Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನ❣️

ಭಾವಗಳ ಬಾರವ್ವ ಹೊತ್ತು ನಡೆಯುವೆ ನಾ
ಕುದಿಯುವ ಆಸೆಯಲ್ಲಿ ನೊಂದು ಬೆಂದಿದೆ ಹೃದಯ.

ಕಿರಿದು ಕಿರಿದು ನಲಿವಿನೊಳಗೆ ಅಡಗಿದೆ ನನ್ನ ಬದುಕು ನಲಿವೆಲ್ಲ ಕನಸಾಗಿ ಕರಗಿ ಹರಿಯುವ ಕಡಲಲ್ಲಿ ಸಾಗಿದೆ ನನ್ನ ಹಡಗು.

ಸ್ನೇಹವೆಂಬ ನಿಧಿಯ ಹುಡುಕಿ ಸಾಗಿದೆ ದಿನವು ಪಯಣ ಗೆಳೆಯರಿಲ್ಲದೆ ಬರಿದಾಗಿದೆ ನನ್ನ ಈ ಹರಣ

ಯಾರು ಇಲ್ಲದ ಒಂಟಿ ಹೃದಯಕ್ಕೆ ಸ್ನೇಹವಾಯಿತು ಎರಡು ಸಾಲಿನ ಕವನ.
~ ಕಿರಣ್ ಕ್ರೀಸ್

- Kris

15 Feb 2020, 06:09 pm

ನೇನಪು

ನೆನಪೆಂಬ ಅಂತರಂಗ ಅವಳಿರುವ ಕನಸೆಡೆಗೆ ಅರಿವಿಲ್ಲದೆ ಸಾಗುತ್ತಿದೆ...
ಪ್ರಶ್ನಿಸಿದಾಗಲೆಲ್ಲಾ ಬರೀ ನಗುವಲ್ಲೇ ಉತ್ತರಿಸಿದರೆ
ನಿನ್ನ ನಗುವ ಒಗಟ ಹೇಗೆ ಬಿಡಿಸಲಿ ತಿಳಿಸು ಈಗಲಾದರು...
ನಿನ್ನ ಉಸಿರೊಡನೆ ಉಸಿರಾಗಿ ಬೆರೆತುಹೋದ ಈ ಜೀವನ
ನೀನಿರದ ಕಲ್ಪನೆಯು ನನಗಿಲ್ಲ ಗೆಳತಿ...

ಹುಚ್ಚು ಕಲ್ಪನೆಯದು ನಿನ್ನಲ್ಲೇ ಬೆರೆಯಲೆಂದು ಅಚ್ಚು ಒತ್ತಿದ ಹೃದಯ ಬೆಚ್ಚಿ ಹೆದರಿದೆ ಗೆಳತಿ...
ಕಚ್ಚಿದ ಕೆನ್ನೆಯ ಗುರುತು ಕೆರಳಿ ಅಣಕಿಸುತ್ತಿದೆ ಬಂದೊಮ್ಮೆ ಹೇಳಿ ಬಿಡು ಈ ಜಗಕ್ಕೆ ನಾನೆಂದು ನಿನ್ನವಳು ಎಂದು...!!

ವಿರೇಶಗೌಡ

- VeereshaVeeresha

15 Feb 2020, 03:05 pm

ನೀ ನನ್ನ ಕಣ್ಣಲ್ಲಿ

ನೀ ನನ್ನ ಕಣ್ಣಲ್ಲಿ
ಕಣ್ಣಟ್ಟು ನೋಡಿದರೆ
ಕಾಣುವುದು ನಿನ್ನ ಬಿಂಬ...
ನೀ ಕಣ್ಣೆದುರು ಕಾಣದೇ
ಮರೆಯಾಗಿ ನಿಂತಿರಲು
ಕಂಬನಿಯು ಕಣ್ಣ ತುಂಬ...

- ಪಿ.ಜಿ.ಜ್ಯೋತಿ

15 Feb 2020, 12:26 pm

" ಅರಿವು "

ಪ್ರೇಮರಾಗವ
ಮಿಡಿಸುವ ಮುನ್ನ
ನಿನ್ನ ಗುಣವ ಅರಿತರೆ
ಎನಿತು ಚೆನ್ನ !!

*ಕಿದ್ವಾಯಿ ರಾಜಶೇಖರ್.

- Raj Raj

14 Feb 2020, 08:38 pm

ಕವಿತೆಯು ನಾನು

ಕವಿತೆ ಬರೆಯುವ ಮನಸು ಅದೆಂತ ಸೊಗಸು ಕಾಗದದ ಮೇಲೆ ಗೀಚುವಾಗ.

ಭಾವಗಳ ನುಡಿಯಾಗಿಸಿ ಬರೆಯೋವಾಗ
ಜೊತೆಯದ ಆಸೆಗಳ ಕನಸು.

ಕನಸುಗಳ ಅಮಲಿನಲ್ಲಿ ಮುತ್ತಿನಂತ ಮಾತುಗಳ ವರಿಸೆ ಅದು ಮನಗಳ ಸೆಳೆದವು.

ಸಾಲುಗಳ ಗೀಚುತ.... ಗೀಚುತ....
ಗೆಳೆಯರಾಗಿ ಹೋದೆವು ಕವಿತೆಯು ನಾನು!

ಗೆಳೆತನದ ಆತುರದಲ್ಲಿದ ಮನಸಿಗೆ ಆಪ್ತನಾದ ನೀನು ನನಗೆ ಆಪ್ತಮಿತ್ರ ನಾಗಬೇಕೆಂಬ ಅಪೇಕ್ಷೆ ನನ್ನದು.

ಹೇಳಿಬಿಡುವೇ ನನ್ನ ಮನವ ಕವಿತೆಗಳ ಎರಡು ಸಾಲಿನಲ್ಲಿ ಕೇಳಲು ಬರುವುದೊಂದು ಮನವೇಂದು ಕಾಯದೆ.

ಕಷ್ಟಗಳನ್ನು ಹೇಳಿಬಿಡುವೇ !!
ಖುಷಿಗಳನ್ನು ಹೇಳಿಬಿಡುವೇ !!
ಕವಿತೆಯ ಎರಡು ಸಾಲಿನಲ್ಲಿ

ಕಣೀರ ಒರೆಸಿಕೊಳ್ಳುವೇ !!
ಖುಷಿಯನ್ನು ಹಂಚಿಕೊಳ್ಳುವೇ !!
ಈ ಕವಿತೆಯ ಎರಡು ಸಾಲಿನಲ್ಲಿ

ಭಾವಗಳ ಬೆರೆಸಿ
ಭಾವನೆಗಳ ವರ್ಣಿಸಿ
ಹಾಲುನೀರಾಗಿ ಬೆರೆತುಹೋಗುವೇ
ಈ ಕವಿತೆಯ ಎರಡು ಸಾಲಿನಲ್ಲಿ.

ಕವಿತೆಗಳ ಬರೆಯುವ ಕವಿಯು ನಾನ್ನಲಾ
ಆದರೆ ಭಾವನೆಗಳ ಗೀಚುವ ಒಂದು
ಹುಚ್ಚನಾದೇ ನಾ.

- Kris

14 Feb 2020, 08:59 am

ಗೆಳೆಯನೆಂಬ ಏಕಾಂತ !

ಕಾದು ಕಳೆದಿಹೇ ವರುಷಗಳ
ಒಂದು ಒಳ್ಳೆ ಗೆಳೆಯನ ಹುಡುಕಿ,
ಭಾಗ್ಯಾ ವಂಚಿತನಾದೆ ಸ್ನೇಹಿತರ ಸಂಗತಿಯಲ್ಲಿ,
ಸಿಕ್ಕರು ಸಿಹಿಯಾದ ಸ್ನೇಹಿತರು ದೂರವಾಗಿ ಹೋದರು ನನ್ನಿಂದ.

ಏನು ಹೇಳಲಿ ನಾ ವಿಧಿಯ ವಿರಹ ಒಂದು ವಿಷವಾಗಿ ವದಿಸಿ ಕಾಣದಂತೆ ಹುದುಗಿ ಹೋಹಿತು ಕಾಲವೆಂಬ ಗೋರಿಯಲ್ಲಿ ನನ್ನ ಗೆಳೆತನ.

ಕಾದು ಕಾಲಗಳು ಉರುಳಿದವು,
ಮರೆಯಗುತ್ತಿದೆ ನನ್ನ ಯವನವು,
ಮಾಯವಾದವು ನಗುವಿನ ಹೆಜ್ಜೆ ಗುರುತುಗಳು ಅನರ್ಥವಾಯಿತು ನನ್ನ ಮನದ ಭಾವಗಳು
ಬೇಡವಾಗಿ ಹೋಗಿದೆ ಈ ಬಾಳು
ಹರುಷ ತರುವ ಒಬ್ಬ ಗೆಳೆಯನಿಲ್ಲದೆ.


ನೀರಮೇಲಿನ ಬರಹದಂತಾಗಿದೇ ನನ್ನ ನಂಬಿಕೆಗಳು ಸೊರಗಿ ಸೋತು ಹೋಗಿವೇ ನನ್ನ ಬಣದ ಕನಸುಗಳು ಇಲ್ಲವಾಯಿತೊಂದು ಅವಕಾಶ ಪಶ್ಚತ್ತಾಪ ಪಡಲು ಮಾಡದ ಪಾಪಗಳಿಗೆ.

ಮೌನಗಳು ಹಿತವಾಗಿ ವೇದನೆಗಳು ವಿಷವಾಗಿ ಹೋದವು ನೋವುಗಳೆ ನೆನಪಾಗಿ ಉಳಿದವು
ನನ್ನ ಎದೆಯಲ್ಲಿ ಏಕಾಂತದ ಗುರುತುಗಳೇ
ನನ್ನ ದಾರಿಯಲ್ಲಿ.

ವಿರಸಗಳೇ ಮೋಡವಾಗಿ ವೇದನೆಗಳ ಮಳೆಯೊಂದು ಸುರಿದಿದೇ ನನ್ನ ಬದುಕಿನ ಭೂಮಿಯಲ್ಲಿ.

- Kris

13 Feb 2020, 07:44 pm

4."ಮಿಡಿತ"

ಮಿಡಿ
ಕವನಗಳು
ನನ್ನದು !

ಮಿಡಿಸುವ
ತುಡಿತಗಳು
ನಿಮ್ಮದು !!

*ಕಿದ್ವಾಯಿ ರಾಜಶೇಖರ್.

- Raj Raj

13 Feb 2020, 07:05 pm

!! ಜ್ವಾಲಾಮುಖಿ !!

ಒಲವಿನ
ನನ್ನಾಕೆ
ಅನುರಾಗದ
ಪ್ರೇಮಮುಖಿ !

ಮುನಿದರೆ
ಮನೆಯೆಲ್ಲ
ಕೊಲಾಹಲದ
ಜ್ವಾಲಾಮುಖಿ !!

* ಕಿದ್ವಾಯಿ ರಾಜಶೇಖರ್.

- Raj Raj

13 Feb 2020, 06:54 pm

ಗಾಯನ ನಿಲ್ಲಿಸಿದ ಕೋಗಿಲೆ

ನಿಮ್ಮ ಹೃದಯ ಅಗಸೆ ಬಾಗಿಲನ ಮುಂದೆ ನೆಟ್ಟ ಬೀದಯ ಗೂಟಗಲ್ಲಿನಂತೆ ಏಕಾಯಿತು?
ನಿಮ್ಮ ಹೃದಯವು ಜಲ ಬತ್ತಿ ದ ಬಾವಿಯಂತೆ ಏಕಾಯಿತು?
ನಿಮ್ಮ ಹೃದಯ ಮಳೆ ತರದ ಒಣ ಸಿಡಿಲಿನ ಗುಂಡಿನಂತೆ ಏಕಾಯಿತು?
ನಿಮ್ಮ ಹೃದಯ ಕಟುಕನ ಕೈಯಲ್ಲಿರುವ ಹತಾರದಂತೆ ಏಕಾಯಿತು?
ನಿಮ್ಮ ಹೃದಯ ವಸಂತಕಾಲದಲಿ ಗಾಯನ ನಿಲ್ಲಿಸಿದ ಕೋಗಿಲೆಯ ಕಂಠದಂತೆ ಏಕಾಯಿತು?

- Siddugouda

13 Feb 2020, 03:00 pm

ಅಗ್ನಿಯೆಂಬ ಸಿಂಹಾಸನ

ಎನ್ನ, ಕರ್ಪೂರದ ರಾಜನ ಗೊಂಬೆಯ ಮಾಡಿ
ಅಗ್ನಿಯೆಂಬ ಸಿಂಹಾಸನದ ಮೇಲೆ ಕುಳ್ಳಿರಿಸಿದರಯ್ಯ
ಅಗ್ನಿಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನಯ್ಯ

ಎನ್ನ, ಮಂಜುಗಡ್ಡೆಯ ಗೊಂಬೆ ಮಾಡಿ
ಮಂಜುಗಡ್ಡೆಯ ಹರಗೋಲಲಿ ಕುಳ್ಳಿರಿಸಿ ತಳ್ಳಿದರಯ್ಯ
ಸಮುದ್ರದ ನೀರನ ಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನೆಯ್ಯ

ಎನ್ನ, ಗಾಳಿ ಗೋಪುರವ ಮಾಡಿ
ಗಾಳಿಯ ಸುಳಿಯೊಳಗೆ ತೂರಿ ಬಿಟ್ಟರಯ್ಯ
ಗಾಳಿಯ ಸ್ಪರ್ಶದಿಂದ ಶೂನ್ಯದಲ್ಲಿ ಲೀನವಾಗಿ ಅಡಗಿದೆನಯ್ಯ

ಶೂನ್ಯದ ಶೂನ್ಯ ಪೀಠದ ಅಧಿಪತಿ ಗುರು ಬಸವ ಪ್ರಿಯ ರೇವಣದಿದ್ದೇಶ್ವರ ನೀವಿರುವಾಗ ನಾ ನಿಶ್ಚಿಂತಿಗೊಂಡೆನಯ್ಯ.


ಕೃಪೆ: ಎಲ್ಲ ಶರಣರು.

- Siddugouda

13 Feb 2020, 02:18 pm