನ ನಂಬರ್ ಹುಡುಕುವ ಸಲುವಾಗಿ
ಮೊಬೈಲನ್ನು ರಿಫ್ರೆಶ್ ಮಾಡ್ತಾ ಇದೀನಿ..
ಅಯ್ಯೋ... ಮತ್ತೆ ನೋಡು..!
ನಿನ್ನ ನಂಬರ್ ಡಿಲೀಟ್ ಮಾಡಿರೋದು
ಮರ್ತೆ ಹೋಯ್ತು...!!
ನಿನ್ನನ್ನ ಮರಿಬೇಕು ಅಂತ
ಎಲ್ಲರ ಜೊತೆ ಹೇಳ್ತಾ ಇದೀನಿ
ನಾ ಅವಳನ್ನ ಮರ್ತಿದೀನಿ ಅಂತ..!
ಆದ್ರೆ ದಡ್ಡ ನಾನು ಮರ್ತಿದ್ದೀನಿ ಅಂತ
ಜಾಸ್ತಿ ನೆನಪಿಸಿಕೊಳ್ತಾ ಇದೀನಿ..!
ಅಯ್ಯೋ ಬಿಡು ಭಗ್ನಪ್ರೇಮಿಗೆ
ಇದೆಲ್ಲಾ ಮಾಮೂಲ್..!!
insta:- unique_abhyaa
- abhi.s.j
25 Nov 2025, 07:58 pm
ಮನದ ತಳಮಳ...
ಮಾತು ಮಾತಲಿ ಸಲಿಗೆ
ಎರಡು ಮನಸುಗಳ ಬೆಸುಗೆ
ಜೀವಕೆ ಅರಿವಿಲ್ಲದ ಹಾಗೇ
ಹೃದಯಗಳ ಸತತ ಸುಲಿಗೆ
ಬಿಡಲಾಗದ ನಂಟಿಗೆ
ಗಂಟು ಹಾಕುವ ಶುಭಗಳಿಗೆಗೆ
ಕಾಯುತ್ತಿರುವ ಮನಸುಗಳಿಗೆ
ತಳಮಳ ಒಳಗೊಳಗೇ..!!
ಬೆಸೆಯದೇ ಕಣ್ಣು ಕಣ್ಣಲಿ
ಅದು ಹೇಗೆ ನೀ ಕುಳಿತೆ ನನ್ನ ಮನದಲಿ
ಸೋತು ಹೋದೆನೇ ನಾ ಅರೆಗಳಿಗೆ
ಆ ಮಧುರ ಕೋಗಿಲೆ ಧ್ವನಿಗೆ
ನೀ ತೋರಬೇಡ ಒಲವೂ
ನನ್ನ ರೂಪ ರಾಶಿ ಕಡೆಗೆ
ನಾ ನಿನ್ನ ಸ್ವಂತ ನಿನಗೆ
ನೀನೇ ಗತಿ ಇನ್ನು ನನಗೇ..
ನೀ ಕಡೆಗಣಿಸುವಾ ಭೀತಿ ಮನಸಿಗೇ..
ಬಿಡಬೇಡಾ ಕೈಯ ಕೊನೆವರಿಗೇ!!
ಕುರುಡು ಪ್ರೇಮವ
ಋಜುವಾತು ಮಾಡುವ.
ರೂಪವ ಕಡೆಗಣಿಸುತ
ಮಾಡುವ ಪ್ರೀತಿ ಶಾಶ್ವತ..
ಕಡಲಾಳದ ಸ್ವಾತಿಮುತ್ತು ನೀನೂ
ನಿನ ಅಂತರಾಳ ಗೆದ್ದ ಧೀರ ನಾನು
ಒಲವೇಲ್ಲಾ ನಿನ್ನ ಹೃದಯದ ಕಡೆಗೇ
ನಿನಾಡುವ ಪ್ರೀತಿಯ ನುಡಿಗೇ
ಸಾಕು ಸಾಕು ನನಗೇ ನೀನೊಬ್ಬಳೇನೇ
ತೆಗೆದಿಡು ಭ್ರಮೆ ಮನಸ್ಸಿಂದಾಚೆನೇ..!!
insta:- unique_abhyaa
- abhi.s.j
25 Nov 2025, 07:44 pm
ಆಸೆ...
ಬರೆದರೆ ಬರೆಯಲಾಗದಷ್ಟು ಬರೆಯುವ ಆಸೆ,
ಹಾಡಿದರೆ ಸಪ್ತ ಸ್ವರಾಗಳಾಗುವ ಆಸೆ,
ನನ್ನವಳ ಅಂದ ಹೊಗಳುವ ಪದ ಪುಂಚ
ಸಾಲದಷ್ಟು ಹೊಗಳುವ ಆಸೆ!
ನನ್ನವಳ ಮನದ ಆಳದಲ್ಲಿ ಹೊಕ್ಕು
ತಿಳಿ ಸಿಹಿ ನಿರಾಗುವಾಸೆ!
ಅವಳ ಕೇಂತುಟಿಯ ಮುಗುಳ್ನಗೆಯ
ಅಂಚಿನಲಿ ಮುಳುಗುವ ಆಸೆ!
ನನ್ನವಳ ಗಿಣಿಮೂಗೂ ಮೂಗಿನ
ಮೂಗುತಿ ಆಗುವ ಅಸೆ,
ನನ್ನವಳು ನಾಚಿ ನೀರಾದಾಗ
ಅವಳ ಕೆನ್ನೆಯ ಕೆಂಪಾಗುವಾಸೆ..
ಕಲ್ಲು ಮನದ ಈ ಕಲ್ಲು ಮಾನವನ
ಮನದಲ್ಲೂ ಪದ್ಯ ಬರೆಸಿದ ನನ್ನಾಕೆಯಾ
ಹೂ ಮನಸಿನ ಮನದಲ್ಲಿ ಎಂದೂ ಬಾಡದ ಹೂ ಆಗುವಾಸೆ.
insta:- unique_abhyaa
- abhi.s.j
25 Nov 2025, 06:28 pm
ಯಾರ ಬಣ್ಣಿಸಲಿ ನಾನು...
ಯಾರ ಬಣ್ಣಿಸಲಿ ನಾನು
ಯಾರ ಮೆಚ್ಚಿ ಬರೆಯಲಿ ನಾನು.
ನಿನ್ನ ಮುಂಗುರುಳು ಕಪ್ಪು
ಹೊಗಳಿದರೆ ನಾ
ನಿನ್ನ ಕಾಮನ ಬಿಲ್ಲಿನ
ಹುಬ್ಬುಗಳಿಗೆ ಅಸಮಾಧಾನ.
ನಿನ್ನ ಅರಳುಕಂಗಳ ಬೆರಗು
ಸವಿಯುವಾಗ
ಸಂಪಿಗೆಯ ನಾಸಿಕದ ತುದಿ
ತುಸುಕೆಂಪು.
ನಿನ್ನ ಕೆಂಗುಲಾಬಿ ಕೆನ್ನೆಯ
ಅಭಿನಂದಿಸೆ ನಾನು
ನಿನ್ನಧರದಲ್ಲಿ ಕೊಂಕು ನಗೆಯ
ಕಿಡಿಕೋಪ
ನಿನ್ನ ಮಧು ತುಂಬಿದ ತುಟಿಯ
ಬಣ್ಣಿಸಲು ನಾನು
‘ನಾನೇನು ಕಡಿಮೆ’
ನುಡಿಯಿತು ಬಿಂಕದ ಸಿಂಹ ಕಟಿ.
ನನ್ನ ಪೆಚಾಟವ ನೋಡಿ
ನಗುತಿಹುದು ನೀನಿಟ್ಟ
ಕುಂಕುಮದ ಬಿಂದು.
ಯಾರ ಬಣ್ಣಿಸಲಿ ನಾನು
ಯಾರ ಮೆಚ್ಚಿ ಬರೆಯಲಿ
‘ಕವನ’
ನಾನಿಂದು.
insta:- unique_abhyaa
- abhi.s.j
23 Nov 2025, 09:05 pm
ಬಿಂಕದಾಕಿ..
ಗೆಜ್ಜೆ ಗೀಲಕ್ಕ ಮಾಡಿ
ನನ್ನ ಮನಸ್ಸ ಕದ್ದಾಕಿ
ಚೆಂದನ ಹಸರ ಸಿರಿ ಉಟ್ಟು
ಮಂದ್ಯಾಗ ಬರಾಕಿ
ಜಡಿಗೆ ಮಲ್ಲಿಗೆ ಮಾಲಿ ಹಾಕಿ
ಘಮ್ ಅನ್ನಾಕಿ
ಮುಖದಗಾ ಕಂದಹಾಸ ಬೀರಿ
ಚೆಂದ ಕಾಣಕಿ
ಕಂಡಂಗ ಮಾಡಿ
ಕಾಣದಂಗ ಮಾಯವಾದಾಕಿ
ಸಂದ್ಯಾಗ ಹಾದು ಹತ್ರ ಬಂದ್ರ
ಓಡಿ ಹೋಗಾಕಿ
ಮಾತನಾಡದ ನಾಚಿಕೊಂಡ
ಮಾರಿ ಕಿಂಚಾಕಿ
ನನ್ನ ನೆಳ್ಳಿಗೆ ಬೆದರಿಕೊಂಡ
ತಿರುಗಿ ನಿಲ್ಲಾಕಿ
ಬಿಂಕದ ಮಾತಿಲೇ ಬೆರಗ್ಮಾಡಿ
ಒಲಸಿಕೊಂಡಾಕಿ
ನನ್ನ ಪೋರಿ ಸ್ವರ್ಗದೊಳಗಿನ
ಅಪ್ಸರೆ ಅಂತಾಕಿ
insta:- unique_abhyaa
- abhi.s.j
23 Nov 2025, 08:49 pm
ಅಂತೇ ಕಂತೆ...
ಬೆಳಿಗ್ಗೆನೇ ಸಿಕ್ಬಿಟ್ಲು address ಹೇಳ್ಬೇಕಂತೆ
ಕಾಣಿಸ್ಬಿಟ್ಲು ನಂಗವಳು 4G ಹುಡುಗೀಯಂತೆ
ನೋಡುತ್ತಾ ಮುಖವನ್ನ ಹೇಳ್ತಿದ್ದೆ adress ನಾ
ನಕ್ಬಿಟ್ಲು ಒಮ್ಮೆಲೇ... ಕೇಳಿದೆ ಯಾಕೋ ಚಿನ್ನ
ಹೇಳ್ತಿದ್ಲು leftನ್ನ ತೋರಸ್ತೀದ್ಲು rightನ್ನ
ಅಂತೇಳಿ ತಿರುಗಿ ನೋಡದೆ ಹೋಗ್ಬಿಟ್ಲು ಮುಖವನ್ನ
ನೋಡುತ್ತಾ ನಿಂತೆ ಮೈ ಮರೆತಂತೆ..
ನೆನಪಾಯ್ತು ಒಮ್ಮೆಲೇ ಎಡವಿ ಬಿದ್ದಂತೆ..
fullstop ಇಟ್ಬುಟ್ಟೆ ಕನಸಿಗೇ ಮನಸ್ಸಿಲ್ಲದಂತೆ...
- abhi.s.j
21 Nov 2025, 08:11 pm
ಮತ್ತೆ ಮತ್ತೆ ನಕ್ಕಳು...
ಅತ್ತೆ ಮಗಳು
ಸೀರೆಯಲ್ಲಿ
ಮೊದಲ ಬರಿ ಜಾತ್ರೆಯಲ್ಲಿ
ಕಂಡು ಕದ್ದಳು
ಮನವನ್ನು ಮೆಲ್ಲ ಹತ್ತಿರ ಬಂದಳು
ಮುದ್ದು ಮೊಗವ
ಮತ್ತೆ ಮತ್ತೆ ತೋರಿ
ನಾಚಿ ಕಣ್ಣಲ್ಲೇ
ಮನದ ತುಂಬಾ
ಆಸೆಯ ಬಿತ್ತಿದಳು
ಜಾತ್ರೆಗೊಂದು ಮೆರುಗು ಬಂತು
ಅವಳನ್ನು ಕಂಡು
ಮನಸ್ಸಿಗೆ ಖುಷಿಯು ಬಂತು
ಹರೆಯದ ಬಯಕೆಗೆ
ಕಳೆ ಬಂತು
ಮಾಡದಿಯಾಗಿ ಬೆಡಗಿ
ಎಂದು ಮನವು
ಬೇಡಿಕೆಯ ಇಟ್ಟಿತು..